ಟೋಕಿಯೊ ಮಾರ್ಕೆಟ್‌ನಲ್ಲಿ ಶಾಪಿಂಗ್ ಫೆಸ್ಟಿವಲ್ ಉದ್ಘಾಟನೆ

ಮಂಗಳೂರು, ಎ.1: ನಗರದ ಜಿ.ಎಚ್.ಎಸ್ ರಸ್ತೆಯ ಲ್ಲಿರುವ ಟೋಕಿಯೊ ಮಾರ್ಕೆಟ್ ಶಾಪಿಂಗ್ ಕೇಂದ್ರ ನವೀಕೃತಗೊಂಡಿದ್ದು, ಇದರಂಗವಾಗಿ ಹಮ್ಮಿಕೊಂಡಿರುವ ‘ಗ್ರಾಂಡ್ ಶಾಪಿಂಗ್ ಫೆಸ್ಟಿವಲ್-2017’ ಶುಕ್ರವಾರ ಉದ್ಘಾಟನೆ ಗೊಂಡಿತು.
ಫೆಸ್ಟಿವಲ್ ಅನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಟೋಕಿಯೊ ಮಾರ್ಕೆಟ್ ಪ್ರಾರಂಭಿಸಿ ಯುವಕರಿಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟ ಸಿದ್ದೀಕ್‌ರನ್ನು ಅಭಿನಂದಿಸಿದರು. ಟೋಕಿಯೊ ಮಾರ್ಕೆಟ್ ಜಿಲ್ಲೆಯಲ್ಲೇ ಅತ್ಯುತ್ತಮ ಶಾಪಿಂಗ್ ಕೇಂದ್ರವಾಗಿ ಬೆಳೆಯಲಿ ಎಂದು ಹಾರೈಸಿದರು.
ಅಲ್ಹಾಜ್ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ದುಆ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಬ್ಯಾರೀಸ್ ಚೇಂಬರ್ ಆಫ್ ಕಾರ್ಮಸ್ ಇಂಡಸ್ಟ್ರಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ಟೋಕಿಯೊ ಮಾರ್ಕೆಟ್‌ನ ಮಾಲಕ ಸಿದ್ದೀಕ್, ಮ್ಯಾನೇಜರ್ ಅಬ್ದುಲ್ಲಾ, ಅಸೋಸಿಯೇಶನ್‌ನ ಅಧ್ಯಕ್ಷ ಟಾಪ್ ಚೋಯ್ಸಾನ ಬಶೀರ್, ಕಾರ್ಯದರ್ಶಿ ಬುರ್ಖಾ ಫ್ಯಾಶನ್ ರಿಯಾಝ್, ಖಜಾಂಚಿ ಕಾಶಿಶ್ ಫ್ಯಾನ್ಸಿಯ ಹೈದರಲಿ, ಟೀಮ್ ಲೀಡರ್ ಬ್ಲೂ ಜೀನ್ಸ್‌ನ ನಸೀರ್ ಹಾಗೂ ಟೋಕಿಯೊ ಮಾರ್ಕೆಟ್ ಶಾಪ್‌ಗಳ ಮಾಲಕರು ಉಪಸ್ಥಿತರಿದ್ದರು.
1999ರಲ್ಲಿ ನಗರದ ಹೃದಯಭಾಗದಲ್ಲಿ ಕಾರ್ಯಾರಂಭಗೊಂಡು ಹೆಸರುವಾಸಿಯಾಗಿರುವ ಟೋಕಿಯೊ ಮಾರ್ಕೆಟ್ ಇದೀಗ ಅತ್ಯಾಧುನಿಕವಾಗಿ ನವೀಕೃತಗೊಂಡಿದೆ. ಇದರಂಗವಾಗಿ ಹಮ್ಮಿಕೊಂಡಿರುವ ‘ಗ್ರಾಂಡ್ ಶಾಪಿಂಗ್ ಫೆೆಸ್ಟಿವಲ್-2017’ನಲ್ಲಿ ಗ್ರಾಹಕರಿಗೆ ಅದೃಷ್ಟ ಬಂಪರ್ ಬಹುಮಾನವಾಗಿ ಹುಂಡೈ ಇವೋನ್ ಕಾರು ಗೆಲ್ಲುವ ಅವಕಾಶವಿದೆ.







