ಇಂದು ಅಲೇಕಳದಲ್ಲಿ ಸಲಫಿ ಸಮಾವೇಶ
ಮಂಗಳೂರು, ಎ.2: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಹಮ್ಮಿಕೊಂಡಿರುವ ಕುರ್‌ಆನ್ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ಎಸ್.ಕೆ.ಎಸ್.ಎಂ. ಯೂತ್ ವಿಂಗ್ ವತಿಯಿಂದ ಎ.2ರಂದು ಮಗ್ರಿಬ್ ನಮಾಝ್ ಬಳಿಕ ಉಳ್ಳಾಲ ಅಲೇಕಳದ ಅಲ್ ಫುರ್ಖಾನ್ ಮಸೀದಿ ವಠಾರದಲ್ಲಿ ಸಲಫಿ ಸಮಾವೇಶವು ಜರಗಲಿದೆ.
ಸಮಾವೇಶದಲ್ಲಿ ಮೌಲವಿ ಮುಜೀಬ್ ತಚ್ಚಂಬಾರ ಮತ್ತು ಮೌಲವಿ ಮುಹಮ್ಮದ್‌ಮುಸ್ತಫಾ ದಾರಿಮಿ ಉಪನ್ಯಾಸ ನೀಡುವರು. ಬಿ.ಎಚ್.ಫಾರೂಕ್ ಅಧ್ಯಕ್ಷತೆ ವಹಿಸುವರು. ಎಸ್.ಕೆ.ಎಸ್.ಎಂ. ಕೇಂದ್ರ ಸಮಿತಿಯ ಅಧ್ಯಕ್ಷ ಯು.ಎನ್.ಅಬ್ದುಲ್ ರಝಾಕ್ ಮತ್ತು ಎಸ್.ಕೆ.ಎಸ್.ಎಂ. ಯೂತ್ ವಿಂಗ್ ಅಧ್ಯಕ್ಷ ಶಿಹಾಬ್ ತಲಪಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story





