ಅಪಘಾತ ಎಸಗಿ ಪರಾರಿಯಾಗಲೆತ್ನಿಸಿದ ಲಾರಿಯನ್ನು ಬೆನ್ನಟ್ಟಿ ಹಿಡಿದ ಸಂಚಾರ ನಿಯಂತ್ರಕ

ಮಂಗಳೂರು, ಎ.2: ಸದಾ ತನ್ನ ಕಾರ್ಯ ಚಟುವಟಿಕೆಯಿಂದ ಗುರುತಿಸಿಕೊಳ್ಳುವ ಸಂಚಾರ ನಿಯಂತ್ರಕ ಬಾಬು ಶೆಟ್ಟಿ ಇಂದು ಬೆಳಗ್ಗೆ ಮತ್ತೊಮ್ಮೆ ತನ್ನ ಕಾರ್ಯತತ್ಪರತೆ ಮೆರೆದರು. ಇಂದು ಬೆಳಗ್ಗೆ 8:35ರ ಸುಮಾರಿಗೆ ನಂತೂರು ವೃತ್ತದ ಬಳಿ ಬೃಹತ್ ಸರಕು ಸಾಗಾಟದ ಲಾರಿಯೊಂದು ಟ್ರಾಫಿಕ್ ಸಿಗ್ನಲ್ ಕಂಬಕ್ಕೆ ಢಿಕ್ಕಿ ಹೊಡೆದು ಹಾನಿಗೊಳಿಸಿದೆ. ಘಟನೆಯ ಬಳಿಕ ಚಾಲಕ ಲಾರಿಯನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ತಕ್ಷಣ ಕಾರ್ಯಪ್ರವೃತ್ತರಾದ ಸಂಚಾರ ನಿಯಂತ್ರಕ ಬಾಬು ಶೆಟ್ಟಿ ಲಾರಿಯನ್ನು ಬೆನ್ನಟ್ಟಿ ತಡೆಯುವಲ್ಲಿ ಯಶಸ್ವಿಯಾದರು. ಬಳಿಕ ಲಾರಿ ಹತ್ತಿ, ಚಾಲಕನನ್ನು ತರಾಟೆಗೆ ತೆಗೆದುಕೊಂಡರಲ್ಲದೆ ಲಾರಿಯನ್ನು ಕದ್ರಿ ಠಾಣೆಗೆ ಕೊಂಡೊಯ್ದರು. ಬಾಬು ಶೆಟ್ಟಿಯವರ ಲವಲವಿಕೆಯ ಕಾರ್ಯ ಸಾರ್ವನಿಕರ ಶ್ಲಾಘನೆಗೆ ಪಾತ್ರವಾಯಿತು.
Next Story





