ದಿಲ್ಲಿಯಲ್ಲಿ ದಾಖಲೆ ಉಷ್ಣಾಂಶ

ಹೊಸದಿಲ್ಲಿ, ಎ.2: ದಿಲ್ಲಿಯಲ್ಲಿ ಬೆಳಗ್ಗಿನ ಅವಧಿಯಲ್ಲಿ ಈ ವರ್ಷದಲ್ಲೇ ಗರಿಷ್ಠ ಉಷ್ಣಾಂಶ ದಾಖಲಾಗುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ.
ರವಿವಾರ ಬೆಳಗ್ಗೆ ಕನಿಷ್ಠ 23.9 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ಸಾಮಾನ್ಯಗಿಂತ 5 ಪಟ್ಟು ಹೆಚ್ಚಿನ ಉಷ್ಣಾಂಶವಾಗಿದ್ದು, ದಿಲ್ಲಿಯಲ್ಲಿ ಬೆಳಗ್ಗೆಯೇ ಬಿಸಿಲ ತಾಪ ಏರಲಾರಂಭಿಸಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ದಿನದ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಶಿಯಸ್‌ನಷ್ಟಿರುತ್ತದೆ. ಎ.4ರ ಬಳಿಕ ಉಷ್ಣಾಂಶದ ಮಟ್ಟದಲ್ಲಿ ಇಳಿಕೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
Next Story