ಹೆದ್ದಾರಿ ಮದ್ಯ ನಿಷೇಧದಿಂದ 10 ಲಕ್ಷ ಉದ್ಯೋಗಗಳಿಗೆ ಕುತ್ತು
ನೀತಿ ಆಯೋಗದ ಮುಖ್ಯಸ್ಥ ಅಮಿತಾಭ್ ಕಾಂತ್

ಹೊಸದಿಲ್ಲಿ,ಎ.2: ಹೆದ್ದಾರಿಗಳಿಂದ 500 ಮೀ.ಅಂತರದೊಳಗೆ ಮತ್ತು 20,000ಕ್ಕೂ ಕಡಿಮೆ ಜನಸಂಖ್ಯೆಯ ಪ್ರದೇಶಗಳಲ್ಲಿ 220 ಮೀ.ಅಂತರದೊಳಗೆ ಮದ್ಯದಂಗಡಿಗಳನ್ನು ನಿಷೇಧಿಸಿರುವ ಸರ್ವೋಚ್ಚ ನ್ಯಾಯಾಲಯದ ಆದೇಶದ ಬಗ್ಗೆ ನೀತಿ ಆಯೋಗದ ಮುಖ್ಯಸ್ಥ ಅಮಿತಾಭ್ ಕಾಂತ್ ಅವರು ಟ್ವಿಟರ್ ಮೂಲಕ ಅಸಮಾಧಾನವನ್ನು ತೋಡಿಕೊಂಡಿದ್ದಾರೆ.
ಮದ್ಯಪಾನ ಮಾಡಿ ಚಾಲನೆ ಮತ್ತು ಅದರಿಂದ ವಾಹನ ಅಪಘಾತಗಳಿಗೆ ಅಂಕುಶ ಹಾಕಲು ಸರ್ವೋಚ್ಚ ನ್ಯಾಯಾಲಯವು ಹೊರಡಿಸಿರುವ ಆದೇಶದಿಂದ ಪಶ್ಚಿಮ ಭಾರತವೊಂದರಲ್ಲೇ ಸುಮಾರು 35,000 ಮದ್ಯದಂಗಡಿಗಳು ಬಾಗಿಲೆಳೆದುಕೊಳ್ಳುತ್ತಿವೆ.
‘‘ಪ್ರವಾಸೋದ್ಯಮವು ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಅದನ್ನೇಕೆ ಕೊಲ್ಲುತ್ತೀರಿ? ಸರ್ವೋಚ್ಚ ನ್ಯಾಯಾಲಯದ ಹೆದ್ದಾರಿ ಮದ್ಯ ನಿಷೇಧವು 10 ಲಕ್ಷ ಉದ್ಯೋಗಗಳಿಗೆ ಕುತ್ತು ತರಬಹುದು ’’ಎಂದು ಕಾಂತ್ ಟ್ವೀಟಿಸಿದ್ದಾರೆ.
Next Story