ಪಾಯದ ಮಣ್ಣಿನಲ್ಲಿ ಮೃತ ದೇಹ ಪತ್ತೆ
ಬೆಂಗಳೂರು, ಎ.2: ವ್ಯಕ್ತಿಯೊಬ್ಬನನ್ನು ಕೊಲೆಗೈದು ಪಾಯದ ಮಣ್ಣಿನಲ್ಲಿ ಶವವನ್ನು ಹೂತುಹಾಕಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಇಲ್ಲಿನ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ನಗರದ ಮೀನಾಕ್ಷಿ ದೇವಾಲಯ ಸಮೀಪ ಕಟ್ಟಡ ನಿರ್ಮಾಣದ ಪಾಯ ತೆಗೆದಿದ್ದು, ಶನಿವಾರ ಸಂಜೆ ಅಗೆದ ಮಣ್ಣನ್ನು ಗುಂಡಿಗೆ ತುಂಬುವಾಗ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ.
ಸುಮಾರು 25ರಿಂದ 30 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಶವವನ್ನು ತಂದು ಪಾಯದ ಮಣ್ಣಲ್ಲಿ ಹೂತು ಪರಾರಿಯಾಗಿದ್ದಾರೆ. ಈ ಬಗ್ಗೆ ಘಟನ ಸ್ಥಳಕ್ಕೆ ಬಂದ ತಹಶೀಲ್ದಾರ್ ಸಮಕ್ಷಮದಲ್ಲಿ ಶವವನ್ನು ಹೊರ ತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ನಗರದ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ರಕರಣ ಸಂಬಂಧ ಪುಟ್ಟೇನಹಳ್ಳಿ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.
Next Story





