ಚೀನಾ: ವಸತಿ ಸಂಕೀರ್ಣದಲ್ಲಿ ಸ್ಫೋಟ; 9 ಸಾವು

ಬೀಜಿಂಗ್, ಎ. 2: ಉತ್ತರ ಚೀನಾದ ಶಾಂಕ್ಸಿ ಪ್ರಾಂತದಲ್ಲಿ ಶನಿವಾರ ಸಂಜೆ ನಡೆದ ಸ್ಫೋಟವೊಂದರಲ್ಲಿ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಹಾಗು ಆರು ಮಂದಿ ಗಾಯಗೊಂಡಿದ್ದಾರೆ ಎಂದು ಸರಕಾರಿ ಸುದ್ದಿ ಸಂಸ್ಥೆ ಕ್ಸಿನುವಾ ವರದಿ ಮಾಡಿದೆ.
ವಸತಿ ಸಂಕೀರ್ಣವೊಂದರಲ್ಲಿ ಸ್ಫೋಟ ಸಂಭವಿಸಿದೆ. ಅಕ್ರಮವಾಗಿ ದಾಸ್ತಾನಿರಿಸಲಾದ ಸ್ಫೋಟಕಗಳು ಸ್ಫೋಟಿಸಿರಬೇಕೆಂದು ಭಾವಿಸಲಾಗಿದೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.
ಹಲವಾರು ಕಟ್ಟಡಗಳು ಕುಸಿದಿವೆ ಹಾಗೂ ರವಿವಾರ ಮಧ್ಯಾಹ್ನದವರೆಗೂ ಶೋಧ ಮತ್ತು ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ಸರಕಾರಿ ಟಿವಿ ಸಿಸಿಟಿವಿ ವರದಿ ಮಾಡಿದೆ.
Next Story





