ಐಪಿಎಲ್-10: ಭರವಸೆ ಮೂಡಿಸಿರುವ ಐವರು ಹೊಸ ಆಟಗಾರರು

ಹೊಸದಿಲ್ಲಿ, ಎ.2: ಹತ್ತನೆಯ ಆವೃತ್ತಿಯ ಐಪಿಎಲ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ನಿರೀಕ್ಷೆಯ ಭಾರ ಹೊತ್ತಿರುವ ದೇಶೀಯ ಕ್ರಿಕೆಟ್‌ನ ಐವರು ಹೊಸ ಆಟಗಾರರ ಸಾಧನೆಯ ಪರಿಚಯ ಇಲ್ಲಿದೆ...
*ಟಿ. ನಟರಾಜನ್(ಕಿಂಗ್ಸ್ ಇಲೆವೆನ್ ಪಂಜಾಬ್): ಎಡಗೈ ವೇಗದ ಬೌಲರ್ ನಟರಾಜನ್ 2016ರ ತಮಿಳುನಾಡು ಪ್ರೀಮಿಯರ್ ಲೀಗ್‌ನ ದಿಂಡಿಗಲ್ ಡ್ರಾಗನ್ಸ್ ಪರ 7 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಬೆಳಕಿಗೆ ಬಂದಿದ್ದರು. ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ನೀಡಿರುವ ಶ್ರೇಷ್ಠ ಪ್ರದರ್ಶನದ ಆಧಾರದಲ್ಲಿ ತಮಿಳುನಾಡಿನ ರಣಜಿ ತಂಡಕ್ಕೆ ಆಯ್ಕೆಯಾಗಿದ್ದರು. ಚೊಚ್ಚಲ ರಣಜಿಯಲ್ಲಿ ಆಡಿರುವ 9 ಪಂದ್ಯಗಳಲ್ಲಿ 27 ವಿಕೆಟ್‌ಗಳನ್ನು ಪಡೆದು ಗಮನ ಸೆಳೆದಿದ್ದರು. ತಮಿಳುನಾಡಿನ ಟ್ವೆಂಟಿ-20 ತಂಡದಲ್ಲಿ ಸ್ಥಾನ ಪಡೆದ ನಟರಾಜನ್ 5 ಪಂದ್ಯಗಳಲ್ಲಿ 4 ವಿಕೆಟ್‌ಗಳನ್ನು ಪಡೆದಿದ್ದರು.
*ಮುಹಮ್ಮದ್ ಸಿರಾಜ್(ಸನ್‌ರೈಸರ್ಸ್ ಹೈದರಾಬಾದ್)
22ರ ಹರೆಯದ ಹೈದರಾಬಾದ್‌ನ ವೇಗದ ಬೌಲರ್ ಮುಹಮ್ಮದ್ ಸಿರಾಜ್ ರಣಜಿ ಟ್ರೋಫಿ(41 ವಿಕೆಟ್) ಹಾಗೂ ಅಂತರ್-ರಾಜ್ಯ ಟ್ವೆಂಟಿ-20 ಟೂರ್ನಮೆಂಟ್‌ನಲ್ಲಿ(9 ವಿಕೆಟ್)ನೀಡಿರುವ ಅಮೋಘ ಪ್ರದರ್ಶನವನ್ನು ಆಧರಿಸಿ ಐಪಿಎಲ್‌ನಲ್ಲಿ ತವರು ಫ್ರಾಂಚೈಸಿಗೆ ಆಯ್ಕೆಯಾಗಿದ್ದಾರೆ. 20 ಲಕ್ಷ ರೂ.ಮೂಲ ಬೆಲೆ ಹೊಂದಿದ್ದ ಸಿರಾಜ್ ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಬಳಿಕ ತಂಡದ ಎರಡನೆ ದುಬಾರಿ ಬೌಲರ್ ಆಗಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಸಿರಾಜ್ ಇಂಗ್ಲೆಂಡ್‌ನ ಕ್ರಿಸ್ ಜೋರ್ಡನ್, ಆಸ್ಟ್ರೇಲಿಯದ ಬೆನ ಲಾಫ್‌ಲಿನ್, ಭುವನೇಶ್ವರ ಕುಮಾರ್,ಸಿದ್ದಾರ್ಥ್ ಕೌಲ್, ಆಶೀಷ್ ನೆಹ್ರಾ,ಮುಸ್ತಫಿಝುರ್ರಹ್ಮಾನ್ ಹಾಗೂ ಬರಿಂದರ್ ಸ್ರಾನ್‌ರೊಂದಿಗೆ ಆಡುವ ಅಪೂರ್ವ ಅವಕಾಶ ಪಡೆದಿದ್ದಾರೆ.
ಕೆ.ಗೌತಮ್(ಮುಂಬೈ ಇಂಡಿಯನ್ಸ್:
ಕರ್ನಾಟಕದ ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ ರಣಜಿ ಟ್ರೋಫಿಯಲ್ಲಿ 8 ಪಂದ್ಯಗಳಲ್ಲಿ 27 ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದಿದ್ದರು. 108 ರನ್‌ಗೆ 7 ವಿಕೆಟ್ ಜೀವನಶ್ರೇಷ್ಠ ಸಾಧನೆಯಾಗಿದೆ. ಗೌತಮ್ ಅವರ ಶ್ರೇಷ್ಠ ಪ್ರದರ್ಶನದಿಂದ ಕರ್ನಾಟಕ ಕ್ವಾರ್ಟರ್‌ಫೈನಲ್‌ಗೆ ತಲುಪಿತ್ತು. ಆದರೆ, ತಮಿಳುನಾಡಿನ ವಿರುದ್ಧ ಸೋತಿತ್ತು. ಮುಂಬೈನಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿದ್ದ ಗೌತಮ್ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕದ ಪರ 5 ಪಂದ್ಯಗಳಲ್ಲಿ 5 ವಿಕೆಟ್‌ಗಳನ್ನು ಪಡೆದಿದ್ದರು. 20 ಟ್ವೆಂಟಿ-20 ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಪಡೆದಿರುವ ಗೌತಮ್ 19 ರನ್‌ಗೆ 4 ವಿಕೆಟ್ ಶ್ರೇಷ್ಠ ಸಾಧನೆಯಾಗಿದೆ.
*ಅಂಕಿತ್ ಚೌಧರಿ(ರಾಯಲ್ ಚಾಲೆಂಜರ್ಸ್ ಬೆಂಗಳೂರು)
ರಾಜಸ್ಥಾನದ 27ರ ಹರೆಯದ ವೇಗದ ಬೌಲರ್ ಅಂಕಿತ್ ಚೌಧರಿ ಮೂಲಬೆಲೆ 10 ಲಕ್ಷ ರೂ. ಆರ್‌ಸಿಬಿ ತಂಡದ ಪಾಲಾಗಿದ್ದಾರೆ. ರಣಜಿ ಟ್ರೋಫಿಯಲ್ಲಿ ರಾಜಸ್ಥಾನದ ಪರ 21 ವಿಕೆಟ್‌ಗಳನ್ನು ಪಡೆದಿರುವ ಚೌಧರಿ ಸೈಯದ್ ಮುಷ್ತಾಕ್ ಅಲಿ ಟೂರ್ನಿಯ 3 ಪಂದ್ಯಗಳಲ್ಲಿ 5 ವಿಕೆಟ್‌ಗಳನ್ನು ಪಡೆದಿದ್ದರು. ಬಾಂಗ್ಲಾದೇಶದ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಭಾರತ ಎ ತಂಡದ ಪರ ಆಡಿದ್ದ ಅಂಕಿತ್ 26 ರನ್‌ಗೆ 4 ವಿಕೆಟ್‌ಗಳನ್ನು ಸಂಪಾದಿಸಿದ್ದರು. ಅಂತರ್-ರಾಜ್ಯ ಟ್ವೆಂಟಿ-20 ಟೂರ್ನಮೆಂಟ್‌ನ 4 ಪಂದ್ಯಗಳಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದ್ದರು.
*ಮುರುಗನ್ ಅಶ್ವಿನ್(ಡೆಲ್ಲಿ ಡೇರ್ ಡೆವಿಲ್ಸ್)
2016ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಮುರುಗನ್ ಅಶ್ವಿನ್ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡಕ್ಕೆ 4.5 ಕೋ.ರೂ.ಗೆ ಹರಾಜಾಗಿದ್ದರು. ಕಳೆದ ವರ್ಷ 28.5 ಓವರ್‌ಗಳಲ್ಲಿ ಕೇವಲ 7 ವಿಕೆಟ್‌ಗಳನ್ನು ಕಬಳಿಸಿ ನಿರಾಶಾದಾಯಕ ಪ್ರದರ್ಶನ ನೀಡಿದ್ದರು. ಈ ವರ್ಷ ಪುಣೆ ತಂಡ ಅಶ್ವಿನ್‌ರನ್ನು ತಂಡದಿಂದ ಬಿಡುಗಡೆಗೊಳಿಸಿತ್ತು. 26ರ ಹರೆಯದ ಅಶ್ವಿನ್ ಇತ್ತೀಚೆಗೆ ಕೊನೆಗೊಂಡಿದ್ದ ಅಂತರ್-ರಾಜ್ಯ ಟ್ವೆಂಟಿ-20 ಟೂರ್ನಿಯಲ್ಲಿ 5 ಪಂದ್ಯಗಳಲ್ಲಿ 6 ವಿಕೆಟ್‌ಗಳನ್ನು ಪಡೆದಿದ್ದರು. 2016ರ ತಮಿಳುನಾಡು ಸೂಪರ್ ಲೀಗ್‌ನಲ್ಲಿ ದಿಂಡಿಗಲ್‌ನ ಪರ 8 ಪಂದ್ಯಗಳಲ್ಲಿ ಆಡಿದ್ದ ಅವರು ಒಟ್ಟು 13 ವಿಕೆಟ್‌ಗಳನ್ನು ಕಬಳಿಸಿದ್ದರು.







