Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಜಿಲ್ಲಾಧಿಕಾರಿ ಸಹಿತ ಆರು ಮಂದಿಯ ಕೊಲೆ...

ಜಿಲ್ಲಾಧಿಕಾರಿ ಸಹಿತ ಆರು ಮಂದಿಯ ಕೊಲೆ ಯತ್ನ: ವಿಎ ಸಹಿತ ಮೂವರಿಗೆ ಗಾಯ; 13ಮಂದಿಯ ಬಂಧನ

ಕಂಡ್ಲೂರಿನಲ್ಲಿ ಮರಳು ಮಾಫಿಯಾದಿಂದ ದಾಳಿ

ವಾರ್ತಾಭಾರತಿವಾರ್ತಾಭಾರತಿ3 April 2017 8:41 AM IST
share
ಜಿಲ್ಲಾಧಿಕಾರಿ ಸಹಿತ ಆರು ಮಂದಿಯ ಕೊಲೆ ಯತ್ನ: ವಿಎ ಸಹಿತ ಮೂವರಿಗೆ ಗಾಯ; 13ಮಂದಿಯ ಬಂಧನ

ಉಡುಪಿ, ಎ.3: ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಂಡ್ಲೂರು ಎಂಬಲ್ಲಿ ಎ.2ರಂದು ರಾತ್ರಿ 11:15ರ ಸುಮಾರಿಗೆ ಅಕ್ರಮ ಮರಳುಗಾರಿಕೆ ಪರಿಶೀಲಿಸಲು ತೆರಳಿದ್ದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕುಂದಾಪುರ ಉಪವಿಭಾಗ ದಂಡಾಧಿಕಾರಿ ಶಿಲ್ಪಾ ನಾಗ್ ಸಹಿತ ಆರು ಮಂದಿ ತಂಡದ ಮೇಲೆ ಸ್ಥಳೀಯ ಸುಮಾರು 50 ಮಂದಿಯ ಗುಂಪು ದಾಳಿ ನಡೆಸಿ ಕೊಲೆಗೆ ಪ್ರಯತ್ನಿಸಿದ ಕಳವಳಕರ, ಆಘಾತಕಾರಿ ಘಟನೆ ನಡೆದಿದೆ.

ಹಳ್ನಾಡು ಮತ್ತು ಕಂಡ್ಲೂರಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಕುರಿತು ಹಲವು ದಿನಗಳಿಂದ ಬರುತ್ತಿದ್ದ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಕುಂದಾಪುರ ಎಸಿ ನೇತೃತ್ವದ ತಂಡ ರಜಾದಿನವಾದ ರವಿವಾರ ರಾತ್ರಿ ವೇಳೆ ಈ ಧಿಡೀರ್ ಕಾರ್ಯಾಚರಣೆಗೆ ಇಳಿದಿತ್ತು. ಮೊದಲು ಹಳ್ನಾಡ್‌ಗೆ ದಾಳಿ ನಡೆಸಿದ ತಂಡ ಮರಳುಗಾರಿಕೆಯಲ್ಲಿ ತೊಡಗಿದ್ದ ಉತ್ತರ ಪ್ರದೇಶ ರಾಜ್ಯದ ಕಾರ್ಮಿಕರಾದ ಪ್ರಮೋದ್(20), ಹರಿಶಂಕರ್(28), ರಾಕೇಶ್(32), ಮಣಿರಾಮ್(26), ದೀಪು ಕುಮಾರ್(20), ಶಫೀಕ್(25) ಎಂಬವರನ್ನುವಶಕ್ಕೆ ತೆಗೆದುಕೊಂಡು ಕುಂದಾಪುರ ಪೊಲೀಸ್ ಠಾಣೆಗೆ ಒಪ್ಪಿಸಿತ್ತು.

ನಂತರ ರಾತ್ರಿ 11ಗಂಟೆಗೆ ಕಂಡ್ಲೂರು ಮರಳುಗಾರಿಕೆ ಪ್ರದೇಶಕ್ಕೆ ಪರಿಶೀಲನೆ ನಡೆಸಲು ಹೋದ ಡಿಸಿ ತಂಡದ ಮೇಲೆ ಸ್ಥಳೀಯರ ಸುಮಾರು 50ಮಂದಿಯ ಗುಂಪು ದಾಳಿ ನಡೆಸಿ, ಹಲ್ಲೆಗೈದು ಕೊಲೆಗೆ ಯತ್ನಿಸಿತು. ಇದರಲ್ಲಿ ಅಂಪಾರು ಗ್ರಾಮ ಲೆಕ್ಕಾಧಿಕಾರಿ ಕಾಂತರಾಜು, ಡಿಸಿ ಗನ್‌ಮ್ಯಾನ್ ಪೃಥ್ವಿರಾಜ್ ಜೋಗಿ, ಚಾಲಕರು ಗಾಯಗೊಂಡಿದ್ದಾರೆ ಮತ್ತು ಎರಡು ಕಾರು ಜಖಂಗೊಂಡಿವೆ. ಎಸಿ ಪತಿ ಶಂಕರಲಿಂಗ ಅವರಿಗೂ ಥಳಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿ ಸಿದಂತೆ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.

ಘಟನೆಯ ಬಗ್ಗೆ ಡಿಸಿ ಹೇಳಿಕೆ: ಱನಾನು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಪ್ರತಿ ದಿನ ನನಗೆ ಮತ್ತು ಕುಂದಾಪುರ ಎಸಿಗೆ ಅಕ್ರಮ ಮರಳುಗಾರಿಕೆ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದವು. ಅದಕ್ಕಾಗಿ ನಾವು ಎರಡು ಸಂಚಾರಿ ಪಡೆಯನ್ನು ರಚಿಸಿ, ಶಿರೂರು ಮತ್ತು ಹೊಸಂಗಡಿ ಯಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿದ್ದೆವು. ಆದರೂ ಕೂಡ ಮರಳುಗಾರಿಕೆ ರಾಜರೋಷವಾಗಿ ನಡೆಯುತ್ತಿದೆ ಎಂದು ದೂರುಗಳು ಬರುತ್ತಿದ್ದವು.

ಸ್ವತಃ ನೀವೇ ಸ್ಥಳಕ್ಕೆ ಭೇಟಿ ನೀಡಿ ಕ್ರಮಕೈಗೊಳ್ಳುವಂತೆಯೂ ಸಾರ್ವಜನಿಕರು ಒತ್ತಾಯಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ರಜಾದಿನವಾದ ರವಿವಾರವನ್ನು ಆಯ್ಕೆ ಮಾಡಿ ಹಠಾತ್ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಯಿತು. ನಾನು ಜಿಪಂ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿರುವುದರಿಂದ ಜಿಪಂನ ಹೊರಗುತ್ತಿಗೆ ವಾಹನದಲ್ಲಿ ಅದರ ಚಾಲಕ, ನನ್ನ ಗನ್‌ಮ್ಯಾನ್ ಹಾಗೂ ಎಸಿಯವರ ಖಾಸಗಿ ಕಾರಿನಲ್ಲಿ ಎಸಿ, ಅವರ ಪತಿ ಮತ್ತು ಚಾಲಕ ಒಟ್ಟು ಆರು ಮಂದಿ ಸ್ಥಳ ಪರಿಶೀಲನೆಗೆ ರಾತ್ರಿ 10:30ರ ಸುಮಾರಿಗೆ ತೆರಳಿದ್ದೆವು.

ಮೊದಲು ನಾವು ಹಳ್ನಾಡ್ ಪ್ರದೇಶಕ್ಕೆ ಹೋದೆವು. ದಾರಿಯಲ್ಲಿ ಹಲವು ಮಂದಿ ಬೈಕ್ ಮತ್ತು ಇತರೆ ವಾಹನಗಳಲ್ಲಿ ನಮ್ಮನ್ನು ಹಿಂಬಾಲಿಸುತ್ತಿದ್ದರು. ಅವರ ಭಾವಚಿತ್ರವನ್ನು ಮೊಬೈಲ್ನಲ್ಲಿ ತೆಗೆದಿದ್ದೇವೆ. ನಂತರ ಹಳ್ನಾಡು ನದಿ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ನಡೆಯುವ ಬಗ್ಗೆ ಪರೀಶಿಲಿಸಿ, ಅಲ್ಲಿ ಶೆಡ್‌ಗಳನ್ನು ನಿರ್ಮಿಸಿ ಅಕ್ರಮ ಮರಳುಗಾರಿಕೆ ನಡೆಸಿ ಮರಳು ದಾಸ್ತಾನು ಇರಿಸಿರುವುದು ಕಂಡು ಬಂತು. ಅಲ್ಲಿ ಆರು ಮಂದಿ ಉತ್ತರ ಭಾರತದ ಕಾರ್ಮಿಕರು, ಎರಡು ಮೊಬೈಲು ಮತ್ತು ದಾರಿಯಲ್ಲಿ ಅನುಮಾನಾಸ್ಪದವಾಗಿ ದೊರೆತ ಎರಡು ವಾಹನಗಳ ಕೀಗಳನ್ನು ವಶಕ್ಕೆ ಪಡೆದು ಕುಂದಾಪುರ ಠಾಣೆಗೆ ತಂದು ಕುಂದಾಪುರ ತಹಶೀಲ್ದಾರ್ ಜಿ.ಎಂ ಬೋರ್ಕರ್ ಮೂಲಕ ಮುಂದಿನ ಕ್ರಮಕ್ಕಾಗಿ ಒಪ್ಪಿಸಿದೆವು.

ಮುಂದಿನ ದಾಳಿ ಕಂಡ್ಲೂರು:

ತರ ಕಂಡ್ಲೂರು ಅಕ್ರಮ ಮರಳುಗಾ ರಿಕೆ ನಡೆಯುತ್ತಿದ್ದ ಪ್ರದೇಶಕ್ಕೆ ತೆರಳಿದೆವು. ಠಾಣೆಯಲ್ಲಿ ತಹಶೀಲ್ದಾರರೊಂದಿಗೆ ಹಾಜರಿದ್ದ ಆಂಪಾರು ಗ್ರಾಮ ಲೆಕ್ಕಾಧಿಕಾರಿ ಕಾಂತರಾಜು ಅವರನ್ನು ಕೂಡ ಜೊತೆಯಲ್ಲಿ ಕರೆದುಕೊಂಡು ಹೋದೆವು. ವಾರಾಹಿ ನದಿ ಬಳಿ ಅಕ್ರಮ ಮರಳು ಗಾರಿಕೆಯನ್ನು ಪರಿಶೀಲಿಸಲು ಸುಮಾರು 12:15ಗಂಟೆಗೆ ತೆರಳಿದೆವು. ಅಲ್ಲಿ ಮಸೀದಿ ರಸ್ತೆಯಲ್ಲಿ ಸುಮಾರು 10 ಬೈಕ್‌ಗಳಲ್ಲಿ ಸುಮಾರು 20 ಮಂದಿ ಹಿಂಬಾಲಿಸಿ ಲೈಟ್ ಮತ್ತು ಹಾರ್ನ್‌ಗಳನ್ನು ಹಾಕಿಕೊಂಡು ಬರುತ್ತಿದ್ದರು. ನದಿ ಬಳಿ ತೆರಳಿದಾಗ ಅಲ್ಲಿ ಉತ್ತರ ಭಾರತ ಕಾರ್ಮಿಕರು ಅಕ್ರಮ ಮರಳುಗಾರಿಕೆ ಮಾಡುತ್ತಿರುವುದು, ಮರಳು ರಾಶಿ ಹಾಕಿರುವುದು ಮತ್ತು ಹಲವು ದೋಣಿಗಳು ಹಾಗೂ ಅನಧಿಕೃತ ಶೆಡ್‌ಗಳು ಕಂಡುಬಂದವು.

ಆಗ ಕಾರ್ಮಿಕರು ಓಡಿ ಹೋಗಿದ್ದು, ಅವರಲ್ಲಿ ಒಬ್ಬರನ್ನಾದರೂ ರೆಡ್ ಹ್ಯಾಂಡ್ ಆಗಿ ಹಿಡಿಯುವಂತೆ ಕಾಂತರಾಜು ಹಾಗೂ ಎಸಿಯವರ ವಾಹನದ ಚಾಲಕ ಮತ್ತು ಗನ್‌ಮ್ಯಾನ್‌ಗೆ ತಿಳಿಸಿದೆ. ಸ್ವಲ್ಪ ಹೊತ್ತಿನಲ್ಲಿ ನಮ್ಮ ಬಳಿ ಕೆಲವು ಸ್ಥಳೀಯರು ಬಂದಿದ್ದು, ಅವರಲ್ಲಿ ನಾನು ಜಿಲ್ಲಾಧಿಕಾರಿ, ಇಲ್ಲಿ ಅಕ್ರಮ ಮರಳು ಗಾರಿಕೆ ನಡೆಸುವವರನ್ನು ಹಿಡಿಯಲು ಬಂದಿರುವುದಾಗಿ ಹೇಳಿದೆ. ಆದರೂ ಅವರು ನನಗೆ ಏಕವಚನದಲ್ಲಿ ಅವಾಚ್ಯವಾಗಿ ನಿಂದಿಸಿ, ನನ್ನೊಂದಿಗೆ ಇದ್ದ ಇತರ ಅಧಿಕಾರಿಗಳಿಗೂ ಕರ್ತವ್ಯ ಮಾಡದಂತೆ ಅಡ್ಡಿ ಪಡಿಸಿ ಹಲ್ಲೆ ನಡೆಸಲು ಪ್ರಾರಂಭಿಸಿದರು.

 ಮರಳುಗಾರಿಕೆಯಲ್ಲಿ ತೊಡಗಿದ್ದ ಕಾರ್ಮಿಕರು ಓಡಿ ಅಲ್ಲೇ ಸಮೀಪದ ಒಂದು ಮನೆಯ ಒಳಗೆ ಹೋದರು. ಅವರನ್ನು ಸಿಬ್ಬಂದಿಯವರು ಹಿಡಿದು ಮನೆಯಿಂದ ಹೊರ ತರುತ್ತಿರುವಾಗ ಅಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ಜನರು ನನಗೆ ಹಾಗೂ ಸಿಬ್ಬಂದಿಯವರಿಗೆ ಅವಾಚ್ಯವಾಗಿ ಬೈದು ಹಲ್ಲೆ ಮಾಡಿ ಆರೋಪಿಗಳನ್ನು ಬಿಡಿಸಿಕೊಂಡು ಕರ್ತವ್ಯಕ್ಕೆ ಅಡ್ಡಿಪಡಿಸಿದರು ಎಂದು ಜಿಲ್ಲಾ ಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾಹಿತಿ ನೀಡಿದರು.

ಉಡುಪಿಯಲ್ಲಿ ಪ್ರಕರಣ ದಾಖಲು:

ಇದರಿಂದ ಅಪಾಯದ ಮುನ್ಸೂಚನೆ ಅರಿತ ನಾವು ಅಲ್ಲಿಂದ ಎರಡು ವಾಹನದಲ್ಲಿ ವೇಗವಾಗಿ ಮರಳಿ ಬಂದೆವು. ಬಹು ದೂರ ಬಂದಾಗ ನಮ್ಮಂದಿಗಿದ್ದ ವಿಎ ಕಾಂತರಾಜು ಅಲ್ಲೇ ಉಳಿದುಬಿಟ್ಟಿದ್ದಾರೆ ಎಂಬುದು ನಮ್ಮ ಅರಿವಿಗೆ ಬಂತು. ಕೂಡಲೇ ದಾರಿಯಲ್ಲಿ ಸಿಕ್ಕಿದ ಪೊಲೀಸರಿಗೆ ಮಾಹಿತಿ ತಿಳಿಸಿ ಸ್ಥಳಕ್ಕೆ ಹೋಗುವಂತೆ ಸೂಚಿಸಿದೆವು. ಬಳಿಕ ಕಂಡ್ಲೂರು ಪೊಲೀಸ್ ಠಾಣೆ ಎದುರು ಸಿಕ್ಕಿದ ಎಸಿಯವರ ಚಾಲಕರನ್ನು ವಿಚಾರಿಸಿದಾಗ ಆರೋಪಿಗಳ ಗುಂಪು ಅವರ ವಾಹನವನ್ನು ತಡೆದು ಹಲ್ಲೆ ನಡೆಸಿ ವಾಹನವನ್ನು ಜಖಂ ಗೊಳಿಸಿದ್ದಲ್ಲದೇ, ಕಾಂತರಾಜು ವಾಹನವನ್ನು ಹತ್ತಲು ಬಿಡದೆ ಅಲ್ಲೆ ತಡೆದರು ಎಂಬುದು ತಿಳಿದುಬಂತು.

ಬಳಿಕ ಸಂಪರ್ಕಕ್ಕೆ ಸಿಕ್ಕಿದ ಕಾಂತರಾಜು ಪ್ರಕಾರ, ಅವರಿಗೆ ಸುಮಾರು 25 ಮಂದಿ ಸೇರಿ ಮಾರಣಾಂತಿಕವಾಗಿ ಹಲ್ಲೆ ನಡೆಸುತ್ತಿದ್ದು, ಪೊಲೀಸರ ಜೀಪಿನ ಶಬ್ದ ಕೇಳಿ ಅವರೆಲ್ಲ ಪರಾರಿಯಾದರು. ಇಲ್ಲದಿದ್ದರೆ ಅವರನ್ನು ಎಲ್ಲ ಸೇರಿ ಕೊಲ್ಲುತ್ತಿದ್ದರು. ಅಲ್ಲದೆ ಪೊಲೀಸರಿಗೆ ದೂರು ನೀಡದಂತೆ ಕಾಂತರಾಜುಗೆ ಹೆದರಿಸಲಾಗಿದೆ. ಅದಕ್ಕಾಗಿ ಅವರನ್ನು ನಾವು ಉಡುಪಿಗೆ ಕರೆಸಿದ್ದೇವೆ ಎಂದರು.

ನಾವು ಕುಂದಾಪುರ ಠಾಣೆಗೆ ಹೋಗುವ ಬದಲು ನೇರ ಉಡುಪಿ ನಗರ ಠಾಣೆಗೆ ಬಂದು ದೂರು ನೀಡಿದ್ದೇವೆ. ಕುಂದಾಪುರಕ್ಕೆ ಹೋಗುತ್ತಿದ್ದರೆ ಆರೋಪಿ ತರ ಗುಂಪು ಅಲ್ಲಿಗೆ ಬಂದು ಗಲಾಟೆ ಮಾಡುವ ಸಾಧ್ಯತೆ ಇತ್ತು. ನಮ್ಮಲ್ಲಿರುವ ಆರೋಪಿಗಳ ಫೋಟೋ, ವಾಹನದ ನಂಬರ್, ಆಡಿಯೋ ಕ್ಲಿಪ್ ಸೇರಿದಂತೆ ಎಲ್ಲ ಸಾಕ್ಷವನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ತಿಳಿಸಿದರು.

ಜಿಲ್ಲಾಧಿಕಾರಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 143, 147, 148, 341, 353, 323, 504, 506, 307 ಜೊತೆಗೆ 149 ಐಪಿಸಿ ಮತ್ತು 4(1) (ಎ) ಎಂ.ಎಂ.(ಡಿ ಮತ್ತು ಆರ್) ಕಾಯ್ದೆ 1957, 3(1), 42(1), 43(2) ಕೆ.ಎಂ.ಎಂ.ಸಿ.ಆರ್ ಕಾಯ್ದೆ 1994ರಂತೆ ಪ್ರಕರಣ ದಾಖಲಾಗಿದೆ.

ತಹಶೀಲ್ದಾರ್‌ಗೂ ಅಡ್ಡಿ ಪಡಿಸಿದ್ದರು: ಎಸಿ

ಮೊನ್ನೆ ರಾತ್ರಿ ಕಂಡ್ಲೂರಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದಾಗಿ ದೂರವಾಣಿ ಮೂಲಕ ದೂರು ಬಂದಿತ್ತು. ಅದರಂತೆ ನಾನು ಕುಂದಾಪುರ ತಹಶೀಲ್ದಾರ್‌ಗೆ ಫೋನ್ ಮಾಡಿ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದೆ. ಅವರು ತಂಡದೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದರು. ಆಗ ಅಲ್ಲಿನ ಸ್ಥಳೀಯರು ಗುಂಪು ಕಟ್ಟಿಕೊಂಡು ತಹಶೀಲ್ದಾರ್‌ಗೆ ಬೆದರಿಕೆ ಹಾಕಿ ಕರ್ತವ್ಯ ನಡೆಸಲು ಅಡ್ಡಿಪಡಿಸಿತು. ಆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೆ. ಅದಕ್ಕೆ ಅವರು ನಾವೇ ಹೋಗಿ ಪರಿ ಶೀಲನೆ ಮಾಡುವ ಅಂತ ಕಂಡ್ಲೂರು ಪ್ರದೇಶವನ್ನು ಆಯ್ಕೆ ಮಾಡಿಕೊಂಡೆವು. ಇಲ್ಲಿಗೆ ಈ ಹಿಂದೆ ಮೂರು ಬಾರಿ ದಾಳಿ ಮಾಡಿ ಅಲ್ಲಿನ ಅಕ್ರಮ ಶೆಡ್‌ಗಳನ್ನು ತೆರವುಗೊಳಿಸಲಾಗಿತ್ತು ಎಂದು ಕುಂದಾಪುರ ಉಪವಿಭಾಗ ದಂಡಾಧಿಕಾರಿ ಶಿಲ್ಪಾ ನಾಗ್ ತಿಳಿಸಿದ್ದಾರೆ.

ಸೋರಿಕೆ ದೃಷ್ಠಿಯಿಂದ ಮಾಹಿತಿ ನೀಡಿಲ್ಲ:

ಈ ಹಿಂದೆ ಅಕ್ರಮ ಮರಳುಗಾರಿಕೆಗೆ ನಾವು ಕಚೇರಿಯಿಂದ ತೆರಳುವಾಗಲೇ ಸಂಬಂಧಪಟ್ಟವರಿಗೆ ಮಾಹಿತಿ ತಿಳಿದು ಅಲ್ಲಿಂದ ಪರಾರಿಯಾಗುತ್ತಿದ್ದರು. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬರುತ್ತಿತ್ತು. ಹಾಗಾಗಿ ನಾವು ಸ್ಥಳಕ್ಕೆ ಹೋಗುವಾಗ ಯಾರು ಕೂಡ ಸಿಗುತ್ತಿರಲ್ಲಿಲ್ಲ. ಅದಕ್ಕೆ ಈ ಬಾರಿ ಯಾವುದೇ ಇಲಾಖೆಗೆ ಮಾಹಿತಿ ನೀಡದೆ ರಹಸ್ಯವಾಗಿ ಕಾರ್ಯಚರಣೆಗೆ ಇಳಿದಿದ್ದೇವು. ಮರಳುಗಾರಿಕೆ ಪ್ರದೇಶದಲ್ಲಿ ಯಾವ ಸ್ಥಿತಿ ಇದೆ ಎಂಬುದನ್ನು ನಾನು ಈವರೆಗೆ ನೋಡಿಲ್ಲ. ಅದನ್ನು ಪರಿಶೀಲಿಸಲು ರಾತ್ರಿ ಹೋಗಿದ್ದೇವೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ನಮ್ಮ ಮೇಲೆ ಕೊಲೆಯತ್ನ ನಡೆಸಿದವರಲ್ಲಿ ಒಬ್ಬನನ್ನು ಆಸ್ಪತ್ರೆಗೆ ದಾಖಲಿಸಿ ಪ್ರತಿದೂರು ನೀಡುವ ಪ್ರಯತ್ನ ನಡೆಯುತ್ತಿದೆ. ಆ ವ್ಯಕ್ತಿ ಹೇಗೆ ಗಾಯಗೊಂಡ ಎಂಬುದು ನಮಗೆ ತಿಳಿದಿಲ್ಲ. ಅವರು ಇದ್ದದ್ದು 30-40ಜನ. ನಾವು ಇದ್ದದ್ದು ಕೇವಲ ಇಬ್ಬರು ಮಹಿಳೆ ಸೇರಿದಂತೆ ಆರು ಮಂದಿ ಮಾತ್ರ. ನಾವು ಅಷ್ಟು ಮಂದಿಗೆ ಹೇಗೆ ಹೊಡೆಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X