ಈ ಅಂಗನವಾಡಿ ಟೀಚರ್ ಕೆಲಸ ಮರಳಿ ಗಳಿಸಲಿಕ್ಕಾಗಿ 6 ವರ್ಷದಿಂದ ಹೋರಾಡುತ್ತಲೇ ಇದ್ದಾರೆ!

ಕಲ್ಪಟ್ಟ(ಕೇರಳ) ,ಎ. 3: ಕಾರಣವಿಲ್ಲದೆ ಕೆಲಸದಿಂದ ತೆಗೆದು ಹಾಕಿದ ಅಂಗನವಾಡಿ ಟೀಚರ್ ಕಳೆದ ಆರುವರ್ಷಗಳಿಂದ ತಾನು ಕಳಕೊಂಡ ಕೆಲಸವನ್ನು ಮರುಗಳಿಕೆಗಾಗಿ ಹೋರಾಡುತ್ತಿದ್ದಾರೆ. ರಾಜಕಾರಣಿಗಳ ಭ್ರಷ್ಟಾಚಾರ ಟೀಚರ್ ಮೆರ್ಸಿ ಜಾರ್ಜ್‌ಗೆ ಮುಳ್ಳಾಗಿ ಪರಿಣಮಿಸಿದೆ. ವಯನಾಡ್ ಪುಲ್‌ಪಳ್ಳಿವೆಲಿಯಂಬಂ ಎಂಬಲ್ಲಿನ ನಿವಾಸಿ ಮೆರ್ಸಿಟೀಚರ್ ಮೂರುದಿನದ ಮೆಡಿಕಲ್ ರಜೆಹಾಕಿ ಅಂಗನವಾಡಿಗೆ ಮರಳಿ ಬಂದಾಗ ಅಂಗನವಾಡಿಯ ಬಾಗಿಲಿಗೆ ಬೀಗ ಹಾಕಲಾಗಿತ್ತು. ಕೂಡಲೇ ಅವರು ಮಕ್ಕಳ ಕಲ್ಯಾಣ ಯೋಜನಾಧಿಕಾರಿಗೆ(ಡಿಡಿಪಿಒ) ದೂರುನೀಡಿದ್ದರು. ಕೋರ್ಟು, ಸರಕಾರಿ ಕಚೇರಿಗಳಿಗೆ ನೀಡಿದ ದೂರುಗಳುಅರ್ಧ ಹಾದಿಯಲ್ಲೆ ಯಾವುದೇ ಪರಿಣಾಮ ಬೀರಲಿಲ್ಲ. ಜೀವನಾಧಾರವಾದ ಕೆಲಸವನ್ನು ಕಳಕೊಂಡ ಟೀಚರ್ ತನಗಿರುವ ಎರಡು ಹೆಣ್ಣುಮಕ್ಕಳನ್ನು ಸಾಕಬೇಕಿದೆ. ಅವರ ಗಂಡ ಒಂದು ವರ್ಷದ ಹಿಂದೆ ನಿಧನರಾಗಿದ್ದಾರೆ.
ಕೆಲಸದಿಂದ ಅಕಾರಣವಾಗಿ ತೆಗೆದುಹಾಕಿದ್ದು ಮತ್ತು ಅಂಗನವಾಡಿ ಸೂಪರ್ ವೈಸರ್‌ರ ನೇಮಕಾತಿಅಕ್ರಮವನ್ನು ಬಿಂಬಿಸಿ 2014ರಲ್ಲಿ ಹೈಕೋರ್ಟಿಗೆ ದೂರು ನೀಡಿದ್ದರು. ಹೈಕೋರ್ಟು ಮುಚ್ಚಿದ ಅಂಗನವಾಡಿ ತೆರೆಯಲು, ಸೂಪರ್‌ವೈಸರ್ ಆಗಿ ಅವರನ್ನು ನೇಮಕಗೊಳಿಸಲು ಮತ್ತು ಕೆಲಸದಿಂದ ತೆಗೆದು ಹಾಕಿದ ಸಮಯದ ಸಂಬಳ ಕೊಡಲಿಕ್ಕೂ, ಅದೇವೇಳೆ ಕೆಲಸದಿಂದ ತೆಗೆದು ಹಾಕಲು ಕಾರಣರಾದವರಿಂದ 10ಲಕ್ಷ ರೂಪಾಯಿವಸೂಲು ಮಾಡಿ ಮೆರ್ಸಿ ಟೀಚರ್‌ಗೆ ನೀಡಬೇಕೆಂದು ಇಲಾಖೆಗೆ ಆದೇಶ ನೀಡಿತ್ತು. ಆದರೆ ಈ ಆದೇಶ ಡಿಡಿಪಿಒ ಕಚೇರಿಯಲ್ಲಿ ಧೂಳು ತಿನ್ನುತ್ತಿದೆ. ಇದರ ನಡುವೆ ಭ್ರಷ್ಟಾಚಾರ ನಿಗ್ರಹ ದಳಕ್ಕೂ ದೂರು ನೀಡಿದ್ದರು.
2014ರಲ್ಲಿ ಅದು ತನಿಖೆ ಮಾಡಿ ಮೆರ್ಸಿಯವರ ರಾಜೀನಾಮೆ ಅರ್ಜಿಯನ್ನು ಸಿಡಿಪಿಒ ನಕಲಿಯಾಗಿ ತಯಾರಿಸಿ ಕೆಲಸದಿಂದ ತೆಗೆದು ಹಾಕಿದ್ದರು ಎಂದು ಕಂಡು ಕೊಂಡಿತ್ತು. ಆದರೆ ಮುಂದಿನ ಕ್ರಮ ನಡೆಯಲಿಲ್ಲ. ವಾರ್ಡ್ ರಾಜಕೀಯ ಮೆರ್ಸಿಜಾರ್ಜ್ ಉದ್ಯೋಗಕ್ಕೆ ಕುತ್ತಾಗಿದೆ. ಕೆಲಸದಿಂದ ತೆಗೆದು ಹಾಕಲು ಕಾರಣರಾದ ವಾರ್ಡ್ ಸದಸ್ಯ ಮತ್ತು ಕಾಂಗ್ರೆಸ್ ಸ್ಥಳೀಯ ನಾಯಕರ ವಿರುದ್ಧ ಕೇಸು ಕೊಟ್ಟದ್ದು ಮೆರ್ಸಿ ಜಾರ್ಜ್ ಇಷ್ಟೆಲ್ಲ ಅಲೆದಾಟಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.