ಹೆದ್ದಾರಿಗಳಿಂದ ಮದ್ಯದಂಗಡಿ ಖಾಲಿ ಮಾಡಿಸಿದ ಸುಪ್ರೀಂಕೋರ್ಟು ತೀರ್ಪಿಗೆ ಕಾರಣ ಓರ್ವ ಮದ್ಯಪಾನಿ !

ಹೊಸದಿಲ್ಲಿ, ಎ. 3: ರಾಷ್ಟ್ರ,ರಾಜ್ಯ ಹೆದ್ದಾರಿಗಳಲ್ಲಿ ಮದ್ಯ ಮಾರಾಟವನ್ನು 500 ಮೀಟರ್ ಅಂತರದಲ್ಲಿರುವಂತೆ ಸುಪ್ರೀಂಕೋರ್ಟು ನೀಡಿದ ತೀರ್ಪಿಗೆ ಯಾವುದೇ ಮದ್ಯಪಾನ ವಿರೋಧಿ ಸಂಘಟನೆ ಅಥವಾ ಧಾರ್ಮಿಕ ಸಂಘಟನೆಗಳು ಕಾರಣವಾಗಿಲ್ಲ. ಇದಕ್ಕೆ ಕಾರಣರಾದ ಟೆಕ್ಕಿ ಹರ್ಮನ್ ಸಿಧು ಹೇಳುತ್ತಾರೆ “ನಾನು ಮನೆಯಲ್ಲಿ ಮತ್ತು ಬಾರ್‌ನಲ್ಲಿ ಮದ್ಯಪಾನ ಮಾಡುತ್ತೇನೆ. ಆದರೆ ಎಂದೂ ಮದ್ಯಪಾನ ಮಾಡಿ ವಾಹನ ಚಲಾಯಿಸಿಲ್ಲ".
ಮದ್ಯಪಾನದಲ್ಲಿ ನನಗೆ ವಿರೋಧವೇನಿಲ್ಲ. ಆದರೆಮದ್ಯಪಾನಮಾಡಿ ವಾಹನ ಚಲಾಯಿಸಿದರೆ ರಸ್ತೆ ಅಪಘಾತ ಆಗುತ್ತದೆ. ಅಂತಹ ಒಂದುಅಪಘಾತದ ಫಲವಾಗಿ ನನಗೆ ಕತ್ತಿನಕೆಳಗೆ ಬಲಇಲ್ಲದಂತಾಗಿದ್ದು ಕಾನೂನು ಹೋರಾಟಕ್ಕೆ ಪ್ರೇರಣೆಯಾಗಿತ್ತು ಎಂದು ಸಿಧು ಹೇಳುತ್ತಾರೆ.
ಕೋರ್ಟು ತೀರ್ಪಿನಲ್ಲಿನನಗೆ ತೃಪ್ತಿಯಿದೆ. ತನ್ನ ಹೋರಾಟ ಮದ್ಯಪಾನ ಮಾಡಿವಾಹನ ಚಲಾಯಿಸುವುದರ ವಿರುದ್ಧವಾಗಿದೆ. ಎಂದು ಅವರು ಹೇಳಿದರು. ಪಂಚಾಬ್, ಹರಿಯಾಣ ಹೈಕೋರ್ಟಿನಲ್ಲಿ ಸಿಧು ತನ್ನ ಹೋರಾಟ ಆರಂಭಿಸಿದ್ದರು. ಅರೈವ್ ಸೇಫ್ ಎನ್ನುವ ಹೆಸರಿನ ಸ್ವಯಂಸೇವಾ ಸಂಘಟನೆಯ ಹೆಸರಿನಲ್ಲಿ ಅಂದು ಹೆದ್ದಾರಿಗಳಲ್ಲಿ ಮದ್ಯ ಮಾರಾಟದ ವಿರುದ್ಧ ಸಿಧು ದೂರು ನೀಡಿದ್ದರು. ನಂತರ ಮದ್ಯದ ಕಂಪೆನಿ ಮತ್ತು ರಾಜ್ಯಸರಕಾರದ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ದೂರು ನೀಡಿದ್ದರು. ಹೆದ್ದಾರಿಗಳಲ್ಲಿ ಮದ್ಯದಂಗಡಿಗಳು ವಾಹನಚಾಲಕರನ್ನು ಆಕರ್ಷಿಸುತ್ತವೆ. ಕೋರ್ಟಿನ ತೀರ್ಪು ಖಂಡಿತಾ ಅಪಘಾತಗಳನ್ನು ಕಡಿಮೆ ಗೊಳಿಸುತ್ತದೆ ಎಂದು ಸಿಧು ಆಶಾವಾದ ವ್ಯಕ್ತಪಡಿಸಿದ್ದಾರೆ.