ಫೇಸ್‌ಬುಕ್ ಲೈವ್‌ನಲ್ಲಿ ಅತ್ಯಾಚಾರ: 14ವರ್ಷದ ಬಾಲ ಆರೋಪಿಯ ಬಂಧನ

ಶಿಕಾಗೊ, ಎ.3: ಫೇಸ್‌ಬುಕ್‌ನಲ್ಲಿ ಲೈವ್‌ಆಗಿ ಹದಿನೈದು ವರ್ಷದ ಬಾಲಕಿಯನ್ನು ಅತ್ಯಾಚಾರ ವೆಸಗುವುದನ್ನು ತೋರಿಸಿದ ಹದಿನಾಲ್ಕು ವರ್ಷದ ಬಾಲಕನ್ನು ಶಿಕಾಗೊ ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿದ್ದು, ಅವರ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ತಾಯಿ ಪೊಲೀಸ್‌ಗೆ ದೂರು ನೀಡಿದ ನಂತರ ಮಾರ್ಚ್‌ನಲ್ಲಿ ನಡೆದಿದ್ದ ಘಟನೆಯ ತನಿಖೆಗೆ ಆದೇಶ ನೀಡಲಾಗಿತ್ತು. ಘಟನೆಯಲ್ಲಿ ಐದು ಅಥವಾ ಆರು ಮಂದಿ ಪಾಲ್ಗೊಂಡಿದ್ದಾರೆ. ಇದನ್ನು ನಲ್ವತ್ತಕ್ಕೂ ಹೆಚ್ಚುಮಂದಿನೋಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





