ಅಕ್ಬರ್ ಪತ್ನಿ ರಜಪೂತಳಲ್ಲ: ಗೋವಾದ ಸಾಹಿತಿ ಪ್ರಕಾರ ಆಕೆ ಈ ದೇಶದವಳು

ಪಣಜಿ,ಎ.3: ಅಕ್ಬರ್‌ನ ಪತ್ನಿ ಜೋಧಾಬಾಯಿ ಜೀವನಾಧಾರಿತ ಐಶ್ವರ್ಯ ರೈ ನಟಿಸಿದ ಅಶುತೋಷ್ ಗೌರೀಕರ್ ನಿರ್ದೇಶನ ಚಿತ್ರ ಜೋಧಾ ಅಕ್ಬರ್. ಜಹಾಂಗೀರ್‌ನ ತಾಯಿರಾಜಪೂತ ರಾಜಕುಮಾರಿ ಜೋಧಾಬಾಯಿ ಆಗಿದ್ದಳೆಂದುಚಿತ್ರದಲ್ಲಿ ತೋರಿಸಲಾಗಿತ್ತು. ಆದರೆ ಜೋಧಾಬಾಯಿ ರಜಪೂತಳಲ್ಲ ಬದಲಾಗಿ ಪೊರ್ಚುಗೀಸ್ ಮಹಿಳೆಯಾಗಿದ್ದಾಳೆ ಎಂದು ಗೋವಾದ ಲೇಖಕ ಲೂಯಿಸ್ ಡಿ ಅಸೀಸ್ ಕೊರಿಅವರ ’ಪೋರ್ಚುಗೀಸ್ ಇಂಡಿಯ, ಆ್ಯಂಡ್ ಮುಗಲ್ ರಿಲೇಶನ್ಸ್1510-1735’ ಎನ್ನುವ ಗ್ರಂಥದಲ್ಲಿ ಹೇಳಲಾಗಿದೆ.
"ಪೊರ್ಚುಗೀಸ್‌ಹಡಗಿನಲ್ಲಿ ತನ್ನ ಸಹೋದರಿಯೊಂದಿಗೆ ಪ್ರಯಾಣಿಸುತ್ತಿದ್ದ ಡೋನಾಮರಿಯ ಮಸ್ಕರೇನಸ್ ಎನ್ನುವ ಮಹಿಳೆಯನ್ನು ಅಪಹರಿಸಿದ ಗುಜರಾತ್ ಸುಲ್ತಾನ ಆಕೆಯನ್ನು ನಂತರ ಅಕ್ಬರನಿಗೆ ಒಪ್ಪಿಸಿದ್ದ ಎಂದು ಗ್ರಂಥದಲ್ಲಿ ಬರೆಯಲಾಗಿದೆ.
ಕೋರ್ಟಿನಲ್ಲಿ ಹಾಜರುಪಡಿಸಿದ್ದ ಮಸ್ಕರೇನಸಳಲ್ಲಿ ಅಕ್ಬರ್ ಮೋಹಿತನಾಗಿದ್ದ. ಆಗ ಅವಳಿಗೆ ಹದಿನೇಳು ವರ್ಷವಯಸ್ಸಾಗಿತ್ತು. ನಂತರ ಅಕ್ಬರ್ ಮಸ್ಕರೇನಸಳನ್ನು ಮತ್ತು ಅವಳ ಸಹೋದರಿ ಜೂಲಿಯಾಳನ್ನು ಅಕ್ಬರ್ ಅಂತಃಪುರಕ್ಕೆ ಸೇರಿಸಿಕೊಂಡಿದ್ದ" ಎಂದು ಗ್ರಂಥಕರ್ತ ಕೊರಿಯ ಹೇಳಿದ್ದಾರೆ. ಅವರು ಗ್ರಂಥಬಿಡುಗಡೆ ಸಂಬಂಧಿಸಿ ಪಣಜಿಯಲ್ಲಿ ಮಾಧ್ಯಮದವರೊಂದಿಗೆ ಮಾತಾಡುತ್ತಿದ್ದರು. ಅದೇವೇಳೆ ಓರ್ವ ಕ್ರೈಸ್ತ ಮಹಿಳೆಯನ್ನು ಅಕ್ಬರನ ಪತ್ನಿಯಾಗಿ ಮೊಗಲರು ಒಪ್ಪಿಕೊಳ್ಳಲು ಸಾಧ್ಯವಿರಲಿಲ್ಲ. ಇದು ಜೋಧಾಬಾಯಿ ಕಟ್ಟುಕಥೆ ಕಟ್ಟಲು ಕಾರಣವಾಗಿದೆ ಎಂದು ಕೊರಿಯ ಹೇಳಿದರು. ಅಕ್ಬರ್ ಮತ್ತು ಜಹಾಂಗೀರ್‌ರ ಕುರಿತ ಬರಹಗಳಲ್ಲಿ ಜೋಧಾಬಾಯಿಯ ಕುರಿತು ಪ್ರಸ್ತಾಪಗಳನ್ನು ಕಾಣಲು ಸಾಧ್ಯವಾಗಿಲ್ಲ ಎಂದು ಕೊರಿಯ ತಿಳಿಸಿದರು.
ಕೊರಿಯ ಅವರ ಗ್ರಂಥವನ್ನು ಬ್ರಾಡ್ ವೇ ಪಬ್ಲಿಶಿಂಗ್ ಪ್ರಕಟಿಸುತ್ತಿದೆ. ಮರಿಯ ಮಸ್ಕರೇನಸ್ ಜಹಾಂಗೀರನ ತಾಯಿಯಾಗಿದ್ದಾಳೆ. ಅವಳನ್ನು ಮರಿಯ ಉಲ್ ಸಮಾನಿ ಎನ್ನುವ ಹೆಸರಿನಲ್ಲಿ ಕರೆಯಲಾಗುತ್ತಿತ್ತು. ಆದರೆ ಇವಳು ಜಹಾಂಗೀರನ ಅಮ್ಮ ಎಂದು ಮೊಗಲರ ದಾಖಲೆಗಳಲ್ಲಿ ಕಾಣುವುದಿಲ್ಲ ಎಂದು ಅವರು ಹೇಳಿದರು.