ಕೆದಿಲದಲ್ಲಿ ರಾತ್ರಿ ಕಳ್ಳತನ, ಪೆರಮೊಗ್ರುವಿನಲ್ಲಿ ಹಗಲು ಕಳ್ಳತನ

ಪುತ್ತೂರು: ನಗರ ಠಾಣಾ ವ್ಯಾಪ್ತಿಯ ಕೆದಿಲ ಗ್ರಾಮದ ಬೀಟಿಕೆಯಲ್ಲಿ ಮನೆಯಿಂದ ರಾತ್ರಿ ಕಳ್ಳತನವಾದರೆ ಅದೇ ಗ್ರಾಮದ ಪೆರಮೊಗ್ರುವಿನಲ್ಲಿ ಹಗಲು ಕಳ್ಳತನ ನಡೆದ ಬಗ್ಗೆ ವರದಿಯಾಗಿದೆ.
ರಾತ್ರಿ ಕಳ್ಳತನ:
ಕೆದಿಲ ಗ್ರಾಮದ ಬೀಟಿಕೆ ನಿವಾಸಿ ಇಬ್ರಾಹಿಂ ಎಂಬವರ ಮನೆಯ ಎದುರಿನ ಬಾಗಿಲು ಮುರಿದು ಒಳ ನುಗ್ಗಿದ್ದ ಕಳ್ಳರು ಕಪಾಡನ್ನು ತೆರೆದು 3 ಚಿನ್ನದ ಉಂಗುರು, ರೂ. 4ಸಾವಿರ ನಗದು ಮತ್ತು ಒಂದು ಇಸ್ತ್ರಿ ಪೆಟ್ಟಿಗೆಯನ್ನು ಕಳವು ಮಾಡಿದ್ದಾರೆ. ಒಟ್ಟು ರೂ. 20ಸಾವಿರ ಮೌಲ್ಯದ ಸೊತ್ತು ಕಳವಾಗಿದೆ ಎಂದು ಇಬ್ರಾಹಿಂ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಇಬ್ರಾಹಿಂರವರು ಎ.1ರಂದು ಮನೆ ಮಂದಿ ಸಮೇತ ಶುಭ ಕಾರ್ಯಕ್ಕೆ ತೆರಳಿದ್ದರು. ಈ ವೇಳೆ ಕಳ್ಳತ ನಡೆದಿದೆ.
ಹಗಲು ಕಳ್ಳತನ:
ಇನ್ನೊಂದು ಪ್ರಕರಣದಲ್ಲಿ ಕೆದಿಲ ಗ್ರಾಮದ ಪೆರಮೊಗ್ರು ಸಮೀಪ ಇಬ್ರಾಹಿಂ ಎಂಬವರು ಮನೆ ಮಂದಿ ಜೊತೆ ಬೆಳಿಗ್ಗೆ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದರು. ಮಧ್ಯಾಹ್ನ ಸುಮಾರು 2.30 ಗಂಟೆ ಮನೆಗೆ ಬಂದಾಗ ಕಳ್ಳತನ ನಡೆದ ಬಗ್ಗೆ ಬೆಳಕಿಗೆ ಬಂದಿದೆ. ಕಳ್ಳರು ಮನೆಯ ಹಿಂಬದಿಯ ಬಾಗಿಲು ಮುರಿದು ಒಳ ನುಗ್ಗಿ ಕಪಾಟಿನಲ್ಲಿದ್ದ ರೂ. 10ಸಾವಿರ ನಗದು, ಚಿನ್ನದ ನಾಣ್ಯ ಸೇರಿದಂತೆ ಗೆಜ್ಜೆಗಳನ್ನು ಕಳವು ಮಾಡಿದ್ದು ಲಕ್ಷಾಂತರ ಮೌಲ್ಯದ ಕಳವಾದ ಕುರಿತು ಇಬ್ರಾಹಿಂ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್, ಕ್ರೈಂ ಎಸ್.ಐ ವೆಂಕಟೇಶ್ ಭಟ್ ಮತ್ತು ಸಿಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.







