Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ವಿಮಾನ ನಿಲ್ದಾಣ ಅಧಿಕಾರಿಗಳಿಂದ...

ವಿಮಾನ ನಿಲ್ದಾಣ ಅಧಿಕಾರಿಗಳಿಂದ ಪ್ರಯಾಣಿಕರಿಗೆ ಕಿರುಕುಳ ಆರೋಪ ಸಿಬ್ಬಂದಿಗಳ ವಜಾಗೊಳಿಸಿ ಕಾನೂನು ಕ್ರಮಕ್ಕೆ ಎಸ್‌ಡಿಪಿಐ

ವಾರ್ತಾಭಾರತಿವಾರ್ತಾಭಾರತಿ3 April 2017 9:51 PM IST
share
ವಿಮಾನ ನಿಲ್ದಾಣ ಅಧಿಕಾರಿಗಳಿಂದ ಪ್ರಯಾಣಿಕರಿಗೆ ಕಿರುಕುಳ ಆರೋಪ ಸಿಬ್ಬಂದಿಗಳ ವಜಾಗೊಳಿಸಿ ಕಾನೂನು ಕ್ರಮಕ್ಕೆ ಎಸ್‌ಡಿಪಿಐ

ಮಂಗಳೂರು, ಎ. 3: ಜೀವನೋಪಾಯಕ್ಕಾಗಿ ವಿದೇಶಕ್ಕೆ ತೆರಳುವ ಪ್ರಯಾಣಿಕರಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿಗಳು ಅನಾವಶ್ಯಕವಾಗಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ)ದ ದ.ಕ. ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ಪ್ರಯಾಣಿಕರಿಗೆ ಕಿರುಕುಳ ನೀಡಿರುವ ಅಧಿಕಾರಿಗಳನ್ನು ವಜಾಗೊಳಿಸಿ ಅವರ ಮೇಲೆ ಕಾನೂನು ಕ್ರಮ ಜರಗಿಸಬೇಕೆಂದು ಒತ್ತಾಯಿಸಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣದ ಅಧಿಕಾರಿಗಳು ನೀಡುತ್ತಿರುವ ಕಿರುಕುಳದ ಬಗ್ಗೆ ಸೋಮವಾರ ಮಧ್ಯಾಹ್ನ ಎಸ್‌ಡಿಪಿಐ ನಿಯೋಗವು ಮಂಗಳೂರು ವಿಮಾನ ನಿಲ್ದಾಣದ ಪ್ರಾಧಿಕಾರದ ನಿರ್ದೇಶಕ ರಾಧಾಕೃಷ್ಣ ಅವರೊಂದಿಗೆ ಚರ್ಚಿಸಿ ಮನವಿಯನ್ನು ಸಲ್ಲಿಸಿರುವುದಾಗಿ ತಿಳಿಸಿದರು.

ವಿಮಾನ ನಿಲ್ದಾನದ ಕೆಲವು ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಅದರಲ್ಲೂ ಇಮಿಗ್ರೇಶನ್‌ನ ಅಧಿಕಾರಿಗಳಿಂದ ವಿದೇಶಕ್ಕೆ ತೆರಳುವ ಮುಸ್ಲಿಂ ಪ್ರಯಾಣಿಕರಿಗೆ ಕಳೆದ ಹಲವು ವರ್ಷಗಳಿಂದ ಕಿರುಕುಳ ನಡೆಯುತ್ತಲೇ ಇದೆ. ಈ ಪೈಕಿ ಕೆಲವು ಪ್ರಯಾಣಿಕರು ತಮ್ಮ ನೋವನ್ನು ಬಹಿರಂಗಪಡಿಸಿದ್ದಾರೆ. ಮತ್ತೆ ಕೆಲವು ಪ್ರಯಾಣಿಕರು ನೋವನ್ನು ಬಹಿರಂಗ ಪಡಿಸದೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಪಾಸ್‌ಪೋರ್ಟ್‌ನ ಹಾಳೆ ಹರಿಯುವುದು, ವೀಸಾ ಲಗತ್ತಿಸಿದ ಪುಟವನ್ನು ಹರಿಯುವುದು, ಜಾಸ್ತಿ ಬಂಗಾರವಿದೆ ಎಂದು ಮಹಿಳೆಯರನ್ನು ಹಿಂಸಿಸುವುದು, ಲಗೇಜ್ ಹೆಚ್ಚಾಗಿದೆ ಎಂದು ಹೇಳಿ ಹಣ ನೀಡುವಂತೆ ಒತ್ತಡ ಹೇರುವುದು, ಅನಾವಶ್ಯಕ ಪ್ರಶ್ನೆಗಳನ್ನು ಕೇಳಿ ವಿಚಾರಣೆ ಮಾಡಿ ಹೆದರಿಸುವುದು, ಇಲ್ಲ ಸಲ್ಲದ ಆರೋಪವನ್ನು ಅನಿವಾಸಿಗಳ ಹೆಗಲಿಗೆ ಕಟ್ಟುವುದು, ತಪಾಸಣೆಯ ಹೆಸರಿನಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವುದು, ಅಲ್ಪಸಂಖ್ಯಾತ ಪ್ರಯಾಣಿಕರನ್ನು ಕಳ್ಳರಂತೆ ಕಾಣುವುದು ಈ ರೀತಿಯ ಪ್ರಕರಣದ ಪಟ್ಟಿಗಳು ದಿನ ಕಳೆದಂತೆ ಬೆಳೆಯುತ್ತಾ ಹೋಗುತ್ತಿದೆ. ಉನ್ನತ ಅಧಿಕಾರಿಗಳ ವೌನ ಸಮ್ಮತಿಯಿಂದ ಇಂತಹ ಘಟನೆಗಳು ಮರುಕಳಿಸಲು ಕಾರಣವಾಗಿದೆ ಎಂದು ಹನೀಫ್ ಖಾನ್ ಕೊಡಾಜೆ ಆರೋಪಿಸಿದರು.

ನೊಂದ ಕೆಲವು ಪ್ರಯಾಣಿಕರು ಅನುಭವಿಸಿದ ಘಟನೆಗಳನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

16 ನವೆಂಬರ್, 2016:

ಮಂಗಳೂರು ಅಸುಪಾಸಿನ ಒಂದು ಕುಟುಂಬಕ್ಕೆ ಪಾಸ್ ಪೋರ್ಟ್ ವಿಷಯದಲ್ಲಿ ವಿನಾಃ ಕಾರಣ ಎಮಿಗ್ರೇಷನ್ ಅಧಿಕಾರಿಗಳಿಂದ ಕಿರುಕುಳ. ಸೆಕ್ಯೂರಿಟಿ ಪಾಸ್ ಆಗಿ, ಬೋರ್ಡಿಂಗ್ ಪಾಸ್ ಆಗಿ, ಎಮಿಗ್ರೇಷನ್ ತಲುಪುವಾಗ ನಿಮ್ಮ ಪಾಸ್‌ಪೋರ್ಟ್ ಹರಿದಿದೆ ಎಂದು ಹೇಳಿ ವಾಪಾಸ್ ಕಳುಹಿಸಿದರು.

 10 ಮಾರ್ಚ್, 2017: 

ಕಾಸರಗೋಡು ಮಂಜೇಶ್ವರ ನಿವಾಸಿಗಳಾದ ಒಂದು ಮಹಿಳೆ ಮತ್ತು ಅವರ ಮೂರು ಮಕ್ಕಳನ್ನು ಪಾಸ್‌ಪೋರ್ಟ್ ಸರಿ ಇಲ್ಲ ಎಂದು ಹೇಳಿ ಹಿಂತಿರುಗಿಸಿದ ಘಟನೆ 2017ರ ಮಾ. 10ರಂದು ನಡೆದಿದೆ. ಎಮಿಗ್ರೇಷನ್ ಅಧಿಕಾರಿಗಳಿಗೆ ಪಾಸ್‌ಪೋರ್ಟ್ ಕೊಡುವವರೆಗೂ ಯಾವುದೇ ದೋಷಗಳಿರಲಿಲ್ಲ. ಅವರೇ ಅದನ್ನು ಹರಿದು ಈ ಪಾಸ್‌ಪೋರ್ಟ್ ಸರಿ ಇಲ್ಲ ಎಂದು ಹೇಳಿ ಹಿಂತಿರುಗಿಸಿದ್ದಾರೆ. ನಂತರ ಅದೇ ಪಾಸ್‌ಪೋರ್ಟ್ ಉಪಯೋಗಿಸಿ ಆ ಕುಟುಂಬವು ಕೋಝಿಕ್ಕೋಡು ವಿಮಾನ ನಿಲ್ದಾಣದ ಮುಖಾಂತರ ವಿದೇಶಕ್ಕೆ ತೆರಳಿದರು, ಸುಮಾರು 1.5 ಲಕ್ಷ ನಷ್ಟವಾಗಿದೆ ಎಂದು ಯುವತಿಯ ಗಂಡ ಅಬ್ದುಲ್ ಖಾದರ್ ತಿಳಿಸಿದ್ದಾರೆ.

26 ಮಾರ್ಚ್, 2017:

ದುಬೈಗೆ ತೆರಳಲು ವಿಮಾನ ನಿಲ್ದಾಣಕ್ಕೆ ತಲುಪಿದ ಎಂಟು ಮಂದಿಯನ್ನು ಒಳಗೊಂಡ ಕುಟುಂಬವು, ಎಮಿಗ್ರೇಷನ್ ಅಧಿಕಾರಿಗಳಿಂದ ಕ್ರೂರವಾದ ಕಿರುಕಳವನ್ನು ಸಹಿಸಬೇಕಾಗಿ ಬಂತು. ಮೊದಲನೆಯದಾಗಿ 8 ಮಂದಿ ಪಾಸ್‌ಪೋರ್ಟ್‌ಗಳನ್ನು ನೀಡಿದ ಕುಟುಂಬಕ್ಕೆ ಅಧಿಕಾರಿಗಳು ಒಂದು ಮಗುವಿಗೆ ಹೋಗಲು ಸಾಧ್ಯವಿಲ್ಲ. ದಾಖಲೆಗಳು ಸರಿ ಇಲ್ಲ ಎಂದರು. ಆದರೆ ಕುಟುಂಬಕ್ಕೆ ಅವರ ದಾಖಲೆಗಳು ಸರಿಯಾಗಿಯೇ ಇವೆ ಎಂದು ತಿಳಿದಿತ್ತು.

ಅಧಿಕಾರಿಗಳಲ್ಲಿ ಮಾತನಾಡಿದಾಗ, ಮಗುವನ್ನು ಬಿಟ್ಟು ಉಳಿದವರು ಹೋಗಿ ಎಂದು ಗದರಿಸಿದ್ದರು. ನಂತರ ದುಬೈಯಲ್ಲಿರುವ ತಮ್ಮ ಸಂಬಂಧಿಕನಿಗೆ ಮಾಹಿತಿಯನ್ನು ತಿಳಿಸಿದಾಗ ಆ ಎಂಟು ಪಾಸ್‌ಪೋರ್ಟ್‌ಗಳಲ್ಲಿ ಯಾವುದೇ ತೊಂದರೆಗಳಿಲ್ಲ ಎಂದು ತಿಳಿಸಿದರು. ಕೊನೆಗೆ ಅಧಿಕಾರಿಗಳು ಮಗುವನ್ನು ಕರೆದುಕೊಂಡು ಹೋಗಲು ಅನುಮತಿಸಿದರು. ಇಷ್ಟಕ್ಕೆ ಮಾತ್ರ ನಿಲ್ಲಿಸದೇ ಪಡೆದ ಪಾಸ್‌ಪೋರ್ಟ್‌ಗಳನ್ನು ಹಿಂತಿರುಗಿಸುವಾಗ ಕೇವಲ ಏಳು ಪಾಸ್‌ಪೋರ್ಟ್‌ಗಳು...!! ಆ ತಂಡದಲ್ಲಿದ್ದ ಮಗುವಿನ ಪಾಸ್‌ಪೋರ್ಟ್ ತಡೆಡಿದರು. ಕುಟುಂಬಸ್ಥರು 8 ಪಾಸ್‌ಪೋರ್ಟ್ ನೀಡಿದ್ದೇವೆ ಎಂದದ್ದಕ್ಕೆ ಇಲ್ಲ ನೀವು 7 ಪಾಸ್‌ಪೋರ್ಟ್ ಮಾತ್ರ ನೀಡಿರುತ್ತೀರಿ ಎಂದು 2ನೆ ಬಾರಿಯೂ ಕಿರುಕುಳ ನೀಡಿದರು. ನಂತರ ಅಲ್ಲಿರುವ ಇತರ ಪ್ರಯಾಣಿಕರು ಎಲ್ಲರೂ ಸೇರಿ ಪಾಸ್‌ಪೋರ್ಟನ್ನು ಅಧಿಕಾರಿಗಳ ಕೈಯಿಂದ ಹಿಂಪಡೆಯಲು ಸಹಾಯ ಮಾಡಿದರು.

ಜುಲೈ 2015:

ಹಸನ್ ಎಂಬವರು ದುಬೈಗೆ ತೆರಳುವವರಿದ್ದರು. ಪಾಸ್‌ಪೋರ್ಟ್‌ನಿಂದ ವೀಸಾ ಇರುವ ಪುಟವು ಹರಿದು ಹೋಗಿದೆ ಎಂದು ಅಧಿಕಾರಿಗಳು ಹೇಳಿದ್ದರು. ಹಸ್ಸನ್‌ರವರು ಮನೆಯಿಂದ ಹೊರಟು ವಿಮಾನ ನಿಲ್ದಾಣಕ್ಕೆ ತಲುಪಿದ ನಂತರವೂ ಪಾಸ್‌ಪೋರ್ಟ್‌ನಲ್ಲಿ ವೀಸಾದ ಪುಟ ಇತ್ತು. ಆದರೆ ಅಧಿಕಾರಿಗಳಿಗೆ ನೀಡಿದ ಬಳಿಕವಾಗಿದೆ ಆ ಪುಟ ಕಾಣೆಯಾಗಿದ್ದು ಎಂದು ಹಸನ್ ಆರೋಪಿಸಿದ್ದಾರೆ.

ಮಂಗಳೂರಿನ ನಿವಾಸಿ ರಮೇಶ ಎಂಬವರು ಕೆಲವು ತಿಂಗಳ ಹಿಂದೆ ತನ್ನ ಇಬ್ಬರು ಸ್ನೇಹಿತರೊಂದಿಗೆ ಮಂಗಳೂರು ವಿಮಾನ ನಿಲ್ದಾಣದಿಂದ ದಮಾಮ್‌ಗೆ ಯಾತ್ರೆ ಹೊರಟಿದ್ದರು. ಅವರೊಂದಿಗೆ ಸೌದಿ ಅರೇಬಿಯಾಗೆ ಮೊದಲ ಬಾರಿಗೆ ಉದ್ಯೋಗಕ್ಕಾಗಿ ಹೊರಟ ಒಬ್ಬ ಯುವಕನೂ ಇದ್ದನು. ವಿಮಾನ ನಿಲ್ದಾನಕ್ಕೆ ತಲುಪಿದ ಈ 4 ಮಂದಿಯೂ ಬೋರ್ಡಿಂಗ್ ಪಾಸ್ ಆಗಿ ಸೌದಿ ಅರೇಬಿಯಾಗೆ ಹೊರಡುವಷ್ಟರಲ್ಲಿ ಇವರೊಂದಿಗೆ ಇದ್ದ ಯುವಕ 10 ನಿಮಿಷವಾಗಿಯೂ ಹೊರಗೆ ಬರಲಿಲ್ಲ. ನಂತರ ರಮೇಶರವರು ಎಮಿಗ್ರೇಷನ್ ಕೌಂಟರ್ ಬಳಿ ತೆರಳಿ ಎಮಿಗ್ರೇಷನ್ ಅಧಿಕಾರಿ ಬಳಿ ಮಾತನಾಡಿದರು. ಈ ಸಂದರ್ಭದಲ್ಲಿ ಆ ಅಧಿಕಾರಿ ಱಱಹೊಸ ಹುಡುಗ ಡ್ರೈವರ್ ಉದ್ಯೋಗ ಎಂದು ನಮೂದಿಸಿದ್ದಾನೆ. ಅವನಲ್ಲಿ ಭಾರತದ ಲೈಸೆನ್ಸ್ ಇಲ್ಲ. ಇಲ್ಲಿನ ಲೈಸೆನ್ಸ್ ಇಲ್ಲದೆ ಹೇಗೆ ಸೌದಿಯಲ್ಲಿ ಕೆಲಸ ಮಾಡುತ್ತಾನೆ ಎಂದು ಪ್ರಸ್ನಿಸಿದರು.

ಅದಕ್ಕೆ ರಮೇಶ್ ಭಾರತದ ಲೈಸನ್ಸ್ ಉಪಯೋಗಹಿಸಿ ಸೌದಿಯಲ್ಲಿ ಕೆಲಸ ಮಾಡಲು ಆಗುವುದಿಲ್ಲ. ಅಲ್ಲಿ ಬೇರೆಯೇ ಲೈಸೆನ್ಸ್ ಮಾಡಬೇಕು. ದಯವಿಟ್ಟು ಆತನನ್ನು ಕಳುಹಿಸಿದೆ ಎಂದೆ. ಅದಕ್ಕೆ ಆ ಅಧಿಕಾರಿ ನೀನು ಹೊರಗೆ ನಡಿ. ಇಲ್ಲ ಅಂದೆ ನಿನ್ನ ಪಾಸ್‌ಪೋರ್ಟ್ ಕೊಡು. ನಾನು ನಿನ್ನ ವಿರುದ್ಧ ಕೇಸ್ ಮಾಡ್ತೇನ್ ಹುಷಾರ್ ಎಂದರು. ಇ ಸಂದರ್ಭದಲ್ಲಿ ಅಧಿಕಾರಿ 10 ಸಾವಿರ ರೂ. ಕೊಡಬೇಕೆಂದು ಕೇಳಿಕೊಂಡರು. 1,000 ರೂ. ಕೊಟ್ಟೆವು ಎಂದು ರಮೇಶ್ ತಿಳಿಸಿದ್ದಾರೆ ಎಂದು ರಮೇಶ್ ತಿಳಿಸಿರುವುದಾಗಿ ಹನೀಫ್ ಖಾನ್ ವಿವರಿಸಿದರು.

27 ಮಾರ್ಚ್, 2017: 

ಜೋಕಟ್ಟೆಯ ನಿವಾಸಿಯೊಬ್ಬರು ಇಬ್ಬರು ಮಕ್ಕಳ ಜೊತೆ ಸಂಜೆ 6:20ಕ್ಕೆ ದಮಾಮ್‌ಗೆ ಹೊರಡುವ ಏರ್‌ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಲು ಸಂಜೆ 4:00 ಗಂಟೆಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಎಮಿಗ್ರೇಷನ್ ಅಧಿಕಾರಿಯೊಬ್ಬರಿಗೆ ತನ್ನ ಪಾಸ್‌ಪೋರ್ಟ್ ಮತ್ತು ವೀಸಾ ಪ್ರತಿಯನ್ನು ನೀಡಿದರು. ಇನ್ನೇನು ಬೋರ್ಡಿಂಗ್ ಪಾಸ್ ನೀಡುತ್ತಾರೆ ಎನ್ನುವಷ್ಟರಲ್ಲಿ ಮಹಿಳಾ ಅಧಿಕಾರಿಯೊಬ್ಬರು ನಿಮ್ಮ ವೀಸಾ ಅವಧಿ ಇವತ್ತು ರಾತ್ರಿ ಕೊನೆಗೊಳ್ಳುತ್ತದೆ. ನಿಮಗೆ ಪ್ರಯಾಣಿಸಬೇಕಾದರೆ ಉನ್ನತ ಅಧಿಕಾರಿಗಳ ಜೊತೆ ಮಾತನಾಡಬೇಕು ಎಂದರು.

 ಅದಕ್ಕೆ ಪ್ರಯಾಣಿಕರು ನಾನು ಸೌದಿ ಕಾಲಮಾನ ರಾತ್ರಿ 8 ಘಂಟೆಗೆ ಸೌದಿ ತಲುಪುತ್ತೇನೆ. ಆದ್ದರಿಂದ ವೀಸಾದ ಕುರಿತು ಯಾವುದೇ ಸಮಸ್ಯೆ ಆಗುವುದಿಲ್ಲ ಎಂದರು.

ಅಲ್ಲಾ ಸಾರ್ ಒಂದು ವೇಳೆ ವಿಮಾನ ತಡವಾದರೆ ಸಮಸ್ಯೆಯಾಗುತ್ತೆ ಅದಕ್ಕಾಗಿ ಹೇಳಿದೆ ಎಂದು ಅಧಿಕಾರಿ ಮತ್ತೆ ಹೇಳಿದರು.
 ಒಂದು ವೇಳೆ ವಿಮಾನ ತಡವಾದರೆ ಸೌದಿ ವಿಮಾನ ನಿಲ್ದಾನದಿಂದ ನನ್ನನ್ನು ಭಾರತಕ್ಕೆ ಕಳುಸುತ್ತಾರೆ. ಈ ವಿಷಯದಲ್ಲಿ ನಾನು ಮತ್ತು ಸೌದಿ ಎಮಿಗ್ರೇಶನ್ ಅಧಿಕಾರಿಗಳು ತಲೆಕೆಡಿಸಬೇಕೇ ಹೊರತು ನೀವಲ್ಲ ಎಂದು ಪ್ರಯಾಣಿಕರು ಉತ್ತರಿಸಿದರು.

ಅದಕ್ಕೆ ಆ ಅಧಿಕಾರಿ... ಇಲ್ಲಾ ಸಾರ್, ನಿಮಗೆ ತೊಂದರೆ ಆಗುತ್ತೆ. ನಿವು ಉನ್ನತ ಅಧಿಕಾರಿ ಜೊತೆ ಮಾತನಾಡಿ ಎಂದರು.
ನಾನು ಯಾಕ್ರೀ ಮಾತನಾಡಬೇಕು ? ಬೇಕಾದರೆ ಅವರನ್ನೇ ಇಲ್ಲಿಗೆ ಕರೆಸಿ, ನಿಮಗೆ ಪ್ರಯಾಣಿಕರನ್ನು ಆ ಕಡೆ ಈ ಕಡೆ ಅಲೆದಾಡಿಸಿ ಗೌಪ್ಯವಾಗಿ ಪಾಸ್‌ಪೋರ್ಟ್ ಹರಿದು ಹಾಕುವ, ತಮಗೆ ಕೊಟ್ಟ ಪಾಸ್‌ಪೋರ್ಟ್ ನೀಡಿಯೇ ಇಲ್ಲ ಎಂದು ಸುಳ್ಳು ಹೇಳುವ ನಿಮ್ಮ ಬುದ್ದಿ ನನ್ನೊಂದಿಗೆ ತೋರಿಸಬೇಡಿ ಎಂದು ಪ್ರಯಾಣಿಕರು ಖಾರವಾಗಿ ಮಾತನಾಡಿದರು.

ಕೊನೆಗೆ ಆ ಮಹಿಳಾ ಅಧಿಕಾರಿ ಕ್ಷಮಿಸಿ ಸಾರ್, ನೀವು ಉನ್ನತ ಅಧಿಕಾರಿ ಜೊತೆ ಮಾತನಾಡುವುದು ಬೇಡ, ನಾನು ಯಾರ ಪಾಸ್‌ಪೋರ್ಟ್ ತೆಗೆದಿಟ್ಟಿಲ್ಲ. ನನಗೆ ಆ ವಿಚಾರ ಗೊತ್ತಿಲ್ಲ. ಆ ರೀತಿ ಯಾರು ಮಾಡಿದ್ದಾರೋ ಅವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ನಿಮ್ಮ ಪ್ರಯಾಣ ಮುಂದುವರಿಸಿ ಎನ್ನುತ್ತಾ ಬೋರ್ಡಿಂಗ್ ಪಾಸ್ ನೀಡಿರುವುದಾಗಿ ಪ್ರಯಾಣಿಕರು ದೂರಿದ್ದಾರೆ ಎಂದು ಹನೀಫ್ ಖಾನ್ ಕೊಡಾಜೆ ವಿವಸಿದರು.

ಪ್ರಯಾಣಿಕರ ಮೇಲೆ ಕಿರುಕುಳ, ದೌರ್ಜನ್ಯವೆಸಗಿದ ಎಲ್ಲಾ ಸಿಬ್ಬಂದಿಗಳನ್ನು ವಜಾಗೊಳಿಸಬೇಕು. ಮೇಲೆ ವಿವರಿಸಿದ ದಿನಾಂಕದ ಘಟನೆಗಳಲ್ಲಿ ಯಾವ ಅಧಿಕಾರಿ ಮತ್ತು ಸಿಬ್ಬಂದಿಗಳು ಕೆಲಸ ನಿರ್ವಸುತ್ತಿದ್ದರೋ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಉನ್ನತ ಅಧಿಕಾರಿಗಳು ನೋಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಮಂಗಳೂರಿನ ಪ್ರಜ್ಞಾವಂತ ನಾಗರಿಕರನ್ನೊಳಗೊಂಡ ಎಲ್ಲ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ತೀವ್ರ ಸ್ವರೂಪದ ಹೋರಾಟವನ್ನು ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಲ್ಫೋನ್ಸೋ ಫ್ರಾಂಕೋ ಮಾತನಾಡಿ, ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರಿಗೆ ಅನಾವಶ್ಯಕ ಪ್ರಶ್ನೆಗಳನ್ನು ಕೇಳಿ ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ. ಅಧಿಕಾರಿಗಳ ಇಂತಹ ವರ್ತನೆ ನಿಲ್ಲಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಥಾವುಲ್ಲಾ ಜೋಕಟ್ಟೆ, ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಜಿಲ್ಲಾ ಸಮಿತಿ ಸದಸ್ಯ ಜಾಬಿರ್ ಅರಿಯಡ್ಕ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X