ಹೈಸ್ಕೂಲ್ ವಿದ್ಯಾರ್ಥಿನಿಯ ಮೇಲೆ ಸಹಪಾಠಿಯಿಂದ ಅತ್ಯಾಚಾರ, ಇತರ ಮೂವರಿಂದ ವೀಡಿಯೊ ಚಿತ್ರೀಕರಣ

ಭುವನೇಶ್ವರ,ಎ.3: ಒಂಭತ್ತನೇ ತರಗತಿಯ ವಿದ್ಯಾರ್ಥಿನಿಯೋರ್ವಳ ಮೇಲೆ ಆಕೆಯ ಸಹಪಾಠಿಗಳಲ್ಲೋರ್ವ ಅತ್ಯಾಚಾರ ನಡೆಸಿದ ಮತ್ತು ಇತರ ಮೂವರು ಅದನ್ನು ವೀಡಿಯೊ ಚಿತ್ರೀಕರಿಸಿದ ಹೇಯ ಘಟನೆ ಒಡಿಶಾದ ನಯಾಗಡ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದರು.
ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಬಾಲಕಿಯ ಹೆತ್ತವರು ಸರಂಕುಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಒಂದು ತಿಂಗಳ ಹಿಂದೆ ಬಾಲಕಿ ಮತ್ತು ಆರೋಪಿ ಸರಂಕುಲ ಗ್ರಾಮದಲ್ಲಿ ಖಾಸಗಿ ಟ್ಯೂಷನ್ ಕೇಂಂದ್ರಕ್ಕೆ ಹಾಜರಾಗಿದ್ದಾಗ ಈ ಹೇಯ ಘಟನೆ ನಡೆದಿತ್ತು.
ವಿಷಯವು ಬಹಿರಂಗಗೊಂಡ ಬಳಿಕ ಗ್ರಾಮಸಭೆ ನಡೆದು ಮುಖ್ಯ ಆರೋಪಿಯು ಸಂತ್ರಸ್ತ ಬಾಲಕಿಯನ್ನು ಮದುವೆಯಾಗಬೇಕೆಂದು ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಆದರೆ ಆರೋಪಿಯ ಕುಟುಂಬ ಇದನ್ನು ತಿರಸ್ಕರಿಸಿತ್ತು.
ಅಪ್ರಾಪ್ತ ವಯಸ್ಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವೀಡಿಯೊ ಚಿತ್ರೀಕರಿಸಿದ್ದ ಮೂವರು ತಲೆಮರೆಸಿಕೊಂಡಿದ್ದಾರೆ.
Next Story





