ಉಡುಪಿ: ಎ.7ರಂದು ನವೀಕೃತ ಉದ್ಯಾವರ ಮಸೀದಿ ಉದ್ಘಾಟನೆ

ಉಡುಪಿ, ಎ.3: ಉದ್ಯಾವರದ ಪೇಟೆಯಲ್ಲಿರುವ ನವೀಕೃತ ಱಸಿದ್ದೀಕ್- ಇ- ಅಕ್ಬರ್‌ೞಜಾಮೀಯ ಮಸೀದಿಯ ಉದ್ಘಾಟನೆ ಎ.7ರಂದು ಸಂಜೆ 5:30ಕ್ಕೆ ನಡೆಯಲಿದೆ.
1926ರಲ್ಲಿ ಉದ್ಯಾವರ ಪರಿಸರದ ಮುಸ್ಲಿಮ್ ಬಾಂಧವರಿಗೆ ಪ್ರಾರ್ಥನೆಗಾಗಿ 19ಸೆಂಟ್ಸ್ ಜಾಗದಲ್ಲಿ ಪ್ರಾರಂಭಗೊಂಡ ಮಸೀದಿಯು 1989ರಲ್ಲಿ ಈ ಭಾಗದ ಜನಸಂಖ್ಯೆಗೆ ಅನುಗುಣವಾಗಿ ವಿಸ್ತರಣೆಗೊಂಡಿತು. ಪ್ರಸ್ತುತ ಸುಮಾರು 1000 ಮಂದಿಗೆ ಏಕಕಾಲದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಕೂಲವಾಗುವ ರೀತಿಯಲ್ಲಿ ಮಸೀದಿಯನ್ನು ಪುನರ್ ನಿರ್ಮಿಸಲಾಗಿದೆ.
ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ಅವರ ಗೌರವಾಧ್ಯಕ್ಷತೆಯಲ್ಲಿ ಮಸೀದಿ ಆಡಳಿತ ಮಂಡಳಿಯ ಅಧ್ಯಕ್ಷರ ವಿಶೇಷ ಮುತುವರ್ಜಿಯಲ್ಲಿ ಉದ್ಯಾವರ ಮುಸ್ಲಿಂ ಯುನಿಟಿ ಮತ್ತು ಊರ ದಾನಿಗಳ ಸಹಯೋಗದೊಂದಿಗೆ ಕೇವಲ ಎಂಟು ತಿಂಗಳ ಅವಧಿಯಲ್ಲಿ ವಿಸ್ತಾರವಾದ ಮಸೀದಿಯನ್ನು ಆಕರ್ಷಕ ವಾಗಿ ನಿರ್ಮಿಸಲಾಗಿದೆ.
ಪ್ರಾರ್ಥನೆ ಸಲ್ಲಿಸುವ ಸ್ಥಳವನ್ನು ಮರದ ಕೆತ್ತನೆಯಿಂದ ವಿಶೇಷವಾಗಿ ನಿರ್ಮಿಸ ಲಾಗಿದ್ದು, ಮಸೀದಿಯ ಮೇಲ್ಭಾಗದಲ್ಲಿ ರಚಿಸಲಾದ ಗೋಲಗಮ್ಮಟ ನೋಡುವರನ್ನು ಆಕರ್ಷಿಸುತ್ತಿದೆ. ಈ ಮಸೀದಿಯು ಬಡ ಕುಟುಂಬದವರ ಮದುವೆಗೆ ಸಹಕಾರ, ವಿದ್ಯಾರ್ಥಿಗಳಿಗೆ ಸಹಾಯಧನ, ಬಡ ರೋಗಿಗಳಿಗೆ ನಿರಂತರ ವೈದ್ಯಕೀಯ ನೆರವು ನೀಡುತ್ತ ಬಂದಿದೆ ಎಂದು ಪ್ರಕಟಣೆ ತಿಳಿಸಿದೆ.





