ಪೊಲೀಸ್ ಜೀಪಿಗೆ ಟಿಪ್ಪರ್ ಢಿಕ್ಕಿ

ಉಳ್ಳಾಲ, ಎ.3: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆ ಗಸ್ತು ತಿರುಗುತ್ತಿದ್ದ ಅಪರಾಧ ವಿಭಾಗದ ಉಪ ನಿರೀಕ್ಷಕರ ಜೀಪಿಗೆ ಟಿಪ್ಪರೊಂದು ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಸೋಮೇಶ್ವರ ಬಳಿ ನಡೆದಿದೆ.
ಜೀಪಿನಲ್ಲಿದ್ದ ಎಸ್‌ಐ ಸಹಿತ ಚಾಲಕ ಪವಾಡಸದೃಶ್ಯವಾಗಿ ಪಾರಾಗಿದ್ದು, ಟಿಪ್ಪರನ್ನು ಕೊಲ್ಯ ಬಳಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಉಪ ನಿರೀಕ್ಷ ಮೋಹನ್‌ದಾಸ್ ಸಂಚರಿಸುತ್ತಿದ್ದ ಜೀಪುವಿಗೆ ಲಾರಿ ಡಿಕ್ಕಿ ಹೊಡೆದಿತ್ತು. ಚಾಲಕ ಕಾನ್‌ಸ್ಟೇಬಲ್ ಪ್ರಶಾಂತ್ ಮತ್ತು ಮೋಹನ್‌ದಾಸ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಪೊಲೀಸರ ವಾಹನಕ್ಕೆ ಡಿಕ್ಕಿ ಹೊಡೆಸಿದ ಚಾಲಕ ಬೆದರಿ ಟಿಪ್ಪರನ್ನು ನಿಲ್ಲಿಸದೆ ಪರಾರಿಯಾಗಿದ್ದು ಬಳಿಕ ಟಿಪ್ಪರನ್ನು ಕೊಲ್ಯದಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





