ಉದ್ಯಾವರ ಮಖಾಂ ಶೆರೀಫ್ ಹರಿಕೆ ವಾರ್ಷಿಕ (ಆಂಡ್ ನೇರ್ಚೆ) ಸಮಾಪ್ತಿ

ಕುಂಜತ್ತೂರು, ಎ.3: ಉದ್ಯಾವರ ಸಯ್ಯದ್ ಶಹೀದ್ ವಲಿಯುಲ್ಲಾಹಿ (ರ. ಅ) ರವರ ಹೆಸರಿನಲ್ಲಿ ಕಳೆದ ಐದು ದಿವಸಗಳಲ್ಲಾಗಿ ಉದ್ಯಾವರ ಸಾವಿರ ಜುಮಾ ಮಸೀದಿ ವಠಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ಹರಿಕೆ ವಾರ್ಷಿಕ (ಆಂಡ್ ನೇರ್ಚೆ) ರವಿವಾರ ಸಮಾಪ್ತಿಗೊಂಡಿತು.
ರವಿವಾರ ರಾತ್ರಿ ಅಸಯ್ಯದ್ ಅಬ್ದುಲ್ ರಹ್ಮಾನ್ ಶಹೀರ್ ಅಲ್ ಬುಖಾರಿ ತಂಘಲ್ ಮಲ್ ಹರ್ ರವರ ಮಖಾಂ ಝಿಯಾರತಿನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು.
ಬಳಿಕ ವೇದಿಕೆಯಲ್ಲಿ ದರ್ಗಾ ಶೆರೀಫ್ ಅಧ್ಯಕ್ಷ ಎ ಕೆ ಮೋನು ಹಾಜಿ ಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಉದ್ಯಾವರ ಜಮಾಹತ್ ಅಧ್ಯಕ್ಷ ಅತ್ತಾವುಲ್ಲ ತಂಘಲ್ ಉದ್ಘಾಟಿಸಿದರು. ಬಳಿಕ ಅಂತರಾಷ್ಟ್ರೀಯ ಖ್ಯಾತಿಯ ವಾಗ್ಮಿ ನೌಶಾದ್ ಬಾಖವಿ ತಿರುವನಂತಪುರಂ ಮುಖ್ಯ ಪ್ರಭಾಷಣ ಮಾಡಿದರು.
ಈ ಸಂದರ್ಭ ವೇದಿಕೆಯಲ್ಲಿ ಪೊಸೋಟು ಜಮಾಹತ್ ಅಧ್ಯಕ್ಷ ಆರ್ ಕೆ ಬಾವ ಹಾಜಿ, ಮಚ್ಚಂಪಾಡಿ ಜಮಾಹತ್ ನ ಪಿ ಎಚ್ ಅಬ್ದುಲ್ ಹಮೀದ್, ಪೊಸೋಟು ಮಲ್ ಹರ್ ನ ಹಸನ್ ಕುಂಞಿ, ಸೈಫುಲ್ಲ ತಂಘಲ್, ಎಂ ಕೆ ಇ ಅಬ್ಬಾಸ್, ಜಮಾಹತ್ ಕಾರ್ಯದರ್ಶಿ ಖಾದರ್ ಫಾರೂಕ್, ಜಮಾಹತ್ ಖತೀಬ್ ಅಬ್ದುಸ್ಸಲಾಂ ಮದನಿ, ಜಮಾಹತ್ ಮುದರ್ರಿಸ್ ಅಬ್ದುಲ್ ಖಾದರ್ ಮುಸ್ಲಿಯಾರ್, ಅಬೂಬಕ್ಕರ್ ಮಾಹಿನ್, ಇಬ್ರಾಹಿಂ ಉಮ್ಮರ್ ಹಾಜಿ, ನಿಝಾರ್, ಹಮೀದ್ ತಂಘಲ್, ಪೂಕುಂಞಿ ತಂಘಲ್, ಸೂಫಿ ಹಾಜಿ , ಬಾವ ಹಾಜಿ ಸೇರಿದಂತೆ ಹಲವು ಗಣ್ಯರು ಉಪಸ್ಥರಿದ್ದರು.







