ಸಚಿನ್ ಕುರಿತ ಸಾಕ್ಷಚಿತ್ರ ಬಿಡುಗಡೆಗೆ ಸಜ್ಜು
ಮುಂಬೈ, ಎ.3: ಕ್ರಿಕೆಟಿಗ ಸಚಿನ್ ತೆಂಡುಲ್ಕರ್‌ರ ಜೀವನಾಧರಿತ ನೂತನ ಸಾಕ್ಷಚಿತ್ರ ತೆಂಡುಲ್ಕರ್‌ರ 44ನೆ ಜನ್ಮದಿನದಂದು ಬಿಡುಗಡೆಯಾಗಲಿದೆ.
ಲಿಟಲ್ ಮಾಸ್ಟರ್ ಶೀರ್ಷಿಕೆಯ ಕಿರು ಚಿತ್ರ ಎ.23 ರಂದು ಸೋನಿ ಇಎಸ್‌ಪಿಎನ್‌ನಲ್ಲಿ ಪ್ರಸಾರವಾಗಲಿದೆ. ಆರು ವರ್ಷಗಳ ಹಿಂದೆ ಭಾರತೀಯ ಕ್ರಿಕೆಟ್ ತಂಡದ ಐತಿಹಾಸಿಕ ವಿಶ್ವಕಪ್ ಗೆಲುವಿನ ಬಗ್ಗೆಯೂ ಸಾಕ್ಷಚಿತ್ರದಲ್ಲಿ ಬೆಳಕು ಚೆಲ್ಲಲಾಗಿದೆ. ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಹಾಗೂ ಸಚಿನ್ ಹಿತೈಷಿಗಳಿಗೆ ಇದೊಂದು ಸದಾ ಕಾಲ ಶ್ರೇಷ್ಠ ಕತೆಯಾಗಿ ಉಳಿಯಲಿದೆ. ಸಚಿನ್‌ರೊಂದಿಗೆ ಕೆಲವು ಸಮಯ ಕಳೆಯುವ ಸೌಭಾಗ್ಯ ನನಗೆ ಲಭಿಸಿತ್ತು. 2011ರ ವಿಶ್ವಕಪ್ ಗೆದ್ದ ಕ್ಷಣವನ್ನು ಅವರು ನನ್ನೊಂದಿಗೆ ಮೆಲುಕು ಹಾಕಿದ್ದರು. ಸಹ ಆಟಗಾರರು ಸಚಿನ್‌ರೊಂದಿಗಿನ ತಮ್ಮ ಪಯಣವನ್ನು ವಿವರಿಸಿದ್ದಾರೆ ಎಂದು ಚಿತ್ರದ ನಿರ್ದೇಶಕ ಗೌತಮ್ ಚೋಪ್ರಾ ಹೇಳಿದ್ದಾರೆ.
Next Story





