ರಿಯಾದ್: ಕೆಸಿಎಫ್ ರಿಯಾದ್ ಝೋನಲ್ ಮಹಾಸಭೆ

ರಿಯಾದ್, ಏ.5: ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನಲ್ ಸಮಿತಿಯ ನಾಲ್ಕನೇ ವಾರ್ಷಿಕ ಮಹಾಸಭೆಯು ಇಲ್ಲಿನ ಕೇಂದ್ರ ಕಚೇರಿಯಲ್ಲಿ ನಡೆಯಿತು. ಝೋನಲ್ ಅಧ್ಯಕ್ಷ ನಝೀರ್ ಕಾಶಿಪಟ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಪ್ರ. ಕಾರ್ಯದರ್ಶಿ ಫಾರೂಕ್ ಅಬ್ಬಾಸ್ ಉಳ್ಳಾಲ್ ಗತ ವರ್ಷದ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಉಳಿದಂತೆ ವಿವಿಧ ವಿಭಾಗಗಳ ಪೈಕಿ ಸಾಂತ್ವನ ಗುಂಪಿನ ವಿಸ್ತೃತ ವರದಿಯನ್ನು ಆಯಾ ಗುಂಪಿನ ನಾಯಕ ಸಲೀಂ ಕನ್ಯಾಡಿ ಹಾಗೂ ಸಾರ್ವಜನಿಕ ಸಂಪರ್ಕ ವಿಭಾಗದ ವರದಿಯನ್ನು ನಿಝಾಮುದ್ದೀನ್ ಸಾಗರ ಮಂಡಿಸಿದರು.
ಇನ್ನುಳಿದ ಎರಡು ವಿಭಾಗಗಳಾದ ಶಿಕ್ಷಣ ಹಾಗೂ ಸಂಘಟನಾ ವಿಭಾಗದ ವರದಿಗಳನ್ನು ಆಯಾ ಗುಂಪಿನ ಪರವಾಗಿ ಕಾರ್ಯದರ್ಶಿ ಫಾರೂಕ್ ಅಬ್ಬಾಸ್ ಉಳ್ಳಾಲ್ ಮಂಡಿಸಿದರು. ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಯೂಸುಫ್ ಸಖಾಫಿ ಬೈತಾರ್ ಕಾರ್ಯಕ್ರಮ ಉದ್ಘಾಟಿಸಿದರು. ರಶೀದ್ ಮದನಿ ಕಿರಾಅತ್ ನಡೆಸಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಕೆಸಿಎಫ್ ರಾಷ್ಟ್ರೀಯ ಸಮಿತಿ ಸಾರ್ವಜನಿಕ ಸಂಪರ್ಕ ವಿಭಾಗದ ಅಧ್ಯಕ್ಷ ಆಸಿಫ್ ಗೂಡಿನಬಳಿ ಹಾಗೂ ದಮ್ಮಾಂ ಝೋನಲ್ ಕಾರ್ಯದರ್ಶಿ ಫೈಝಲ್ ಕೃಷ್ಣಾಪುರ ಸಭೆಗೆ ಶುಭ ಕೋರಿದರು.
ಕೆಸಿಎಫ್ ಬದಿಯ್ಯಃ ಸೆಕ್ಟರ್ ಅಧ್ಯಕ್ಷ ಉಮ್ಮರ್ ಅಳಕೆ ಮಜಲು, ಓಲ್ಡ್ ಸನಯ್ಯಃ ಸೆಕ್ಟರ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಮದನಿ, ಶಿಫಾ ಸೆಕ್ಟರ್ ಅಧ್ಯಕ್ಷ ಯೂಸುಫ್ ಕಳಂಜಿಬೈಲ್, ಗೊರ್ನಾತ ಸೆಕ್ಟರ್ ಅಧ್ಯಕ್ಷ ಮುಹಮ್ಮದ್ ಸಿತಾರ್, ಒಲಯ್ಯ ಸೆಕ್ಟರ್ ಅಧ್ಯಕ್ಷ ಮುಸ್ತಫ ಝೈನಿ, ಬತ್ತಾ ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಲತೀಫಿ, ರೌದಾ ಸೆಕ್ಟರ್ ಅಧ್ಯಕ್ಷ ಅಬ್ದುಸ್ಸಲಾಂ ಹಳೆಯಂಗಡಿ, ರಬ್ವಾ ಸೆಕ್ಟರ್ ಅಧ್ಯಕ್ಷ ಸಿರಾಜುದ್ದೀನ್ ವಳಾಲು, ನ್ಯೂ ಸನಯ್ಯ ಘಟಕ ಅಧ್ಯಕ್ಷ ಹಂಝ ಜಾಲ್ಸೂರು ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಸ್ಸಯ್ಯಿದ್ ಜಅಫರ್ ತಂಙಳ್ ದುಆ ನೆರವೇರಿಸಿದರು. ರಿಯಾದ್ ಝೋನಲ್ ಸಂಘಟನಾ ವಿಭಾಗದ ಅಧ್ಯಕ್ಷ ಸಿದ್ದೀಕ್ ಸಖಾಫಿ ಪೆರುವಾಯಿ ಆರಂಭದಲ್ಲಿ ಸ್ವಾಗತಿಸಿದರು. ಅಬ್ದುಲ್ ಬಶೀರ್ ತಲಪಾಡಿ ಕಾರ್ಯಕ್ರಮ ನಿರೂಪಿದರು.
ಹಾಲಿ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಗೆ ಚಾಲನೆ ನೀಡಲಾಯಿತು. ಚುನಾವಣಾ ವೀಕ್ಷಕರಾಗಿ ಕೆಸಿಎಫ್ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ ಆಗಮಿಸಿದ್ದರು.
ಮುಂದಿನ ಎರಡು ವರ್ಷಗಳ ಅವಧಿಗೆ
ಹನೀಫ್ ಬೆಳ್ಳಾರೆ (ಅಧ್ಯಕ್ಷರು)
ಅಬ್ದುಲ್ ಬಶೀರ್ ತಲಪಾಡಿ ( ಪ್ರ:ಕಾರ್ಯದರ್ಶಿ)
ಇಸ್ಮಾಯಿಲ್ ಕಣ್ಣಂಗಾರ್ (ಕೋಶಾಧಿಕಾರಿ)
ಸಂಘಟನಾ ವಿಭಾಗ ಅಧ್ಯಕ್ಷ: ಸಿದ್ದೀಕ್ ಸಖಾಫಿ ಪೆರುವಾಯಿ
ಸಂಘಟನಾ ವಿಭಾಗ ಕಾರ್ಯದರ್ಶಿ: ನವಾಝ್ ಚಿಕ್ಕಮಗಳೂರು
ಶಿಕ್ಷಣ ವಿಭಾಗ ಅಧ್ಯಕ್ಷ: ಅಬ್ದುಲ್ಲಾ ಸಖಾಫಿ ನಿಂತಿಕಲ್ಲು
ಶಿಕ್ಷಣ ವಿಭಾಗ ಕಾರ್ಯದರ್ಶಿ: ಹಸೈನಾರ್ ಕಾಟಿಪಳ್ಳ
ಕಛೇರಿ ವಿಭಾಗ ಅಧ್ಯಕ್ಷ: ನವಾಝ್ ಸಖಾಫಿ ಅಡ್ಯಾರ್ ಕಣ್ಣೂರು
ಕಚೇರಿ ವಿಭಾಗ ಕಾರ್ಯದರ್ಶಿ: ಸಮೀರ್ ಜೆಪ್ಪು
ವೆಲ್ಫೇರ್ ವಿಭಾಗ ಅಧ್ಯಕ್ಷ: ರಮೀಝ್ ಕುಳಾಯಿ
ವೆಲ್ಫೇರ್ ವಿಭಾಗ ಕಾರ್ಯದರ್ಶಿ: ಇಸ್ಮಾಯಿಲ್ ಜೋಗಿಬೆಟ್ಟು
ಪಬ್ಲಿಕೇಶನ್ ವಿಭಾಗ ಅಧ್ಯಕ್ಷ: ನಿಝಾಮ್ ಉಸ್ಮಾನ್ ಸಾಗರ
ಪಬ್ಲಿಕೇಶನ್ ವಿಭಾಗ ಕಾರ್ಯದರ್ಶಿ: ಮುಸ್ತಫ ಸಅದಿ ಸೂರಿಕುಮೇರು
ಆಯ್ಕೆಯಾದರು







