ನಿದ್ರೆ ಮಾತ್ರೆ ಸೇವಿಸಿ ಪ್ರಥಮ್ ಆತ್ಮಹತ್ಯೆಗೆ ಯತ್ನ

ಬೆಂಗಳೂರು, ಎ.5: ಕನ್ನಡ ಬಿಗ್ ಬಾಸ್ ಸೀಸನ್ 4 ವಿಜೇತ ಒಳ್ಳೆಯ ಹುಡ್ಗ ಪ್ರಥಮ್ ಬಸವೇಶ್ವರನಗರದ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿರುವ ಘಟನೆ ವರದಿಯಾಗಿದೆ.
ಫೇಸ್‌ಬುಕ್ ಲೈವ್‌ನಲ್ಲೇ ಪ್ರಥಮ್ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನ ನಡೆಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿರುವ ಲೈವ್ ವಿಡಿಯೋವನ್ನು ಪ್ರಥಮ್ ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ ಹಾಕಿದ್ದಾರೆ.
ಸಹ ನಿರ್ದೇಶಕ ಲೋಕೇಶ್ ಜೊತೆಗಿನ ಜಗಳದಿಂದಾಗಿ ಬೇಸತ್ತು ಆತ್ಮಹತ್ಯೆಗೆ ಮುಂದಾಗಿರುವುದಾಗಿ ಹೇಳಿರುವ ಪ್ರಥಮ್, ಲೋಕೇಶ್ ನನಗೆ ತುಂಬಾ ನೋವುಂಟು ಮಾಡಿದ್ದಾನೆ ಎಂದು ಹೇಳಿದ್ದಾರೆ.
ನಿದ್ರೆ ಮಾತ್ರೆ ಸೇವನೆಯಿಂದ ಅಸ್ವಸ್ಥರಾಗಿರುವ ಪ್ರಥಮ್ ಅವರನ್ನು ಸ್ನೇಹಿತರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಸವೇಶ್ಚರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story







