Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದಿಕ್ಕು ತಪ್ಪಿದ ಆಂದೋಲನಗಳು

ದಿಕ್ಕು ತಪ್ಪಿದ ಆಂದೋಲನಗಳು

ಡಾ. ಜೆ ಎಸ್ ಪಾಟೀಲ, ವಿಜಯಪುರಡಾ. ಜೆ ಎಸ್ ಪಾಟೀಲ, ವಿಜಯಪುರ5 April 2017 11:58 AM IST
share
ದಿಕ್ಕು ತಪ್ಪಿದ ಆಂದೋಲನಗಳು

2010-11ರಲ್ಲಿ ಭಾರತದಾದ್ಯಂತ ಆಳುವ ಪಕ್ಷದ ವಿರುದ್ಧ ಒಂದು ಸಂಘಟಿತ ರಣಕಹಳೆ ಮೊಳಗಿತ್ತು. ಅದಕ್ಕೆ ಭ್ರಷ್ಟಾಚಾರ ವಿರೋಧಿ ಮುಖವಾಡವಿತ್ತು. ಅಣ್ಣಾ ಹಝಾರೆ, ಅರವಿಂದ ಕೇಜ್ರಿವಾಲ್, ಕಿರಣ್ ಬೇಡಿ, ಯೋಗೇಂದ್ರ ಯಾದವ್, ಪ್ರಶಾಂತ ಭೂಷಣ್‌ಮುಂತಾದವರನ್ನೊಳಗೊಂಡ ತಂಡವು ಭಾರತವು ಭ್ರಷ್ಟಾಚಾರ ಮುಕ್ತವಾಗಲು ಲೋಕಪಾಲ ಮಸೂದೆಯ ಅಂಗೀಕಾರ ಒಂದೇ ಪರಮ ಮದ್ದು ಎಂದು ವಾದಿಸುತ್ತಿತ್ತು. ಆಗಿನ ಜನಾಂದೋಲನದ ಕಾವು ಇಡೀ ರಾಜಕೀಯ ಪಕ್ಷಗಳ ಬಗ್ಗೆ ಮತ್ತು ವ್ಯವಸ್ಥೆಯ ಕುರಿತು ಜನರ ಆಕ್ರೋಶವನ್ನು ಕ್ರೋಡೀಕರಿಸಲು ಸಹಕಾರಿಯಾಗಿತ್ತು. ಹೋರಾಟಗಾರರ ಬೇಡಿಕೆಯನ್ನು ಇಡಿಯಾಗಿ ಈಡೇರಿಸಬೇಕೆಂದು ಆಂದೋಲನಕಾರರಿಗೆ ಬಹಿರಂಗವಾಗಿ ಬೆಂಬಲಕ್ಕೆ ನಿಲ್ಲುವ ತಾಕತ್ತು ಅಂದು ಯಾವ ವಿರೋಧ ಪಕ್ಷಗಳಿಗೂ ಇರಲಿಲ್ಲ. ಆದರೆ ಹೋರಾಟದಿಂದ ಆಡಳಿತ ಪಕ್ಷಕ್ಕೆ ಕೆಟ್ಟ ಹೆಸರು ಬರಲಿ ಮತ್ತು ಅದರ ಲಾಭ ನೇರವಾಗಿ ತಮ್ಮ ಪಕ್ಷಕ್ಕೆ ಆಗಬೇಕೆಂದು ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ಹೊಂಚು ಹಾಕುತ್ತಿತ್ತು. ಆ ದಿಸೆಯಲ್ಲಿ ಆಂದೋಲನದ ಕಾವನ್ನು ದಿನೇದಿನೇ ಏರಿಸಲು ಬೇಕಾದ ಸಂಪನ್ಮೂಲಗಳನ್ನು ಕೆಲವು ಧಾರ್ಮಿಕ, ಸಾಮಾಜಿಕ ಮತ್ತು ಉದ್ಯಮಿಗಳಿಂದ ಕ್ರೋಡೀಕರಿಸಿ ಆ ಆಂದೋಲನಕಾರರ ಬೆನ್ನಿಗೆ ನಿಂತದ್ದು ಬಹಿರಂಗ ಸತ್ಯ. ಮೇಲೆ ಹೆಸರಿಸಿದ ಈ ಕೂಟ ಅಂದು ಪ್ರಮುಖ ವಿರೋಧ ಪಕ್ಷವೊಂದರ ಏಜೆಂಟರಂತೆ ಇಡೀ ಆಂದೋಲನವನ್ನೇ ಹೈಜಾಕ್ ಮಾಡಿತ್ತು. ನಂತರದ ಬೆಳವಣಿಗೆ ನಮಗೆಲ್ಲ ತಿಳಿದೆ ಇದೆ. ಈಗ ಯಾರೊಬ್ಬರಿಗೆ ಕೂಡಾ ಲೋಕಪಾಲ ಮಸೂದೆಯ ಅಂಗೀಕಾರವಾಗಲಿ, ಸಂಸತ್ತಿನಲ್ಲಿ ಮಹಿಳಾ ಸಬಲೀಕರಣದ ಅಂಗವಾಗಿ ರೂಪುಗೊಂಡ ಮಹಿಳಾ ಮೀಸಲಾತಿಯ ಮಸೂದೆಯಾಗಲಿ ಜ್ಞಾಪಕದಲ್ಲಿಯೇ ಇಲ್ಲ. ಅಂದರೆ ಅಂದು ಅಧಿಕಾರದಲ್ಲಿದ್ದ ಪಕ್ಷವನ್ನು ಗುರಿಯಾಗಿಸಿಕೊಂಡು ಅಧಿಕಾರದಿಂದ ಇಳಿಸುವ ಏಕೈಕ ಗುರಿ ಆ ಆಂದೋಲನದ್ದಾಗಿತ್ತು ಎನ್ನುವುದಕ್ಕೆ ಪುಷ್ಟಿಯೊದಗಿಸುವಂತೆ ಆಂದೋಲನದ ರೂವಾರಿಗಳ ಗಾಢ ಮೌನ ದೃಢೀಕರಿಸುತ್ತಿದೆ. ಲೋಕಪಾಲ ಮಸೂದೆ ಅಂಗೀಕಾರವಾದಷ್ಟೇ ಖುಷಿಯಲ್ಲಿ ಈ ಆಂದೋಲನಕಾರರು ಮೌನಕ್ಕೆ ಶರಣಾಗಿದ್ದಾರೆ.

ನಮ್ಮಲ್ಲಿ ಹೋರಾಟಗಳು ಹುಟ್ಟುವುದು, ರಾಜಕೀಯ ತಿರುವುಗಳನ್ನು ಪಡೆಯುವುದು, ಅವು ನಿರ್ಧರಿತ ಗುರಿ ತಲುಪುವ ಮೊದಲೇ ಕೆಲವರ ಸ್ವಹಿತಾಸಕ್ತಿಯ ದಾಳಗಳಾಗಿ ಅಲ್ಲಿಯೇ ಸ್ಥಗಿತವಾಗುವ ಪರಿಯಿಂದ ಜನರು ಆಂದೋಲನಗಳನ್ನು ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ. ಪ್ರತಿಯೊಂದು ಹೋರಾಟದ ಹಿಂದೆ ಕಾಣದ ಕೈಗಳು ಕೆಲಸಮಾಡುವುದು, ಹಣಕಾಸಿನ ನೆರವು ನೀಡುವುದು, ಮಾಧ್ಯಮಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಚಾರ ನೀಡುವುದು ಹಾಗೂ ಅವುಗಳಿಗೊಂದು ಜನಪರ ಚಿಂತನೆಯ ಹೊರ ಮತ್ತು ಸ್ವಹಿತಾಸಕ್ತಿಯ ಮತ್ತೊಂದು ಗುಪ್ತವಾದ ಒಳ ಉದ್ದೇಶವಿರುವುದು ಚಳವಳಿಗಳ ನೈಜ ಅರ್ಥವನ್ನೇ ಅಪವಿತ್ರಗೊಳಿಸಿವೆ. ಅದಕ್ಕಾಗಿಯೇ ಹೋರಾಟಗಳನ್ನು, ಹೋರಾಟಗಾರರನ್ನು ಜನಸಾಮಾನ್ಯ ತೀರ ಸಂಶಯದಿಂದ ಮತ್ತು ಕುಚೋದ್ಯದಿಂದ ಕಾಣುವಂಥ ಪರಿಸರ ನಿರ್ಮಾಣವಾಗಿ ನಿಂತಿದೆ. ಇಂಥ ಸ್ವಹಿತಾಸಕ್ತ ಆಂದೋಲನಗಳ ಮುಖೇನ ಪ್ರವರ್ಧಮಾನಕ್ಕೆ ಬಂದು ರಾಜಕೀಯ-ಆರ್ಥಿಕ ಸ್ಥಾನಮಾನಗಳನ್ನು ಪಡೆದವರು ತಮ್ಮನ್ನು ತಾವು ಹೋರಾಟದ ಹಿನ್ನೆಲೆಯಿಂದ ಬಂದವರೆಂದು ಸಮರ್ಥಿಸಿಕೊಳ್ಳುವುದು ಇಂದು ಹಾಸ್ಯಾಸ್ಪದ ಮತ್ತು ನಗೆಪಾಟಲಿನ ವಿಷಯವಾಗಿದೆ.

ಭಾರತದಲ್ಲಿ ಆಡಳಿತ ಪಕ್ಷದ ಪರ ಇಷ್ಟೊಂದು ದೊಡ್ಡ ಪ್ರಮಾಣದ ಗುಂಪು ಬೃಹತ್ ಆಂದೋಲನ ಹಮ್ಮಿಕೊಂಡಿದ್ದು ಬಹುಶಃ ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಪ್ರಥಮ ಅನ್ನಬಹುದು. ಎಪ್ಪತ್ತು-ಎಂಬತ್ತರ ದಶಕದಲ್ಲಿ ಇಂದಿರಾರ ಸರ್ವಾಧಿಕಾರಿ ನೀತಿ ಮತ್ತು ತುರ್ತುಪರಿಸ್ಥಿತಿಯಂತಹ ಜನವಿರೋಧಿ ಶಾಸನದ ಘೋಷಣೆಯ ರೋಷದಿಂದ ಜಯಪ್ರಕಾಶ್‌ನಾರಾಯಣ ನೇತೃತ್ವದಲ್ಲಿ ರೂಪುಗೊಂಡ ಆಂದೋಲನ-ಅದೊಂದು ಸಹಜ ಜನಾಕ್ರೋಶದಿಂದ ಜನ್ಮತಳೆದ ಮಹಾ ಸಮರವಾಗಿತ್ತು. ಅಲ್ಲಿ ನೇರವಾಗಿ ಇಂದಿರಾರನ್ನು, ಅವರ ಸರ್ವಾಧಿಕಾರತ್ವವನ್ನು ಕೇಂದ್ರವಾಗಿಸಿಕೊಂಡು ಸಹಜವಾಗಿ ಹೋರಾಟವು ರೂಪುಪಡೆಯುತ್ತ್ತಾ ಹೋಗಿತ್ತು. ಅಂದಿನ ಹೋರಾಟ ವ್ಯಕ್ತಿ ಕೇಂದ್ರಿತ ರಾಜಕೀಯ ಉನ್ನತೀಕರಣದ ಮೂಲಕ ಸ್ವಹಿತಾಸಕ್ತಿ ಕಾಪಾಡಿಕೊಳ್ಳುವ ಕಪಟೋದ್ಯಮಿಗಳ ಪ್ರಾಯೋಜಿತ ಅಣ್ಣಾ ಹೋರಾಟದಂತಿರಲಿಲ್ಲ. ಅಂದಿನ ಜನಾಂದೋಲನ ಇಂದಿರಾ ವಿರೋಧಿಗಳಿಗೆಲ್ಲ ಸಮಾನ ರಾಜಕೀಯ ವೇದಿಕೆಯನ್ನೊದಗಿಸಿತ್ತು. ವಿರೋಧ ಪಕ್ಷಗಳಲ್ಲಿ ಒಗ್ಗಟ್ಟನ್ನು ಹುಟ್ಟುಹಾಕುವಲ್ಲಿ ಸಫಲವಾಗಿತ್ತು. ಹಾಗಾಗಿ ಜೆಪಿ ಚಳವಳಿ ಭಾರತದ ರಾಜಕೀಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದೆ.

 ಅಣ್ಣಾ ಹಝಾರೆೆ ನೇತೃತ್ವದ ಲೋಕಪಾಲ ಹೋರಾಟ ದಿಟದಲ್ಲಿ ಭಾರತದ ಒಟ್ಟಾರೆ ರಾಜಕೀಯ ವ್ಯವಸ್ಥೆಯನ್ನು ಸರಿದಾರಿಗೆ ತರುವಲ್ಲಿ ಜನರಲ್ಲಿ ಹೋರಾಟದ ಕಿಚ್ಚನ್ನು ಹಚ್ಚುವ ಕೆಲಸಮಾಡಬೇಕಾಗಿತ್ತು. ಆರಂಭದಲ್ಲಿ ಜನತೆಗೆ ಹಾಗನ್ನಿಸಿ ಆಶಾಭಾವನೆಯೂ ಮೂಡಿಸಿತ್ತು. ಕ್ರಮೇಣ ಅದು ಪ್ರಾಯೋಜಿತ ಆಂದೋಲನವೆಂಬುದನ್ನು ಮುಚ್ಚಿಡಲಾಗದೆ ಬಹಿರಂಗಗೊಂಡಾಗ ಜನ ಭ್ರಮನಿರಸನಗೊಂಡರು. ಪ್ರಜಾತಂತ್ರದ ಲೋಪದೋಷಗಳ ನೆರವಿನಿಂದ ದೇಶದಲ್ಲಿ ಕರ್ಮಠರು ಅಧಿಕಾರದ ಗದ್ದುಗೆಯನ್ನು ಏರಿ ಕುಳಿತರು. ಸರ್ವಾಧಿಕಾರ, ದೇಶದಲ್ಲಿ ಅಸಹಿಷ್ಣುತೆ, ಕೋಮುದ್ವೇಷಗಳು ಸಹೋದರತೆ, ಜಾತ್ಯಾತೀತತೆ, ಜನತಂತ್ರದ ಮೌಲ್ಯಗಳ ಮೇಲೆ ದಾಳಿ ಆರಂಭಿಸಿದವು. ಅಣ್ಣಾ ಹೋರಾಟದ ಪ್ರಮುಖ ಬೇಡಿಕೆಯಾದ ಲೋಕಪಾಲ ಮಸೂದೆಯನ್ನು ಜನರ ಮನಸ್ಸಿನಿಂದ ದೂರಮಾಡಲಾಯಿತು. ಅದಕ್ಕಾಗಿ ಉದ್ಯಮಿಗಳ ಹಿಡಿತದಲ್ಲಿರುವ ಮಾಧ್ಯಮಗಳು ಅಹರ್ನಿಶಿ ದುಡಿಯಲಾರಂಭಿಸಿದವು. ಅಭಿವ್ಯಕ್ತಿ ಸ್ವಾತಂತ್ರವನ್ನು ಹುಸಿ ದೇಶಭಕ್ತಿಯ ಹೆಸರಿನಲ್ಲಿ ಕಸಿಯಲಾಯಿತು. ಸ್ವತಃ ಅಣ್ಣಾ ಕೂಡಾ ಲೋಕಪಾಲ ಮಸೂದೆಯನ್ನು ಮರೆತು ಬೇಕಾದದ್ದನ್ನು ಸಾಧಿಸಿದ ಭಾವದಲ್ಲಿ ತಮ್ಮ ಸ್ವಗ್ರಾಮ ರಾಳೇಗಾಂವ್ ಸಿದ್ಧಿಯಲ್ಲಿ ನೆಮ್ಮದಿಯ ಜೀವನಕ್ಕೆ ಶರಣಾದರು. ಕೇಜ್ರಿವಾಲ ವೃತ್ತಿ ರಾಜಕಾರಣಿಯಾಗಿ ಮಾರ್ಪಾಟಾದರು, ಕಿರಣ್ ಬೇಡಿ ರಾಜಕೀಯ ನಿರಾಶ್ರಿತರ ಗಂಜಿ ಕೇಂದ್ರ ಸೇರಿ ಕುಳಿತರು. ಅಧಿಕಾರ ವಂಚಿತ ಯೋಗೇಂದ್ರ ಯಾದವ್, ಪ್ರಶಾಂತ ಭೂಷಣ್ ಅತೃಪ್ತ ಆತ್ಮಗಳಂತೆ ಅಲೆದಾಡಲಾರಂಭಿಸಿದರು. ದೇಶದ ಚುಕ್ಕಾಣಿಯನ್ನು ತಮ್ಮ ಕಪಿಮುಷ್ಟಿಗೆ ಪಡೆದ ಕರ್ಮಠ ಸಂಘಟನೆಗಳು ಹಾಗೂ ಕಪಟೋದ್ಯಮಿಗಳು ಅದರ ಸಂಪೂರ್ಣ ಲಾಭಪಡೆಯುವತ್ತ ಅಟ್ಟಹಾಸದಲ್ಲಿ ಮೆರೆಯಲಾರಂಭಿಸಿದರೆ ಜನಸಾಮಾನ್ಯ ತನ್ನ ಎಂದಿನ ತಾಪತ್ರಯಗಳೊಂದಿಗೆ ಇನ್ನಷ್ಟು ತೊಂದರೆಗಳನ್ನು ಮೈಮೇಲೆ ಎಳೆದುಕೊಂಡು ಅನಾಥನಾಗಿ ಉಳಿದುಬಿಟ್ಟಿದ್ದಾನೆ.

share
ಡಾ. ಜೆ ಎಸ್ ಪಾಟೀಲ, ವಿಜಯಪುರ
ಡಾ. ಜೆ ಎಸ್ ಪಾಟೀಲ, ವಿಜಯಪುರ
Next Story
X