8ರಂದು ಕಾವೂರು ಸರಕಾರಿ ಕಾಲೇಜಿನಲ್ಲಿ ಉದ್ಯೋಗ ಮೇಳ: ಶಾಸಕ ಬಾವ
ಮಂಗಳೂರು, ಎ.5: ನಗರ ಉತತಿರ ಶಾಸಕರಾದ ಬಿ.ಎ. ಮೊಯ್ದೀನ್ ಬಾವಾ ನೇತೃತ್ವದಲ್ಲಿ ಕಾವೂರಿನ ಸಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎ.8ರಂದು ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಶಾಸಕ ಮೊಯ್ದೀನ್ ಬಾವಾ ಅವರ ಪುತ್ರ ಮೆಹಸೂಫ್ ಬಾವ ಮಾಹಿತಿ ನೀಡಿದರು. ಉದ್ಯೋಗ ಮೇಳದಲ್ಲಿ ದೇಶ ಹಾಗೂ ವಿದೇಶಗಳ 100ಕ್ಕೂ ಅಧಿಕ ಉದ್ಯೋಗದಾತ ಕಂಪೆನಿಗಳು ಭಾಗವಹಿಸಲಿವೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಬಿಇ, ಡಿಪ್ಲೊಮಾ, ಐಐಟಿ ಸೇರಿದಂತೆ ಎಲ್ಲಾ ವಿಧದ ಶೈಕ,್ಣಕ ವಿದ್ಯಾಭ್ಯಾಸತೆಗೆ ಅನುಗುಣವಾಗಿ ಕಂಪನಿಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿವೆ. ಅಭ್ಯರ್ಥಿಗಳು ಮತ್ಮ ಮೂಲ ದಾಖಲೆಗಳು, ಅವುಗಳ ಎರಡು ನಕಲು ಪ್ರತಿಗಳೊಂದಿಗೆ ಉದ್ಯೋಗ ಮೇಳಕ್ಕೆ ಹಾಜರಾಗತಕ್ಕದ್ದು. ಬೆಳಗ್ಗೆ 9 ಗಂಟೆಯಿಂದ 3 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಉದ್ಘಾಟನೆಯನ್ನು ಶಾಸಕ ಮೊಯ್ದೀನ್ ಬಾವಾ ನೆರವೇರಿಸಲಿದ್ದಾರೆ ಎಂದವರು ಹೇಳಿದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮನೋಜ್ ಲೂಯಿಸ್ ಮಾತನಾಡಿ, ಉದ್ಯೋಗ ಮೇಳದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತತಿದೆ. ಕಳೆದ ಸುಮಾರು ಮೂರು ವಾರಗಳಿಂದ ಉದ್ಯೋಗ ಮೇಳದ ಕುರಿತಂತೆ ಸಿದ್ಧತೆಗಳು ನಡೆಯುತಿತಿವೆ ಎಂದರು. 1000ಕ್ಕೂ ಅಧಿಕ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಇದ್ದು, 600 ಮಂದಿ ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಕಂಪನಿಗಳಿಂದ ಉದ್ಯೋಗದ ಆದೇಶ ಪತ್ರ ನೀಡಲು ಸೂಚಿಸಲಾಗಿದೆ. ಕಳೆದ ವರ್ಷವೂ ಕಾಲೇಜು ಮಟ್ಟದ ಉದ್ಯೋಗ ಮೇಳವನ್ನು ಕಾಲೇಜಿನಲ್ಲಿ ಆಯೋಜಿಸಲಾಗಿತುತಿ. ಆ ಸಂದರ್ಭ 232 ಅಭ್ಯರ್ಥಿಗಳು ಭಾಗವಹಿಸಿದ್ದು, ಅವರಲ್ಲಿ 137 ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿದೆ. ಈ ಬಾರಿ ಶೇ. 80ರಷ್ಟು ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗ ದೊರಕುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು. ಕಾಲೇಜಿನಲ್ಲಿ ಉದ್ಯೋಗ ಮಾಹಿತಿ ಕೇಂದ್ರಕ್ಕೆ ಚಾಲನೆಉದ್ಯೋಗ ಮೇಳದ ಸಂದರ್ಭ ಕಾಲೇಜಿನಲ್ಲಿ ಉದ್ಯೋಗ ಮಾಹಿತಿ ಕೇಂದ್ರವನ್ನು ಆರಂಭಿಸಲು ನಿರ್ಧರಿಸಲಾಗಿದೆ. ಈ ಮೂಲಕ ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ಹೆಸರನ್ನು ನೋಂದಾಯಿಸಿಕೊಳ್ಳಲಾಗುವುದು. ಬಳಿಕ ಉದ್ಯೋಗಾಕಾಂಕ್ಷಿಗಳ ಪಟ್ಟಿಯನ್ನು ಸಂಬಂಧಪಟ್ಟ ಕಂಪನಿಗಳಿಗೆ ಒದಗಿಸಿ, ಆಯ್ಕೆ ಪ್ರಕ್ರಿಯೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಮನೋಜ್ ಲೂಯಿಸ್ ತಿಳಿಸಿದರು. ಗೋಷ್ಠಿಯಲ್ಲಿ ಕೇಶವ ಸನಿಲ್, ಡಾ. ಭಾಸ್ಕರ್, ಉತತಿಮ್ ಆಳ್ವ ಉಪಸ್ಥಿತರಿದ್ದರು.





