ಇನ್ನು, ಚಿಕಿತ್ಸೆ ಖರ್ಚು ಹೋಲಿಸಿ ನೋಡಿ ಆಸ್ಪತ್ರೆ ಆಯ್ಕೆಮಾಡಿಕೊಳ್ಳಬಹುದು.

ಮುಂಬೈ,ಎ.5: ಚಿಕಿತ್ಸೆ ಖರ್ಚುಗಳನ್ನು ಹೋಲಿಕೆ ಮಾಡಿ ನೋಡಿ ತಮಗೆ ಸೂಕ್ತವಾದ ಆಸ್ಪತ್ರೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ತಿಳಿದು ಬಂದಿದೆ. ಅರೋಗ್ಯ ಜೀವವಿಮಾ ಕಂಪೆನಿಗಳ ವೈಧ್ಯಕೀಯ ಸಹಯಾಕ, ವಿಸ್ತಾರ್ ಮುಂತಾದ ವೆಬ್‌ಸೈಟ್‌ಗಳಲ್ಲಿ ಚಿಕಿತ್ಸಾ ವೆಚ್ಚವನ್ನು ಹೋಲಿಸಿನೋಡುವ ಸೌಕರ್ಯ ಬಂದಿದೆ.
ಚಿಕಿತ್ಸೆ ಖರ್ಚು ಮೊದಲೆ ಅರಿಯಲು ವೆಬ್‌ಸೈಟ್ ಮೂಲಕ ಸಾಧ್ಯವಿರುವುದರಿಂದ ರೋಗಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ಚಿಕಿತ್ಸೆಗಾಗಿ ಹಣ ಸಂಗ್ರಹಿಸುವುದು ಸುಲಭ ಆಗಲಿದೆ. ಚಿಕಿತ್ಸೆ ಪ್ಯಾಕೇಜ್‌ನ ಖರ್ಚು ಅಲ್ಲದೆ ರೂಮ್ ಬಾಡಿಗೆ , ಸರ್ಜನ್ ಖರ್ಚು, ವೈಧ್ಯಕೀಯ ತಪಾಸಣೆಗೆ ಅಗತ್ಯವಿರುವ ಮೊತ್ತ ಮುಂತಾದುವುಗಳ ವಿವರವನ್ನು ವೆಬ್‌ಸೈಟ್‌ನಿಂದ ಪಡೆಯಬಹುದು. ಒಂದೇ ನಗರದ ವಿವಿಧ ಆಸ್ಪತ್ರೆಯಲ್ಲಿ ರೂಮ್‌ಬಾಡಿಗೆ ಎಷ್ಟು ಎಂದು ಹೋಲಿಸಿನೋಡುವ ಸೌಕರ್ಯವೂ ಈ ವೆಬ್‌ಸೈಟ್‌ಗಳಿಂದ ನಮಗೆ ದೊರಕಲಿದೆ.
Next Story