ಡೆಲ್ಟಾ ಕಣ್ಣಿನ ಆಸ್ಪತ್ರೆ ವತಿಯಿಂದ ಆಟೋ ಚಾಲಕರಿಗೆ ಉಚಿತ ಕಣ್ಣಿನ ತಪಾಸಣೆ

ಮಂಗಳೂರು, ಎ.5: ಆಟೋ ರಿಕ್ಷಾ ಚಾಲಕರಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ನಗರದ ಡೆಲ್ಟಾ ಕಣ್ಣಿನ ಆಸ್ಪತ್ರೆ ಹಮ್ಮಿಕೊಂಡಿದೆ. ಎ.5ರಿಂದ ಎ. 15ರ ತನಕ (ರವಿವಾರ ಹೊರತುಪಡಿಸಿ) ದಿನಾ ಬೆಳಗ್ಗೆ ಗಂ. 10 ರಿಂದ ಸಂಜೆ ಗಂ. 6 ರ ತನಕ ಈ ಶಿಬಿರ ನಡೆಯಲಿದ್ದು, ಉಚಿತ ಕಣ್ಣಿನ ತಪಾಸಣೆಯ ಜೊತೆಗೆ ಕನ್ನಡಕ ಖರೀದಿಸುವವರಿಗೆ ಗ್ಲಾಸ್ (ಲೆನ್ಸ್)ನ ಬೆಲೆಯಲ್ಲಿ ರೂ. 600 ತನಕ ಕಡಿತ ಹಾಗೂ ವಿಶೇಷ ಚಿಕಿತ್ಸೆ ಅಗತ್ಯವಿರುವವರಿಗೆ ಶೇ. 10% ರಿಯಾಯತಿ ದೊರೆಯಲಿದೆ.
ಮಂಗಳೂರು ನಗರ ಮತ್ತು ತಾಲೂಕಿನ ಆಟೋ ಚಾಲಕರು ಈ ಶಿಬಿರದ ಪ್ರಯೋಜನ ಪಡೆಯಲು ಅರ್ಹರಾಗಿದ್ದು, ಆಸಕ್ತರು ಮಂಗಳೂರಿನ ಬೆಂದೂರ್‌ವೆಲ್ ಮುಖ್ಯ ರಸ್ತೆಯಲ್ಲಿರು (ಹಿಂದಿನ ವಾಸನ್ ಕಣ್ಣಿನ ಆಸ್ಪತ್ರೆ ಕಟ್ಟಡ) ಡೆಲ್ಟಾ ಕಣ್ಣಿನ ಆಸ್ಪತ್ರೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
Next Story





