13,013 ಸ್ವಾತಂತ್ರ ಹೋರಾಟಗಾರರು, 24,447 ಅವಲಂಬಿತರಿಗೆ ಪಿಂಚಣಿ

ಹೊಸದಿಲ್ಲಿ,ಎ.5: 13,013 ಸ್ವಾತಂತ್ರ ಹೋರಾಟಗಾರರು ಮತ್ತು ಸ್ವಾತಂತ್ರ ಹೋರಾಟಗಾರರ 24,447 ಅವಲಂಬಿತರು ಸ್ವತಂತ್ರತಾ ಸಮ್ಮಾನ್ ಪಿಂಚಣಿ ಯೋಜನೆಯಡಿ ಸರಕಾರದಿಂದ ಪಿಂಚಣಿಗಳನ್ನು ಪಡೆಯುತ್ತಿದ್ದಾರೆ ಎಂದು ಸಹಾಯಕ ಗೃಹಸಚಿವ ಹಂಸರಾಜ್ ಆಹಿರ್ ಅವರು ಬುಧವಾರ ರಾಜ್ಯಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ ತಿಳಿಸಿದರು.
ಅಂಡಮಾನಿನಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ರಾಜಕೀಯ ಕೈದಿಗಳು ಅಥವಾ ಅವರ ಪತ್ನಿ/ಪತಿ ಮಾಸಿಕ 30,000 ರೂ.,ಬ್ರಿಟಿಷ್ ಭಾರತದ ಹೊರಗೆ ಜೈಲುಶಿಕ್ಷೆ ಅನುಭವಿಸಿದ್ದ ಸ್ವಾತಂತ್ರ ಹೋರಾಟಗಾರರು ಮಾಸಿಕ 28,000 ರೂ. ಮತ್ತು ಅವಲಂಬಿತ ಹೆತ್ತವರು/ಅರ್ಹ ಪುತ್ರಿಯರು ಮಾಸಿಕ 13,000 ರೂ.ಗಳಿಂದ 15,000 ರೂ.ವರೆಗೆ ಪಿಂಚಣಿಗಳನ್ನು ಪಡೆಯುತ್ತಿದ್ದಾರೆ ಎಂದ ಅವರು, ಸ್ವಾತಂತ್ರ ಹೋರಾಟಗಾರರು ಉಚಿತ ರೈಲ್ವೆ ಪಾಸ್, ಕೇಂದ್ರ ಸರಕಾರದ ಆರೋಗ್ಯ ಯೋಜನೆಯಡಿ ವೈದ್ಯಕೀಯ ಸೌಲಭ್ಯಗಳು, ವಾಸಕ್ಕೆ ಮನೆ ಮತ್ತು ಇತರ ಪ್ರಯೋಜನಗಳನ್ನೂ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
Next Story





