ತಿಕ್ರಿತ್‌ನಲ್ಲಿ ಆತ್ಮಹತ್ಯಾ ದಾಳಿ: 31 ಸಾವು

ಬಗ್ದಾದ್, ಎ. 5: ಇರಾಕ್‌ನ ತಿಕ್ರಿತ್ ನಗರದಲ್ಲಿ ಆತ್ಮಹತ್ಯಾ ಬಾಂಬರ್‌ಗಳು ನಡೆಸಿದ ದಾಳಿಯೊಂದರಲ್ಲಿ ಕನಿಷ್ಠ 31 ಮಂದಿ ಮೃತಪಟ್ಟಿದ್ದಾರೆ ಹಾಗೂ ಕನಿಷ್ಠ 42 ಮಂದಿ ಗಾಯಗೊಂಡಿದ್ದಾರೆ ಎಂದು ಸೇನೆ ಮತ್ತು ಪೊಲೀಸ್ ಅಧಿಕಾರಿಗಳು ಇಂದು ತಿಳಿಸಿದರು.
ಮಧ್ಯ ತಿಕ್ರಿತ್‌ನಲ್ಲಿ ಮಂಗಳವಾರ ರಾತ್ರಿ ಮೂವರು ಭಯೋತ್ಪಾದಕರು ಗುಂಡು ಹಾರಾಟ ನಡೆಸುವುದರೊಂದಿಗೆ ದಾಳಿ ಆರಂಭಗೊಂಡಿತು ಎಂದು ಪೊಲೀಸ್ ಲೆಫ್ಟಿನೆಂಟ್ ಕರ್ನಲ್ ಒಬ್ಬರು ತಿಳಿಸಿದರು.
ಬಳಿಕ ಅವರು ಈ ಸ್ಥಳದಲ್ಲಿರುವ ಮನೆಗಳ ಒಳಗೆ ತಮ್ಮನ್ನು ತಾವು ಸ್ಫೋಟಿಸಿಕೊಂಡರು.
ದಾಳಿಗೆ ಯಾರೂ ಹೊಣೆಯನ್ನು ಹೊತ್ತುಕೊಂಡಿಲ್ಲ.
ಐಸಿಸ್ ಭಯೋತ್ಪಾದಕ ಗುಂಪು 2014ರ ಬೇಸಿಗೆಯಲ್ಲಿ ತಿಕ್ರಿತ್ ನಗರವನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು. ಬಳಿಕ, 2015ರಲ್ಲಿ ಇರಾಕಿ ಪಡೆಗಳು ನಗರವನ್ನು ಮರುವಶಪಡಿಸಿಕೊಂಡವು.
Next Story





