ಕಳೆದು ಹೋದ ಚಿನ್ನಾಭರಣ ಮರಳಿ ವಾರೀಸುದಾರರಿಗೆ
" varthabharati.in " ವರದಿ ಫಲಶ್ರುತಿ
ಮಂಗಳೂರು, ಎ.5: ನಗರದ ಖಾಸಗಿ ಆಸ್ಪತ್ರೆಯೊಂದರ ಬಳಿ ರಸ್ತೆಯಲ್ಲಿ ಬಿದ್ದು ಸಿಕ್ಕಿದ್ದ ಚಿನ್ನಾಭರಣ ಕೊನೆಗೂ ಅದರ ವಾರೀಸುದಾರರ ಕೈಗೆ ತಲುಪಿದೆ.
ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ನ ಆಡಳಿತಾಧಿಕಾರಿ, ಗಾಯಕ ಖಾಲಿದ್ ತಣ್ಣೀರು ಬಾವಿಯವರಿಗೆ ಸಿಕ್ಕಿದ್ದ ಈ ಚಿನ್ನಾಭರಣದ ಕುರಿತು varthabharati.in ನಲ್ಲಿ ವರದಿ ಪ್ರಕಟಿಸಲಾಗಿತ್ತು. ವರದಿಯಲ್ಲಿ ಚಿನ್ನಾಭರಣ ಕಳಕೊಂಡವರು ಖಾಲಿದ್ ಅವರನ್ನು ಸಂಪರ್ಕಿಸುವಂತೆ ಕೋರಲಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಈ ವರದಿಯನ್ನು ನೋಡಿ ಆ ಚಿನ್ನಾಭರಣವನ್ನು ಕಳಕೊಂಡಿದ್ದ ಸಾಲೆತ್ತೂರಿನ ಅಹಮ್ಮದ್ ಸಮದ್‌ರವರು ಖಾಲಿದ್ ಅವರನ್ನು ಭೇಟಿಯಾಗಿ ಆಭರಣದ ಗುರುತು ವಿವರಗಳನ್ನು ನೀಡಿ ಅದನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಖಾಲಿದ್ ಅವರಿಗೆ ಸಮದ್ ಅವರು ಉಡುಗೊರೆ ನೀಡಲು ಮುಂದಾದರೂ ಅವರು ಅದನ್ನು ನಯವಾಗಿ ತಿರಸ್ಕರಿಸಿದರು.
Next Story





