ಹಲ್ಲೆ ಪ್ರಕರಣ: ಆರು ಮಂದಿಯ ವಿದ್ಯಾರ್ಥಿಗಳು 5 ದಿನ ಅಮಾನತು
.jpg)
ಬಂಟ್ವಾಳ, ಎ. 5: ಕಾಲೇಜು ಆವರಣದಲ್ಲಿ ವಿದ್ಯಾರ್ಥಿಯೋರ್ವನಿಗೆ ಹಲ್ಲೆ ನಡೆಸಿದ ವಿಚಾರಕ್ಕೆ ಸಂಬಂಧಿಸಿ ಕಾಲೇಜಿನ ಶಿಸ್ತು ಸಮಿತಿ ತೀರ್ಮಾನದಂತೆ ಹಲ್ಲೆ ನಡೆಸಿದ ಆರು ಮಂದಿ ವಿದ್ಯಾರ್ಥಿಗಳನ್ನು 5 ದಿನಗಳ ಕಾಲ ಅಮಾನತುಗೊಳಿಸಿದ ಘಟನೆ ವಿಟ್ಲ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.
ತೃತೀಯ ಬಿಕಾಂ ವಿದ್ಯಾರ್ಥಿಗಳಾದ ಯೋಗೀಶ್ ಕೆ., ಸನತ್ ಅಳ್ವ, ಪ್ರಸಾದ್ ಎಂ., ತೃತೀಯ ಬಿಎ ವಿದ್ಯಾರ್ಥಿ ಹರ್ಷಿತ್ ಕೆ., ದ್ವಿತೀಯ ಬಿಕಾಂ ವಿದ್ಯಾರ್ಥಿಗಳಾದ ಅಜಿತ್ ಕುಮಾರ್ ಪಿ., ಗೀತೇಶ್ ಗೌಡ ಎಂ. ಅಮಾನತುಗೊಂಡ ವಿದ್ಯಾರ್ಥಿಗಳು.
ಅಂತಿಮ ಬಿಎ ವಿದ್ಯಾರ್ಥಿ ಶೇಕ್ ಅಫ್ರೀಕ್ ರಫೀಕ್ ಎಂಬಾತ ಸೋಮವಾರ ಮಧ್ಯಾಹ್ನ ತರಗತಿಯಿಂದ ಹೊರಬರುತ್ತಿದ್ದ ವೇಳೆ ಆರು ವಿದ್ಯಾರ್ಥಿಗಳ ತಂಡ ಆತನಿಗೆ ಹಲ್ಲೆ ನಡೆಸಿದೆ. ಈ ಬಗ್ಗೆ ಶಿಸ್ತು ಸಮಿತಿ ಸಭೆ ನಡೆಸಿ ಹಲ್ಲೆ ನಡೆಸಿದ ಆರು ಮಂದಿಯನ್ನು ಅಮಾನತು ಮಾಡಲಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
Next Story





