ಅಪರಿಚಿತ ಮಹಿಳೆ ಸಾವು
ಮಂಡ್ಯ, ಎ.5: ಸುಮಾರು 30 ವರ್ಷದ ಅಪರಿಚಿತ ಮಹಿಳೆ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಶ್ರೀರಂಗಪಟ್ಟಣ-ಪಾಂಡವಪುರ ರೈಲು ನಿಲ್ದಾಣಗಳ ನಡುವೆ ಬುಧವಾರ ನಡೆದಿದೆ.
ಮೃತರು ಸುಮಾರು 5 ಅಡಿ ಎತ್ತರ, ಗೋಧಿ ಮೈಬಣ್ಣ ಹೊಂದಿದ್ದು, ನೀಲಿಬಣ್ಣದ ಬಿಳಿ ಹೂ ಇರುವ ಚೂಡಿದಾರ್ ಟಾಪ್, ಕೆಂಪು ಬಣ್ಣದ ಚೂಡಿದಾರ್ ಪ್ಯಾಂಟ್, ವೇಲು ಧರಿಸಿದ್ದಾರೆ.
ಮಹಿಳೆಯ ಮೃತ ದೇಹವನ್ನು ಮೈಸೂರಿನ ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರದ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದ್ದು, ಹೆಚ್ಚಿನ ಮಾಹಿತಿಗೆ ಮೈಸೂರು ರೈಲ್ವೆ ಪೊಲೀಸ್ (0821-2516579) ಅಥವಾ ಮಂಡ್ಯ ರೈಲ್ವೆ ಪೊಲೀಸ್ ಹೊರ ಉಪಠಾಣೆ (08232-222340) ಸಂಪರ್ಕಿಸಬಹುದು.
Next Story





