ಕಂದಾಯ ಸಚಿವರ ಎದುರೇ ಹಾಸನ ಡಿಸಿ ವಿರುದ್ಧ ದಲಿತರ ಆಕ್ರೋಶ
.jpg)
ಹಾಸನ, ಎ.5: ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಡಾ.ಬಾಬು ಜಗಜೀವನರಾಂರವರ 110ನೆ ಜಯಂತಿ ಕಾರ್ಯಕ್ರಮವನ್ನು ಬೆಳಗ್ಗೆ 10:30 ಗಂಟೆಗೆ ನಡೆಯಬೇಕಾದ ಕಾರ್ಯಕ್ರಮವು 12:30 ಆದರೂ ಜಿಲ್ಲಾಧಿಕಾರಿ ವಿ. ಚೈತ್ರ ಅವರು ಗೈರು ಆಗಿದ್ದರು.
ನಂತರ ಬಂದ ಕಂದಾಯ ಸಚಿವರನ್ನು ನೋಡಿ ಜೈಕಾರ ಹಾಕಿದರು. ಕೆಲ ಸಮಯದಲ್ಲೆ ಆಗಮಿಸಿದ ಡಿಸಿ ವಿರುದ್ಧ ಸಚಿವರ ಎದುರೇ ದಲಿತರು ತಮ್ಮ ಆಕ್ರೊಶವನ್ನು ವ್ಯಕ್ತಪಡಿಸಿ ಘೋಷಣೆ ಕೂಗಿದರು.
ಈ ವೇಳೆ ಸಚಿವ ಕಾಗೋಡು ತಿಮ್ಮಪ್ಪ ಅವರು ಸಮಧಾನಪಡಿಸಲು ಮುಂದಾದರು. ದಲಿತ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದು ದಲಿತ ಮುಖಂಡರು ತಮ್ಮ ನೋವನ್ನು ತೋಡಿಕೊಂಡರು.
ಈ ಸಮಯದಲ್ಲಿ ಜಿಲ್ಲಾಧಿಕಾರಿ ವಿ. ಚೈತ್ರ ಅವರು ಒಂದು ಮಾತನ್ನು ಆಡದೆ ಮೌನವನ್ನು ಅನುಸರಿಸಿದ ಪ್ರಸಂಗ ನಡೆಯಿತು.
ನಂತರ ಕಾರ್ಯಕ್ರಮವನ್ನು ಮುಂದುವರೆಸಲಾಯಿತು. ಇದೆ ವೇಳೆ ಕ್ಷೇತ್ರದ ಶಾಸಕರಾದ ಹೆಚ್.ಎಸ್. ಪ್ರಕಾಶ್, ಅಪರ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್, ಹುಡಾ ಅಧ್ಯಕ್ಷ ಕೃಷ್ಣಕುಮಾರ್ ಇತರರು ಇದ್ದರು.





