ಉಡುಪಿ: ಎ.6ರಂದು ಉದ್ಯಾವರ ನವೀಕೃತ ಮಸೀದಿ ಉದ್ಘಾಟನೆ
ಉಡುಪಿ, ಎ.5: ಉದ್ಯಾವರ ಪೇಟೆಯ ಸಮೀಪ ನವೀಕೃತಗೊಂಡಿರುವ 'ಸಿದ್ದೀಕ್- ಇ- ಅಕ್ಬರ್' ಜಾಮೀಯ ಮಸೀದಿಯು ಎ.7ರಂದು ಶುಕ್ರವಾರ ಅಪರಾಹ್ನ ಕುಂದಾಪುರ ಕಂಡ್ಲೂರಿನ ಝಿಯಾ ಏಜುಕೇಶನ್ ಟ್ರಸ್ಟ್‌ನ ಸ್ಥಾಪಕ ವೌಲಾನ ಉಬೇದುಲ್ಲಾ ನದ್ವಿ ನೇತೃತ್ವದಲ್ಲಿ ಜುಮ್ಮಾ ನಮಾಝ್ ನಿರ್ವಹಿಸುವ ಮೂಲಕ ಉದ್ಘಾಟನೆಗೊಳ್ಳಲಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಸೀದಿಯ ಗೌರವಾಧ್ಯಕ್ಷ ಅಲ್‌ಹಾಜ್ ಅಬ್ದುಲ್ ಜಲೀಲ್ ಸಾಹೇಬ್ ಈ ಕುರಿತು ಮಾಹಿತಿ ನೀಡಿ ದರು. ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನವೀಕೃತಗೊಂಡ ಈ ಮಸೀದಿಯಲ್ಲಿ ಮಹಿಳೆಯರು ಪ್ರಾರ್ಥನೆ ಸಲ್ಲಿಸಲು ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸ ಲಾಗಿದೆ. ಸಾರ್ವಜನಿಕರಿಗೆ ಮಧ್ಯಾಹ್ನ 3ಗಂಟೆಯಿಂದ ಸಂಜೆ 5ಗಂಟೆಯವರೆಗೆ ಮಸೀದಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.
ಸಂಜೆ 5:30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಾವರ ಹಲೀಮಾ ಸಬ್ಜು ಚಾರಿಟೇಬಲ್ ಟ್ರಸ್ಟ್‌ನ ಮಾಲಕ ಅಲ್‌ಹಾಜ್ ಅಬ್ದುಲ್ ಜಲೀಲ್ ಸಾಹೇಬ್ ವಹಿಸಲಿರುವರು. ಕುಂದಾಪುರ ಕಂಡ್ಲೂರಿನ ಝಿಯಾ ಏಜುಕೇಶನ್ ಟ್ರಸ್ಟ್‌ನ ಸ್ಥಾಪಕ ಮೌಲಾನ ಉಬೇದುಲ್ಲಾ ನದ್ವಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಚಿವ ಪ್ರಮೋದ್ ಮಧ್ವ ರಾಜ್, ಕಾಪು ಶಾಸಕ ವಿನಯ ಕುಮಾರ್ ಸೊರಕೆ, ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ.ಎಂ.ಎ.ಸಲೀಂ, ಉದ್ಯಾವರ ಜುಮಾ ಮಸೀದಿಯ ಇಮಾಮ್ ಮೌಲಾನ ಅಬ್ದುಲ್ ರಶೀದ್ ರೆಹಮಾನಿ, ಉದ್ಯಾವರ ಸೈಂಟ್ ಕ್ಸೇವೀಯರ್ ಚರ್ಚ್‌ನ ಪ್ರಧಾನ ಧರ್ಮಗುರು ರೆ.ಫಾ. ಡಾ.ರಾಖಿ ಡಿಸೋಜ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್ ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಸೀದಿ ಅಧ್ಯಕ್ಷರಾದ ಅಬ್ದುಲ್ ಸತ್ತಾರ್ ಅಝೀಝ್, ಪ್ರಧಾನ ಕಾರ್ಯದರ್ಶಿ ಖಲೀಲ್ ಹೈದರ್, ಉದ್ಯಾವರ ಮುಸ್ಲಿಮ್ ಯುನಿಟಿ ಅಧ್ಯಕ್ಷ ಅಫ್ಝಲ್ ರಶೀದ್, ಪ್ರಧಾನ ಕಾರ್ಯದರ್ಶಿ ಸಮೀರ್ ಶರೀಫ್, ಉದ್ಯಾವರ ಗ್ರಾಪಂ ಉಪಾಧ್ಯಕ್ಷ ರಿಯಾಝ್ ಪಳ್ಳಿ ಉಪಸ್ಥಿತರಿದ್ದರು.







