ಐಪಿಎಲ್ ಉದ್ಘಾಟನಾ ಸಮಾರಂಭದ ವೇಳೆ ಸಚಿನ್, ಗಂಗುಲಿ, ಸೆಹ್ವಾಗ್‌ಗೆ ಗೌರವ

ಹೈದರಾಬಾದ್,ಎ.5: ಹತ್ತನೆ ಆವೃತ್ತಿಯ ಐಪಿಎಲ್ ಟೂರ್ನಿಯ ವರ್ಣರಂಜಿತ ಉದ್ಘಾಟನಾ ಸಮಾರಂಭದ ವೇಳೆ ನಾಲ್ವರು ಕ್ರಿಕೆಟ್ ಲೆಜಂಡ್‌ಗಳಾದ ಸಚಿನ್ ತೆಂಡುಲ್ಕರ್, ಸೌರವ್ ಗಂಗುಲಿ, ವಿವಿಎಸ್ ಲಕ್ಷ್ಮಣ್ ಹಾಗೂ ವೀರೇಂದ್ರ ಸೆಹ್ವಾಗ್‌ಗೆ ಬಿಸಿಸಿಐ ಗೌರವಿಸಿದೆ.
2008ರ ಮೊದಲ ಆವೃತ್ತಿಯ ಐಪಿಎಲ್‌ನಲ್ಲಿ ಈ ನಾಲ್ವರನ್ನು ಐಕಾನ್ ಕ್ರಿಕೆಟಿಗರಾಗಿ ಆಯ್ಕೆ ಮಾಡಲಾಗಿತ್ತು. ತೆಂಡುಲ್ಕರ್ 2013ರ ತನಕ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಿದ್ದರು. ಗಂಗುಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದರು.
ಸೆಹ್ವಾಗ್ ಹಾಗೂ ಲಕ್ಷ್ಮಣ್ ಕ್ರಮವಾಗಿ ಡೆಲ್ಲಿ ಡೇರ್ ಡೆವಿಲ್ಸ್ ಹಾಗೂ ಡೆಕ್ಕನ್ ಚಾರ್ಜರ್ಸ್ ತಂಡದ ಪರ ಆಡಿದ್ದರು. 10 ವರ್ಷಗಳ ಬಳಿಕ ಬಿಸಿಸಿಐ ಈ ನಾಲ್ವರು ದಿಗ್ಗಜರನ್ನು ಬಿಸಿಸಿಐ ಗೌರವಿಸಿದೆ.
Next Story





