ಮಂಗಳೂರು: ಗಾಂಜಾ ಮಾರಾಟ - 19 ಮಂದಿ ಸೆರೆ

ಮಂಗಳೂರು, ಎ. 5: ಕಾಲೇಜು ಕ್ಯಾಂಪಸ್ ಸೇರಿದಂತೆ ವಿವಿಧೆಡೆ ಗಾಂಜಾ ಮಾರಾಟ ಮಾಡುತ್ತಿದ್ದ 19 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೊಂದೇಲ್‌ನ ಕಾಲೇಜೊಂದರ ಬಳಿ ಗಾಂಜಾ ಮಾರಾಟ ಮಾಡುತ್ತ್ದ್ದಿ ಇಬ್ಬರು ಹಾಗೂ ಗಾಂಜಾ ಸೇವನೆ ಮಾಡುತ್ತಿದ್ದ 8 ಮಂದಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 600 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಮೂಡುಶೆಡ್ಡೆಯ ಪ್ರಶಾಂತ್, ಕೆಂಜಾರಿನ ಗೋಪಾಲ್ ಮತ್ತು ಗಾಂಜಾ ಸೇವನೆ ಮಾಡಿದ 8 ಮಂದಿ ಸಹಿತ ಒಟ್ಟು 10ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಗೋಪಾಲ್ ಎಂಬಾತ ನಾಲ್ಕು ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಕೆ,ಸಿ.ರೋಡ್ ನಿವಾಸಿ ಸಲೀಂ ಎಂಬಾತನನ್ನು ನೀರುಮಾರ್ಗ ಮೇರ್ಲಪದವಿನ ಕಾಲೇಜೊಂದರ ಬಳಿ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಈತ ಹತ್ಯಾ ಪ್ರಕರಣದ ಆರೋಪಿಯಾಗಿದ್ದಾನೆ. ಬಂಧಿತನಿಂದ 900 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
Next Story





