Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸಾರ್ವಜನಿಕ ಶೌಚಾಲಯದಲ್ಲಿ ಖಾಸಗಿ ಗೋದಾಮು!

ಸಾರ್ವಜನಿಕ ಶೌಚಾಲಯದಲ್ಲಿ ಖಾಸಗಿ ಗೋದಾಮು!

ವಾರ್ತಾಭಾರತಿವಾರ್ತಾಭಾರತಿ6 April 2017 12:11 AM IST
share
ಸಾರ್ವಜನಿಕ ಶೌಚಾಲಯದಲ್ಲಿ ಖಾಸಗಿ ಗೋದಾಮು!

  • ಕೇಂದ್ರ ಮೀನು ಮಾರುಕಟ್ಟೆ
  • ಮೇಯರ್ ಕವಿತಾ ಸನಿಲ್ ದಿಢೀರ್ ಭೇಟಿ: ಪರಿಶೀಲನೆ


 ಮಂಗಳೂರು, ಎ.5: ಕೇಂದ್ರ ಮಾರುಕಟ್ಟೆಯ ಸಮೀಪದಲ್ಲಿರುವ ಕೇಂದ್ರ ಮೀನು ಮಾರುಕಟ್ಟೆಯಲ್ಲಿ ಸಾರ್ವಜನಿಕರ ಶೌಚಾಲಯದಲ್ಲಿರುವ ಖಾಸಗಿ ಗೋದಾಮಿಗೆ ಇಂದು ಮೇಯರ್ ಕವಿತಾ ಸನಿಲ್ ದಿಢೀರ್ ಭೇಟಿ ನೀಡಿದ ಪರಿಶೀಲನೆ ನಡೆಸಿದರು. ಸಾರ್ವಜನಿಕರು ನೀಡಿದ ದೂರಿನನ್ವಯ ಮಂಗಳೂರು ಮೇಯರ್ ಕವಿತಾ ಸನಿಲ್, ಆಯುಕ್ತ ಮುಹಮ್ಮದ್ ನಝೀರ್ ಹಾಗೂ ಇತರ ಅಧಿಕಾರಿ ಗಳು ದಿಢೀರ್ ಭೇಟಿ ನೀಡಿದರು. ಮೂರು ಮಹಡಿಗಳ ಮೀನು ಮಾರುಕಟ್ಟೆಯಲ್ಲಿ 91 ಅಂಗಡಿಗಳಿವೆ. ಪ್ರತೀ ಮಹಡಿಯಲ್ಲಿ ಒಂದೊಂದು ಸಾರ್ವಜನಿಕ ಶೌಚಾಲಯವನ್ನು ಪಾಲಿಕೆ ನಿರ್ಮಿಸಿದೆ. ಆದರೆ ಕಳೆದ ಹಲವು ದಿನಗಳಿಂದ ಎರಡನೆ ಹಾಗೂ ಮೂರನೆ ಮಹಡಿಗಳಲ್ಲಿರುವ ಶೌಚಾಲಯ ಹತ್ತಿರದ ಅಂಗಡಿಯವರ ಗೋದಾಮು ಆಗಿ ಪರಿವರ್ತನೆಗೊಂ ಡಿತ್ತು. ಇದರಿಂದಾಗಿ ಮಹಿಳೆಯರು, ಮಕ್ಕಳು, ಹಿರಿಯರು ಕೆಳಮಹಡಿಯಲ್ಲಿದ್ದ ಒಂದು ಶೌಚಾಲ ಯವನ್ನೇ ಆಶ್ರಯಿಸಬೇಕಿದೆ. ಈ ಬಗ್ಗೆ ಸ್ಥಳೀಯರು ಮಂಗಳೂರು ಮೇಯರ್ ಕವಿತಾ ಸನಿಲ್‌ರನ್ನು ಮಂಗಳವಾರ ಭೇಟಿ ಮಾಡಿ, ಕೇಂದ್ರ ಮೀನು ಮಾರುಕಟ್ಟೆ ಯಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದರು.
ಮನವಿ ಸ್ವೀಕರಿಸಿದ ಮೇಯರ್ ಅವರು, ಬುಧವಾರ ಪಾಲಿಕೆ ಅಧಿಕಾರಿಗಳ ಜತೆಗೆ ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ಎರಡನೆ ಮಹಡಿಯಲ್ಲಿದ್ದ ಸಾರ್ವಜನಿಕ ಶೌಚಾಲಯವನ್ನು ಪೂರ್ಣವಾಗಿ ಗೋದಾಮು ಆಗಿ ಪರಿವರ್ತಿಸಿದ ಅಂಶ ಮೇಯರ್ ಅವರ ಗಮನಕ್ಕೆ ಬಂದಿತು. ಶೌಚಾಲಯದ ಗುಂಡಿಗಳನ್ನು ಸಿಮೆಂಟ್ ಮೂಲಕ ಮುಚ್ಚಿ, ಮಹಿಳೆಯರ ಹಾಗೂ ಪುರುಷರ ಶೌಚಾಲಯದಲ್ಲಿ ಅಂಗಡಿ ಸಾಮಾನುಗಳನ್ನು ಜೋಡಿಸಿಟ್ಟಿರುವುದನ್ನು ಅಧಿಕಾರಿಗಳು ಪತ್ತೆಹಚ್ಚಿದರು.
ಮೇಯರ್ ಹಾಗೂ ಆಯುಕ್ತ ಮುಹಮ್ಮದ್ ನಝೀರ್ ಅವರು ಸಂಬಂಧಪಟ್ಟ ಅಂಗಡಿಯವರಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ ‘ನಮಗೆ ಪಾಲಿಕೆ ಅನುಮತಿ ನೀಡಿದೆ’ ಎಂದು ಕೆಲವು ಪತ್ರವನ್ನು ಮಾಧ್ಯಮದವರಿಗೆ ಪ್ರದರ್ಶಿಸಿದರು. ಪತ್ರವನ್ನು ತೋರಿಸುವಂತೆ ಮೇಯರ್ ಹಾಗೂ ಅಧಿಕಾರಿಗಳು ಕೋರಿದಾಗ, ‘ನಿಮಗೆ ನೀಡುವುದಿಲ್ಲ. ನೀವು ಅದನ್ನು ಹರಿಯುತ್ತೀರಿ’ ಎಂದು ನಿರಾಕರಿಸಿದರು. ಆಯುಕ್ತರು ಉತ್ತರಿಸಿ  ‘ಪತ್ರ ಕೊಡಿ, ನಾವು ಪರಿಶೀಲಿಸುತ್ತೇವೆ’ಎಂದಾಗ ಪತ್ರವನ್ನು ಆಯುಕ್ತರ ಕೈಗೆ ನೀಡಲಾಯಿತು.
ಪತ್ರ ಪರಿಶೀಲಿಸಿ ಬಳಿಕ ಮಾಧ್ಯಮದವರ ಜತೆಗೆ ಮಾತನಾಡಿದ ಆಯುಕ್ತರು, ಶೌಚಾಲಯದ ಜಾಗವನ್ನು ಸಂಬಂಧಪಟ್ಟ ಅಂಗಡಿಯವರಿಗೆ ನೀಡುವಂತೆ 2009ರಲ್ಲಿ ಅನುಮತಿ ಕೋರಿ ಪಾಲಿಕೆಗೆ ಪತ್ರ ಬರೆಯಲಾಗಿದೆ. ಆದರೆ ಪಾಲಿಕೆ ಇದಕ್ಕೆ ಅನುಮತಿ ನೀಡಿಲ್ಲ ಹಾಗೂ ಈ ಕುರಿತು ಯಾವುದೇ ದಾಖಲೆಯೂ ಇಲ್ಲ ಎಂದರು.
ಮೇಯರ್ ಮಾತನಾಡಿ, ಪಾಲಿಕೆಯ ಅನುಮತಿ ಪಡೆಯದೆ, ಸಾರ್ವಜನಿಕ ಬಳಕೆಗೆ ಸಿಗಬೇಕಾದ ಶೌಚಾಲಯವನ್ನು ಅತಿಕ್ರಮಣ ಮಾಡಿದ ಈ ಬಗ್ಗೆ ಸಂಬಂಧಪಟ್ಟ ಅಂಗಡಿಯವರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಯುಕ್ತರಿಗೆ ಸೂಚಿಸಿದರು.
ಮೂರನೆ ಮಹಡಿಯಲ್ಲಿದ್ದ ಶೌಚಾಲಯ ಕೂಡ ಇದೇ ರೀತಿ ಗೋದಾಮು ಆಗಿ ಪರಿವರ್ತನೆ ಮಾಡಲಾಗಿತ್ತು. ಅಲ್ಲಿನ ಶೌಚಾಲಯದ ಹೊರಭಾಗದಲ್ಲಿ ಅರ್ಧ ಭಾಗ ಕಲ್ಲು ಕಟ್ಟಿ, ಬಳಿಕದ ಅರ್ಧ ಭಾಗಕ್ಕೆ ಶಟರ್ ಹಾಕಲಾಗಿತ್ತು. ಮೇಯರ್ ಸೂಚನೆಯಂತೆ ಅಧಿಕಾರಿಗಳು ಶಟರ್ ಮುರಿದು ಒಳಗೆ ನೋಡಿದಾಗ ಹುಲ್ಲಿನ ರಾಶಿ ಕಾಣಿಸಿತು. ಇಲ್ಲೂ ಶೌಚಾಲಯದ ಕುರುಹು ಕಾಣದಂತೆ ಬದಲಾವಣೆ ಆಗಿತ್ತು. ಅತಿಕ್ರಮಣ ಮಾಡಿದ ಇಬ್ಬರ ಮೇಲೂ ಕಾನೂನು ಕ್ರಮಕೈಗೊಳ್ಳುವಂತೆ ಮೇಯರ್ ಸೂಚಿಸಿದರು.

ಮನಪಾ ಕಂದಾಯ ಅಧಿಕಾರಿ ಪ್ರವೀಣ್‌ಚಂದ್ರ ಕರ್ಕೇರ, ಸಹಾಯಕ ಎಂಜಿನಿಯರ್ ನಿತ್ಯಾನಂದ, ಆರೋಗ್ಯ ಪರಿವೀಕ್ಷಕ ಯಶವಂತ್, ಕಂದಾಯ ಪರಿವೀಕ್ಷಕ ರವೀಂದ್ರ ಮೊದಲಾದವರು ಉಪಸ್ಥಿತರಿದ್ದರು.


2 ದಿನದಲ್ಲಿ ಅನಧಿಕೃತ ಗೂಡಂಗಡಿ-ಬೀದಿಬದಿ ವ್ಯಾಪಾರಿಗಳ ತೆರವು
 

ಅನಧಿಕೃತ ಗೂಡಂಗಡಿ ಹಾಗೂ ಬೀದಿಬದಿ ವ್ಯಾಪಾರಿಗಳ ತೆರವಿನ ಬಗ್ಗೆ ಈ ಸಂದರ್ಭ ಪ್ರತಿಕ್ರಿಯಿಸಿದ ಮೇಯರ್ ಕವಿತಾ ಸನಿಲ್, ಎ.5ರಿಂದ ಅನಧಿಕೃತ ಗೂಡಂಗಡಿ ಹಾಗೂ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಬೇಕಿತ್ತು. ಕಾರ್ಯಾಚರಣೆಗೆ ಪೊಲೀಸ್ ಸಿಬ್ಬಂದಿಯ ಅಗತ್ಯವಿದೆ. ಆದರೆ, ನಿನ್ನೆ ಪೊಲೀಸ್ ಕಮಿಷನರ್ ಕಚೇರಿ ಮುಂಭಾಗದಲ್ಲಿ ನಡೆದ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಎರಡು ದಿನ ಬಿಟ್ಟು ಕಾರ್ಯಾಚರಣೆ ನಡೆಸುವಂತೆ ಕೋರಿದ್ದಾರೆ. ಹೀಗಾಗಿ ಎರಡು ದಿನಗಳೊಳಗೆ ಮಂಗಳೂರು ವ್ಯಾಪ್ತಿಯಲ್ಲಿ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ಮೇಯರ್ ತಿಳಿಸಿದ್ದಾರೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X