ಎಸ್‌ಎಂಎ ಮಂಗಳೂರು ಝೋನಲ್ ಮಹಾಸಭೆ
ಮಂಗಳೂರು, ಎ.5: ಸುನ್ನಿ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ಎಸ್‌ಎಂಎ ಮಂಗಳೂರು ಝೋನಲ್ ಸಮಿತಿಯ ಮಹಾಸಭೆಯು ಇತ್ತೀಚೆಗೆ ಎಸ್‌ಎಂಎ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಖಲೀಲ್ ಮುಸ್ಲಿಯಾರ್ ಕಾವೂರು ನೇತೃತ್ವದಲ್ಲಿ ಎಸ್.ಇ.ಡಿ.ಸಿ. ಕಚೇರಿ ಪಡೀಲ್‌ನಲ್ಲಿ ನಡೆಯಿತು.
ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಫಾರೂಕ್ ಶೇಡಿಗುರಿ, ಉಪಾಧ್ಯಕ್ಷರಾಗಿ ಅಬ್ದುಲ್ ಹಕೀಂ ಮಾಹಿಲ್, ಟಿ.ಎ. ಖಾದರ್ ಹಾಜಿ ಕೈಕಂಬ, ಕಬೀರ್ ಅಹ್ಮದ್ ಜೆಪ್ಪು, ಪ್ರಧಾನ ಕಾರ್ಯದರ್ಶಿಯಾಗಿ ಶಾಫಿ ಮದನಿ ಕಂದಾವರ, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಸತ್ತಾರ್ ಸಖಾಫಿ ಅಡ್ಯಾರ್‌ಪದವು, ಅಬ್ದುಲ್ ಅಝೀಝ್ ಕೈಕಂಬ, ಬುನಯ್ಯ ಹುಸೈನ್ ಮಂಗಳೂರು, ಕೋಶಾಧಿಕಾರಿಯಾಗಿ ಎ.ಪಿ. ಇಸ್ಮಾಯೀಲ್ ಅಡ್ಯಾರ್‌ಪದವು, ಜಿಲ್ಲಾ ಕೌನ್ಸಿಲರಾಗಿ ಅಶ್ರಫ್ ಕಿನಾರ, ಅಹ್ಮದ್ ಬಶೀರ್ ಪಂಜಿಮೊಗರು ಹಾಗೂ 47 ಮದ್ರಸಗಳ ಪ್ರತಿನಿಧಿಗಳನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕ ಮಾಡಲಾಯಿತು.
Next Story





