Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ತಮಿಳ್ನಾಡು: ಪಳನಿಸ್ವಾಮಿ - ಪನ್ನೀರ್...

ತಮಿಳ್ನಾಡು: ಪಳನಿಸ್ವಾಮಿ - ಪನ್ನೀರ್ ಸೆಲ್ವಂ ಕೈ ಜೋಡಿಸುತ್ತಿದ್ದಾರಯೇ ?

ವಾರ್ತಾಭಾರತಿವಾರ್ತಾಭಾರತಿ6 April 2017 1:16 PM IST
share
ತಮಿಳ್ನಾಡು: ಪಳನಿಸ್ವಾಮಿ - ಪನ್ನೀರ್ ಸೆಲ್ವಂ ಕೈ ಜೋಡಿಸುತ್ತಿದ್ದಾರಯೇ ?

 ಚೆನ್ನೈ,ಎ. 6: ಅಣ್ಣಾಡಿಎಂಕೆಯನ್ನು ಅದರ ಈಗಿನ ಪ್ರಧಾನ ಕಾರ್ಯದರ್ಶಿ ಶಶಿಕಲಾರ ಕುಟುಂಬ ಮತ್ತು ಮನ್ನಾರ್‌ಗುಡಿ ಗುಂಪನ್ನು ರಕ್ಷಿಸುವ ಕುರಿತು ತೆರೆಮರೆಯಲ್ಲಿ ಕಸರತ್ತು ಬಿರುಸಿನಿಂದ ಸಾಗುತ್ತಿದೆ. ಶಶಿಕಲಾ ಬಣದಿಂದ ಅಣ್ಣಾಡಿಎಂಕೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಪನ್ನೀರ್‌ಸೆಲ್ವಂ , ಪಳನಿಸ್ವಾಮಿಗುಂಪುಗಳೊಳಗೆ ರಹಸ್ಯ ಮಾತುಕತೆ ಮುಂದುವರಿದಿದ್ದು ಪಳನಿಸ್ವಾಮಿ ಸಂಪುಟದ ಕೆಲವು ಹಿರಿಯ ಸಚಿವರು ಎರಡು ಗುಂಪುಗಳನ್ನು ಒಗ್ಗೂಡಿಸುವ ಹೊಣೆಯನ್ನು ವಹಿಸಿಕೊಂಡಿದ್ದಾರೆ. ಶಶಿಕಲಾರನ್ನು ದೂರವಿಟ್ಟು ಎರಡುವಿಭಾಗಳು ಒಗ್ಗೂಡಿ ಅಣ್ಣಾಡಿಎಂಕೆಯನ್ನು ರಕ್ಷಿಸಲು ಪಳನಿಸ್ವಾಮಿ ಸಂಪುಟದ ಕೆಲವು ಹಿರಿಯ ಸಚಿವರು ನಿರ್ಧರಿಸಿದ್ದಾರೆಎಂದು ಮೂಲಗಳು ತಿಳಿಸಿವೆ. ಎಐಡಿಎಂಕೆ ಪಕ್ಷ ಮತ್ತು ಸರಕಾರವನ್ನು ಈಗ ನೆಲೆಯಾಗಿರುವ ತ್ರಿಶಂಕು ಸ್ಥಿತಿಯಿಂದ ಪಾರುಗೊಳಿಸುವುದಕ್ಕೆ ಎರಡೂ ಗುಂಪುಗಳಲ್ಲಿ ಮಹತ್ವದ ಚಿಂತನೆ ನಡೆಯುತ್ತಿದೆ. ಆದರೆ ಇವುಯಾವುದೂ ಜೈಲಲ್ಲಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ಮತ್ತು ಉಪ ಪ್ರಧಾನ ಕಾರ್ಯದರ್ಶಿ ಆರ್.ಕೆ. ನಗರ ಉಪಚುನಾವಣೆಯ ಅಭ್ಯರ್ಥಿ ಟಿಟಿವಿ ದಿನಕರನ್ ಅರಿವಿಗೆ ಬಂದಿಲ್ಲ.

ಉಪಚುನಾವಣೆಯ ಶಶಿಕಲಾ ಬಣದ ಅಭ್ಯರ್ಥಿ ಟಿಟಿವಿ ದಿನಕರನ್‌ರ ಚುನಾವಣಾ ಪ್ರಚಾರದಲ್ಲಿ ಕೆಲವು ಸಚಿವರು ಭಾಗಿಯಾಗಿಲ್ಲ. ಇವರು ನಿರಂತರ ತಪ್ಪಿಸಿಕೊಳ್ಳುತ್ತಿದ್ದಾರೆ. ತೆರೆಮರೆಯಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಕುರಿತ ಶಂಕೆಯನ್ನು ಇದು ಇನ್ನಷ್ಟು ಬಲಪಡಿಸುತ್ತಿದೆ. ಈಗಾಗಲೇ ತಮ್ಮ ಖಾತೆಗಳಲ್ಲಿ ದಿನಕರನ್ ಹಸ್ತಕ್ಷೇಪ ನಡೆಸುತ್ತಿರುವ ಬಗ್ಗೆ ಕೆಲವು ಸಚಿವರು ಮುಖ್ಯಮಂತ್ರಿ ಪಳನಿಸ್ವಾಮಿಯವರಲ್ಲಿ ದೂರಿತ್ತಿದ್ದಾರೆ. ಎಐಡಿಎಂಕೆಯಲ್ಲಿ ಹೆಚ್ಚಿನವರಿಗೆ ದಿನಕರನ್ ಬಗ್ಗೆ ಅಸಮಾಧಾನವಿದೆ.

  ಶಶಿಕಲಾರ ಪತಿನಟರಾಜನ್ ಹಾಗೂ ಅವರ  ಕುಟುಂಬಸದಸ್ಯರ ಮನ್ನಾರ್‌ಗುಡಿ ಗುಂಪು ಸರಕಾರ  ಮತ್ತು ಪಕ್ಷದಲ್ಲಿ ಬಲಗೊಳುತ್ತಿದೆ ಎಂಬ ಅಪಸ್ವರ ಪಳನಿಸ್ವಾಮಿ,ಪನ್ನೀರ್ ಸೆಲ್ವಂರ ಗುಂಪುಗಳು ಒಗ್ಗೂಡುವುದಕ್ಕೆ ಒಂದು ಕಾರಣವೆನ್ನಲಾಗುತ್ತಿದ್ದು, ಈ ಸಲದ ಆರ್‌ಕೆನಗರ ಉಪಚುನಾವಣೆಯಲ್ಲಿ ದಿನಕರನ್ ಗೆದ್ದರೆ ಮುಖ್ಯಮಂತ್ರಿ ಪಳನಿ ಸ್ವಾಮಿಯ ಸ್ಥಾನ ಕಳಕೊಳ್ಳುವ ಹೆದರಿಕೆ ಅವರನ್ನು ಕಾಡುತ್ತಿದೆ. ಪಕ್ಷದ ಹಿರಿಯ ನಾಯಕರಿಗೂ ದಿನಕರನ್ ಬೆದರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

 ಇವನ್ನೆಲ್ಲ ಗಮನದಲ್ಲಿಟ್ಟು ಕಳೆದ ಒಂದು ತಿಂಗಳಿನಿಂದ ಪಳನಿಸ್ವಾಮಿ- ಪನ್ನೀರ್ ಸೆಲ್ವಂ ಬಣಗಳನ್ನು ಹತ್ತಿರಕ್ಕೆ ತರುವ ಕುರಿತು ಚರ್ಚೆಗಳು ಮುಂದುವರಿದಿದೆ. ಪಳನಿಸ್ವಾಮಿ ಬಣದ ಸಚಿವರು, ಪನ್ನೀರ್‌ಸೆಲ್ವಂ ಬಣದ ಶಾಸಕರು ಪರಸ್ಪರ ಸಂಪರ್ಕಿಸುತ್ತಿದ್ದಾರೆ. ಇದೇ ವೇಳೆ" ಮುಖ್ಯಮಂತ್ರಿ ಪಳನಿಸ್ವಾಮಿಯನ್ನು ನಾವು ವಿರೋಧಿಸುವುದಿಲ್ಲ" ಎಂದು ಆರ್‌ಕೆ ನಗರ ಚುನಾವಣಾ ಸಮಿತಿ ಸದಸ್ಯ ಶಕ್ತಿವೇಲ್ ಮುರುಗನ್ ಬಹಿರಂಗಪಡಿಸಿದ್ದಾರೆ. ಜೊತೆಗೆ ಪ್ರಧಾನಕಾರ್ಯದರ್ಶಿ ಶಶಿಕಲಾರ ವಿರುದ್ಧ ಆರ್‌ಕೆನಗರದ ಮತದಾರರ ಆಕ್ರೋಶ ಕೂಡಾ ಪಕ್ಷದ ಹಿರಿಯ ನಾಯಕರನ್ನು ಮರುಚಿಂತನೆ ನಡೆಸುವಂತೆ ಪ್ರೇರೇಪಿಸುತ್ತಿದೆ ಎಂದು ತಿಳಿದುಬಂದಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X