ಇಲೆಕ್ಟ್ರಾನಿಕ್ ಮತ ಯಂತ್ರ ಇನ್ನುಬೇಡ: ಕಾಂಗ್ರೆಸ್

ಹೊಸದಿಲ್ಲಿ,ಎ.6: ಪ್ರಧಾನ ಪ್ರತಿಪಕ್ಷ ಕಾಂಗ್ರೆಸ್ ಇಲೆಕ್ಟ್ರಾನಿಕ್ ಮತ ಯಂತ್ರ ನಿಷೇಧಿಸಬೇಕೆಂದು ಆಗ್ರಹಿಸಿದೆ. ಮತಯಂತ್ರದಲ್ಲಿ ನಡೆಸಿದ ಅಕ್ರಮವನ್ನು ತನಿಖೆನಡೆಸಬೇಕು ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ಬಿಎಸ್ಪಿ ನಡೆಸಿದ ಪ್ರತಿಭಟನೆಯಿಂದ ರಾಜ್ಯಸಭೆಯಕಲಾಪವನ್ನೇಒಮ್ಮೆ ಸ್ಥಗಿತಗೊಳಿಸಲಾಗಿದೆ.
ಮತಯಂತ್ರಗಳು ಬಿಜೆಪಿಗೆ ಅನೂಕೂಲಕರವಾಗಿ ಮತ ದಾಖಲಿಸುತ್ತಿದೆ ಎಂದು ರಾಜ್ಯಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆದಿದೆ. ಇವುಗಳನ್ನು ಚುನಾವಣೆಗೆ ಬಳಸಬಾರದೆಂದು ಕಾಂಗ್ರೆಸ್‌ನ ಗುಲಾಂ ನಬಿ ಆಝಾದ್ ರಾಜ್ಯಸಭೆಯಲ್ಲಿ ಆಗ್ರಹಿಸಿದ್ದಾರೆ. ದಿಲ್ಲಿ ಪುರಸಭೆ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ನಡೆಯಲಿರುವ ವಿಧಾನಸಭಾಚುನಾವಣೆಯಲ್ಲಿಮತಯಂತ್ರಗಳನ್ನುನಿಷೇಧಿಸಬೇಕೆಂದು ಅವರು ಹೇಳಿದರು.
ರಾಜ್ಯಸಭಾಕಲಾಪದ ಅಜೆಂಡಾಗಳನ್ನು ಬದಲಾಯಿಸಿ ಮತಯಂತ್ರದ ಅಕ್ರಮಗಳ ಬಗ್ಗೆ ಚರ್ಚೆ ನಡೆಸಬೇಕೆಂದು ಕಾಂಗ್ರೆಸ್, ಸಮಾಜವಾದಿಪಾರ್ಟಿ, 267 ಕಲಂ ಪ್ರಕಾರನೋಟಿಸ್ ನೀಡಿದರೂ ಉಪಾಧ್ಯಕ್ಷ ಪಿ.ಜೆ. ಕುರಿಯನ್ ಅನುಮತಿ ನೀಡಲಿಲ್ಲ.
ಉತ್ತರಪ್ರದೇಶದಲ್ಲಿ ಮತಯಂತ್ರಗಳಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಗುಡುಗಿದರಲ್ಲದೆ, ಬಿಜೆಪಿ ವಂಚನೆ ನಡೆಸಿದೆ ಎಂದು ಹೇಳಿದರು. ಅದೇವೇಳೆ ಈ ವಿಷಯವನ್ನು ಚುನಾವಣಾ ಅಯೋಗದ ಮುಂದೆ ಪ್ರಸ್ತಾಪಿಸಬೇಕು ಎಂದು ಬಿಜೆಪಿ ಪುನರುಚ್ಚರಿಸಿದೆ.







