ಶಿಕ್ಷಣ ಹಕ್ಕು ಕಾಯಿದೆ: ಅವಧಿ ವಿಸ್ತರಣೆ
ಮಂಗಳೂರು, ಎ. 6: 201718ನೆ ಸಾಲಿನ ಶಿಕ್ಷಣ ಹಕ್ಕು ಕಾಯಿದೆಯಡಿ ಅಲ್ಫಸಂಖ್ಯಾತವಲ್ಲದ ಶಾಲೆಗಳಲ್ಲಿ ಪ್ರವೇಶ ಕೋರಿ ಅನ್‌ಲೈನ್ ಮೂಲಕ ಸಲ್ಲಿಕೆಯಾಗುತ್ತಿರುವ ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ಮಾ. 31 ಆಗಿತ್ತು. ಅರ್ಜಿ ಸಲ್ಲಿಸುವ ಗಡುವನ್ನು ವಿಸ್ತರಿಸಲು ಜನಪ್ರತಿನಿಧಿಗಳು, ಪೋಷಕರು ಮತ್ತು ಹಲವು ಸಂಘಸಂಸ್ಥೆಗಳು ಮನವಿ ಮಾಡಿದ ಮೇರೆಗೆ, ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಎ.10ರವರೆಗೆ ವಿಸ್ತರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟೆಯಲ್ಲಿ ತಿಳಿಸಿದ್ದಾರೆ.ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಮಸೀದಿ, ಮದ್ರಸಗಳಲ್ಲಿ ಶುಕ್ರವಾರ ಜುಮಾ ನಮಾಝಿನ ನಂತರ ಕಡ್ಡಾಯವಾಗಿ ಈ ವಿಷಯದ ಬಗ್ಗೆ ಮಸೀದಿಯ ಇಮಾಮಾರು ತಮ್ಮ ಮೊಹಲ್ಲಾದಲ್ಲಿರುವ ಪ್ರತಿಯೊಂದು ಜಮಾಅತಿನ ಸದಸ್ಯರಿಗೆ ಈ ಬಗ್ಗೆ ವಿವರವಾದ ಮಾಹಿತಿ ನೀಡಬೇಕೆಂದು ಜಿಲ್ಲಾ ವಕ್ಫ್ ಕಚೇರಿಯ ಪ್ರಕಟನೆೆ ತಿಳಿಸಿದೆ.
Next Story





