ಪೊಲೀಸ್ ದೌರ್ಜನ್ಯ: ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಖಂಡನೆ
ಬಂಟ್ವಾಳ, ಎ. 6: ಅಹ್ಮದ್ ಖುರೇಷಿಯನ್ನು ಆರು ದಿನ ಅಕ್ರಮ ಬಂಧನದಲ್ಲಿಟ್ಟು ಮೂತ್ರಪಿಂಡಗಳು ವಿಫಲವಾಗುವವರೆಗೆ ಚಿತ್ರಹಿಂಸೆ ನೀಡಿರುವ ಹಾಗೂ ಪ್ರತಿಭಟನಕಾರರ ಮೇಲೆ ಲಾಠಿ ಬೀಸಿದ ಪೊಲೀಸರ ಕ್ರಮವನ್ನು ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ ತೀವ್ರವಾಗಿ ಖಂಡಿಸಿದ್ದಾರೆ. ಕರಾವಳಿಯಲ್ಲಿ ಪೊಲೀಸರಿಂದ ಮುಸ್ಲಿಮ್ ಯುವಕರ ಮೇಲಾಗುತ್ತಿರುವ ದೌರ್ಜನ್ಯಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಗಮನಕ್ಕೆ ತರಲಾಗಿದೆ. ಅಹ್ಮದ್ ಖುರೇಷಿ ಪ್ರಕರಣವನ್ನು ಉನ್ನತ ತನಿಖೆಗೆ ಒಳಪಡಿಸಿ ತಪ್ಪಿತಸ್ಥ ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪಕ್ಷದಿಂದ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
Next Story





