ಅಬುಧಾಬಿ: ಮತ್ತೆ ಭಾರತೀಯ ಮಹಿಳೆಗೆ ಒಲಿದ ಬಿಗ್ ಟಿಕೆಟ್
ಬಹುಮಾನ ಮೊತ್ತ ಎಷ್ಟು ಕೋಟಿ ರೂ. ಗೊತ್ತೇ ?

ಅಬುಧಾಬಿ,ಎ.6: ಅಬುಧಾಬಿಯ ಬಿಗ್ ಟಿಕೆಟ್ ಅದೃಷ್ಟ ಮತ್ತೊಮ್ಮೆ ಕೇರಳದ ಮಹಿಳೆಗೆ ಒಲಿದು ಬಂದಿದೆ. ಬುಧವಾರ ಬೆಳಗ್ಗೆ ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಚೀಟಿಎತ್ತುವ ಕಾರ್ಯಕ್ರಮದಲ್ಲಿ ಕೋಝಿಕ್ಕೋಡ್‌ನ ಡಾ. ನಿಷಿತ್ ರಾಧಾ ಕೃಷ್ಣ ಪಿಳ್ಳೆ ಜಯಶಾಲಿಯಾಗಿದ್ದಾರೆ. ಇವರಿಗೆ ಹತ್ತು ಲಕ್ಷ ದಿರ್ಹಂ ಸಿಗಲಿದೆ(ಸುಮಾರು 17.60 ಕೋಟಿ ರೂಪಾಯಿ).
ಮಾರ್ಚ್ ಐದಕ್ಕೆ ನಡೆದಿದ್ದ ಬಿಗ್ ಟಿಕೆಟ್‌ನಲ್ಲಿ ಕೇರಳದವರೇ ಆದ ಶ್ರೀರಾಜ್ ಕೃಷ್ಣನ್ ಏಳು ಲಕ್ಷ ದಿರ್ಹಂ ಗೆದ್ದಿದ್ದರು. ಡಾ. ನಿಷಿತ್ ರಾಧಾಕೃಷ್ಣ ಪಿಳ್ಳೆ ಯುಎಇಯಲ್ಲಿ ಎರಡು ವರ್ಷಗಳಿಂದ ಮಕ್ಕಳ ತಜ್ಞೆ ಆಗಿ ಕೆಲಸಮಾಡುತ್ತಿದ್ದಾರೆ. ಈಗ ಫೆಲೊಶಿಪ್ ಪಡೆದು ಅಮೆರಿಕದಲ್ಲಿದ್ದಾರೆ. ಇವರ ಪತಿ ಇವರ ಹೆಸರಿನಲ್ಲಿ ಆನ್‌ಲೈನ್ ಅದೃಷ್ಟ ಯೋಜನೆಯ ಟಿಕೆಟ್ ಖರೀದಿಸಿದ್ದರು.
Next Story





