ಪೊಲೀಸ್ ದೌರ್ಜನ್ಯ, ಪೊಲೀಸ್ ಮೇಲಿನ ಹಲ್ಲೆಗೆ ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್
ಮಂಗಳೂರು, ಎ.6: ಮಂಗಳೂರು ಸಿಸಿಬಿ ಪೊಲೀಸರು ಮುಹಮ್ಮದ್ ಖುರೇಷಿ ಮೇಲೆ ನಡೆಸಿದ್ದಾರೆ ಎಂದು ಹೇಳಲಾಗಿರುವ ದೌರ್ಜನ್ಯವನ್ನು ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಖಂಡಿಸಿದ್ದಾರೆ.
ಪೊಲೀಸರು 1 ವಾರಗಳ ಕಾಲ ಖುರೇಷಿಯನ್ನು ಕೂಡಿ ಹಾಕಿ ದೌರ್ಜನ್ಯ ಎಸಗಿದ ಕಾರಣ ಆತನ 2 ಕಿಡ್ನಿಯೂ ನಿಷ್ಕ್ರಿಯವಾಗಿದೆ ಎಂದು ತಿಳಿದು ಬಂದಿದೆ . ಈ ಮಧ್ಯೆ ನ್ಯಾಯ ಕೇಳಿ ಧರಣಿ ನಡೆಸಿದ ಪಿಎಫ್‌ಐ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ಎಸಗಿರುವುದು ಖಂಡನೀಯ. ತಪ್ಪಿತಸ್ಥ ಪೊಲೀಸರ ಮೇಲೆ ಕಾನೂನು ಕ್ರಮ ಜರಗಿಸಬೇಕು ಮತುತಿ ದೌರ್ಜನ್ಯಕ್ಕೀಡಾದ ಅಹ್ಮದ್ ಖುರೇಷಿಗೆ ಪರಿಹಾರ ನೀಡಬೇಕು ಎಂದು ಮುಹಮ್ಮದ್ ಅಲಿ ಉಚ್ಚಿಲ್ ಆಗ್ರಹಿಸಿದ್ದಾರೆ.
ಬುಧವಾರ ಮುಂಜಾನೆ ಕರ್ತವ್ಯ ನಿರತ ಎಎಸ್ಸೈ ಐತಪ್ಪ ಮೂಲ್ಯರಿಗೆ ದುಷ್ಕರ್ಮಿಗಳು ನಡೆಸಿರುವ ಹಲ್ಲೆ ಕೃತ್ಯವನ್ನು ಮುಹಮ್ಮದ್ ಅಲಿ ಉಚ್ಚಿಲ್ ಖಂಡಿಸಿದ್ದಾರೆ. ಇದು ಅಕ್ಷಮ್ಯವಾಗಿದ್ದು ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮಾಡಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುಹಮ್ಮದ್ ಅಲಿ ಉಚ್ಚಿಲ್ ಆಗ್ರಹಿಸಿದ್ದಾರೆ.





