ಬಿಗ್‌ಬಾಸ್‌ನ 'ಒಳ್ಳೆ ಹುಡುಗ' ಖ್ಯಾತಿಯ ಪ್ರಥಮ್ ವಿರುದ್ಧ ಸ್ವಯಂಪ್ರೇರಿತ ದೂರು
ಬೆಂಗಳೂರು, ಎ.6: ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕನ್ನಡದ ಬಿಗ್‌ಬಾಸ್ ವಿಜೇತ ಪ್ರಥಮ್ ವಿರುದ್ಧ ಇಲ್ಲಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬುಧವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಿದ್ದೆ ಮಾತ್ರೆ ಸೇವಿಸಿದ್ದ ವಿಡಿಯೋವನ್ನು ಪ್ರಥಮ್ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಈ ಸಂಬಂಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ನಿದ್ದೆ ಮಾತ್ರೆ ಸೇವಿಸಿದ್ದ ಪ್ರಥಮ್ ಗೆ ಬುಧವಾರ ನಗರದ ನಾಗರಬಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗಿತ್ತು. ರಾತ್ರಿ ಆಸ್ಪತ್ರೆಯ ಸಿಬ್ಬಂದಿ ಎದುರೇ ಅರೆನಗ್ನವಾಗಿ ಓಡಾಡಿದ್ದರಿಂದ, ಆತನನ್ನು ಸಿಮ್ಹಾನ್ಸ್‌ಗೆ ರವಾನಿಸಲಾಗಿತ್ತು. ಗುರುವಾರ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಪ್ರಥಮ್ ಚಿಕಿತ್ಸೆ ಪಡೆಯುತ್ತಿರುವುದಾಗಿ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
Next Story