ವಧು ಸಿಗಲಿಲ್ಲ, ರೋಬಟನ್ನೇ ಮದುವೆಯಾದ!

ಬೀಜಿಂಗ್, ಎ. 6: ಚೀನಾದ 31 ವರ್ಷದ ಇಂಜಿನಿಯರ್ ಒಬ್ಬರಿಗೆ ಮದುವೆಯಾಗಲು ವಧುವೇ ಸಿಗಲಿಲ್ಲ. ಆದರೆ, ಮದುವೆಯಾಗಬೇಕೆನ್ನುವ ಒತ್ತಡ ಅವರ ಮೇಲೆ ದಿನೇ ದಿನೇ ಹೆಚ್ಚುತ್ತಿತ್ತು. ಈ ಒತ್ತಡವನ್ನು ತಡೆದುಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ.
ಆಗ ಅವರು ಕಂಡುಕೊಂಡ ಉಪಾಯವೇನು ಗೊತ್ತಾ? ಯಂತ್ರ ಮಹಿಳೆಯೊಬ್ಬರನ್ನು ಅವರೇ ಸೃಷ್ಟಿಸಿದರು ಹಾಗೂ ‘ಅವಳ’ನ್ನೇ ಮದುವೆಯಾದರು!
ಝೇಂಗ್ ಜಿಯಾಜಿಯ ಎನ್ನುವ ಕೃತಕ ಬುದ್ಧಿಮತ್ತೆ ಪರಿಣತ ಇಂಜಿನಿಯರ್ ಝೆಜಿಯಾಂಗ್ ಪ್ರಾಂತದ ಹಂಗ್ಝೂನಲ್ಲಿ ರೋಬಟ್‌ಗಳನ್ನು ತಯಾರಿಸುವ ಕೆಲಸ ಮಾಡುತ್ತಾರೆ.
ಅವರು ನಿರ್ಮಿಸಿದ ಮಹಿಳಾ ರೋಬಟ್ ‘ಯಿಂಗ್‌ಯಿಂಗ್’ ಚೀನೀ ಅಕ್ಷರಗಳು ಮತ್ತು ಚಿತ್ರಗಳನ್ನು ಗುರುತಿಸಬಲ್ಲದು ಹಾಗೂ ಕೆಲವು ಸರಳ ಪದಗಳನ್ನೂ ಮಾತನಾಡಬಲ್ಲದು.
ಕಳೆದ ಶುಕ್ರವಾರ ನಡೆದ ಸರಳ ಸಮಾರಂಭವೊಂದರಲ್ಲಿ ಝೆಂಗ್ ಅವರು ಯಿಂಗ್‌ಯಿಂಗ್‌ನ್ನು ಮದುವೆಯಾದರು ಎಂದು ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ವರದಿ ಮಾಡಿದೆ.
Next Story





