ಪ್ರವೀಣ್ ಪೂಜಾರಿ ಹತ್ಯೆ: ಇಬ್ಬರಿಗೆ ಜಾಮೀನು

ಉಡುಪಿ, ಎ.6: ಕೆಂಜೂರಿನ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳಿಗೆ ರಾಜ್ಯ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಸಂತೆಕಟ್ಟೆ ಕಳ್ತೂರಿನ ಶ್ರೀಕಾಂತ್ ಕುಲಾಲ್ (20) ಹಾಗೂ ಮೂರನೇ ಆರೋಪಿ ಶಿವಪುರ ಗ್ರಾಮ ಕೆರೆಬೆಟ್ಟಿನ ಸುದೀಪ್ ಕುಲಾಲ್ (24) ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ.
ಕಳೆದ ವರ್ಷದ ಆ.17ರಂದು ಪ್ರವೀಣ್ ಪೂಜಾರಿಯನ್ನು ದನ ಸಾಗಾಟ ಮಾಡುತ್ತಿದ್ದ ಕಾರಣಕ್ಕೆ ಅಮಾನುಷವಾಗಿ ಥಳಿಸಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ 22 ಮಂದಿ ಆರೋಪಿಗಳನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದರು. ಹೆಚ್ಚಿನ ಆರೋಪಿಗಳಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ನೀಡಿ ಬಿಡುಗಡೆಗೊಳಿಸಿತ್ತು.
Next Story





