ಕಾರು ಢಿಕ್ಕಿ: ಪಾದಾಚಾರಿ ಮೃತ್ಯು

ಕುಂದಾಪುರ, ಎ.6: ರಸ್ತೆ ದಾಟುತಿದ್ದ ಪಾದಾಚಾರಿಯೊಬ್ಬರಿಗೆ ವೇಗವಾದಿ ಧಾವಿಸಿ ಬಂದ ಕಾರು ಢಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬುಧವಾರ ಸಂಜೆ ಕುಂಭಾಶಿ ಅಟೋರಿಕ್ಷಾ ನಿಲ್ದಾಣ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಮೃತರನ್ನು ರಾಜು ಪೂಜಾರಿ ಎಂದು ಗುರುತಿಸಲಾಗಿದೆ. ಅವರು ಸಂಜೆ 6:45ರ ಸುಮಾರಿಗೆ ಹೆದ್ದಾರಿ ದಾಟಿ ಮತ್ತೊಂದು ತುದಿಗೆ ತಲುಪಿದಾಗ, ಕುಂದಾಪುರ ಕಡೆಯಿಂದ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದ ರಾಘವೇಂದ್ರ ಪೂಜಾರಿ ಎಂಬವರು ನೇರವಾಗಿ ಢಿಕ್ಕಿ ಹೊಡೆದಿದ್ದರು. ತಲೆ, ಎದೆಗೆ ಹಾಗೂ ಮೈ ಕೈಗೆ ತೀವ್ರವಾಗಿ ಗಾಯಗೊಂಡ ರಾಜು ಪೂಜಾರಿ ಅವರನ್ನು ಮೊದಲು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ಬಳಿಕ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ರಾತ್ರಿ 11 ಗಂಟೆ ಸುಮಾರಿಗೆ ಮೃತಪಟ್ಟರು.
ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





