ಅಡಿಕೆ ಕಳವುಗೈದು ಕಾರನ್ನು ಬಿಟ್ಟು ಪರಾರಿಯಾದ ಕಳ್ಳರು !
ಕಡಬ, ಎ.6. ಠಾಣಾ ವ್ಯಾಪ್ತಿಯ ನೆಟ್ಟಣ ಎಂಬಲ್ಲಿ ಸತ್ತಾರ್ ಎಂಬವರಿಗೆ ಸೇರಿದ ಅಡಿಕೆ ಗೋದಾಮಿನಿಂದ ಅಡಿಕೆಯನ್ನು ಕದ್ದೊಯ್ದಿರುವ ಘಟನೆ ಗುರುವಾರ ಬೆಳಗ್ಗಿನ ಜಾವ ನಡೆದಿದೆ.
ಮಾರುತಿ 800 ಕಾರಿನಲ್ಲಿ ಆಗಮಿಸಿದ್ದ ಕಳ್ಳರು ಗೋದಾಮಿನ ಬಾಗಿಲನ್ನು ಮುರಿಯುವ ಶಬ್ದ ಕೇಳಿ ಸತ್ತಾರ್ ರವರು ಆಗಮಿಸಿದಾಗ ಎರಡು ಚೀಲ ಅಡಿಕೆಯೊಂದಿಗೆ ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ.
ಈ ಹಿಂದೆ ಕೂಡಾ ಇದೇ ಗೋದಾಮಿಗೆ ನುಗ್ಗಿದ್ದ ಕಳ್ಳರು ಅಪಾರ ಪ್ರಮಾಣದ ಅಡಿಕೆಯನ್ನು ಕದ್ದೊಯ್ಯುವಲ್ಲಿ ಯಶಸ್ವಿಯಾಗಿದ್ದರು. ಇದುವರೆಗೂ ಕಳ್ಳರನ್ನು ಪತ್ತೆ ಹಚ್ಚದೆ ಇರುವುದರಿಂದ ಎರಡನೇ ಬಾರಿಯೂ ಕಳ್ಳರು ತಮ್ಮ ಕೈಚಳಕವನ್ನು ತೋರಿದ್ದಾರೆ.
ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





