Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ನ್ಯಾಯಾಲಯದ ಮೊರೆ ಹೋದ ‘ಮಂಗಳಂ’ ಚಾನೆಲ್...

ನ್ಯಾಯಾಲಯದ ಮೊರೆ ಹೋದ ‘ಮಂಗಳಂ’ ಚಾನೆಲ್ ಪತ್ರಕರ್ತೆ ಶಶೀಂದ್ರನ್ ಹಲವು ಬಾರಿ ಪೀಡಿಸಿದ್ದರು: ಪತ್ರಕರ್ತೆ ಆರೋಪ

ವಾರ್ತಾಭಾರತಿವಾರ್ತಾಭಾರತಿ6 April 2017 10:43 PM IST
share
ನ್ಯಾಯಾಲಯದ ಮೊರೆ ಹೋದ ‘ಮಂಗಳಂ’ ಚಾನೆಲ್ ಪತ್ರಕರ್ತೆ ಶಶೀಂದ್ರನ್ ಹಲವು ಬಾರಿ ಪೀಡಿಸಿದ್ದರು: ಪತ್ರಕರ್ತೆ ಆರೋಪ

ತಿರುವನಂತಪುರಂ, ಎ.6: ಕೇರಳದ ಸಚಿವ ಶಶೀಂದ್ರನ್ ಅವರನ್ನು ‘ಮೋಹದ ಬಲೆ’ (ಹನಿ ಟ್ರಾಪಿಂಗ್) ಗೆ ಕೆಡವಿದ ಆರೋಪ ಎದುರಿಸುತ್ತಿರುವ ಮಹಿಳಾ ಪತ್ರಕರ್ತೆ ಇದೀಗ ನ್ಯಾಯಾಲಯದ ಮೊರೆಹೋಗಿದ್ದು, ಸಚಿವರು ತನ್ನನ್ನು ಹಲವು ಬಾರಿ ಪೀಡಿಸಿದ್ದು ಧಮಕಿಯನ್ನೂ ನೀಡಿದ್ದರು ಎಂದು ದೂರಿದ್ದಾರೆ.

ಸಚಿವರ ವಿರುದ್ಧ ದೂರು ದಾಖಲಿಸಲು ತಾನು ಮುಂದಾದಾಗ ತನ್ನ ಉದ್ಯೋಗದಾತ, ಮಂಗಳಂ ಟಿವಿ ಚಾನೆಲ್‌ನ ಸಿಇಒ ಹಾಗೆ ಮಾಡಿದರೆ ನೂತನವಾಗಿ ಆರಂಭಗೊಂಡಿರುವ ಟಿವಿ ಚಾನೆಲ್‌ಗೆ ತೊಂದರೆಯಾಗುತ್ತದೆ ಎಂದು ತನ್ನನ್ನು ತಡೆದಿದ್ದರು ಎಂದೂ ಅವರು ದೂರಿನಲ್ಲಿ ತಿಳಿಸಿದ್ದಾರೆ. ಮಂಗಳಂ ಟಿವಿಯ ತಿರುವನಂತಪುರಂ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪತ್ರಕರ್ತೆ ಬುಧವಾರ ಪ್ರಧಾನ ನ್ಯಾಯಿಕ ದಂಡಾಧಿಕಾರಿಯವರ ಕೋರ್ಟ್‌ನಲ್ಲಿ ದೂರು ಸಲ್ಲಿಸಿದ್ದಾರೆ.

 ಕೋರ್ಟ್‌ಗೆ ಸಲ್ಲಿಸಿರುವ ಐದು ಪುಟಗಳ ವಿವರಣೆಯಲ್ಲಿ ಈಕೆ ಪ್ರಕರಣದ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಟಿವಿ ಚಾನೆಲ್‌ನ ಸಿಬ್ಬಂದಿಗಳೊಂದಿಗೆ ಸಚಿವರ ಮನೆಗೆ ತೆರಳಿದ್ದು ನಾನೊಬ್ಬಳೇ ಒಳಗೆ ತೆರಳಿದ್ದೆ. ಆಗ ಶಶೀಂದ್ರನ್ ಕುರ್ಚಿಯೊಂದರಲ್ಲಿ ಕುಳಿತಿದ್ದು ತನ್ನ ಕಾಲನ್ನು ಎದುರಿಗಿದ್ದ ಮೇಜಿನ ಮೇಲಿಟ್ಟಿದ್ದರು. ನಾನು ಅವರೆದುರು ಕುಳಿತಾಗ ನನ್ನನ್ನೇ ದಿಟ್ಟಿಸಿ ನೋಡುತ್ತಾ- ನೀನು ತುಂಬಾ ಸುಂದರವಾಗಿದ್ದೀಯ. ನಿನ್ನ ವಯಸ್ಸೆಷ್ಟು ಎಂದು ಕೇಳಿದರು. ನಾನು 29 ವರ್ಷ ಎಂದುತ್ತರಿಸಿದಾಗ, ತನ್ನೊಡನೆ ವಿದೇಶ ಪ್ರವಾಸಕ್ಕೆ ಬರುವಂತೆ ಆಹ್ವಾನಿಸಿದರು. ಶ್ರೀಲಂಕಾದ ಬಗ್ಗೆ ಲೇಖನ ಸಿದ್ದಪಡಿಸಬಹುದು ಎಂದು ಆಮಿಷವೊಡ್ಡಿದರು.

 ಆದರೆ ನಾನು ಬಂದಿರುವುದು ಕೆಎಸ್‌ಆರ್‌ಟಿಸಿ ಲೇಖನದ ಹಿನ್ನೆಲೆಯಲ್ಲಿ ನಿಮ್ಮ ಸಂದರ್ಶನಕ್ಕಾಗಿ ಎಂದು ನಾನು ಹೇಳಿದಾಗ , ಪರವಾಗಿಲ್ಲ ನಾನು ಕಾಯುತ್ತೇನೆ ಎಂದವರು ಹೇಳಿದರು. ಆ ಬಳಿಕ ಎದ್ದು ಬಂದ ಸಚಿವರು, ತನ್ನ ಹೆಗಲಿನ ಮೇಲೆ ಕೈಯಿಟ್ಟು , ಸುಂದರ ಹುಡುಗಿ, ಏನು ಬೇಕಾದರೂ ಕೇಳು ಎಂದು ಹೇಳಿರುವುದಾಗಿ ಪತ್ರಕರ್ತೆ ದೂರಿನಲ್ಲಿ ವಿವರಿಸಿದ್ದಾರೆ. ಆ ಬಳಿಕ ಹಲವಾರು ಬಾರಿ ದೂರವಾಣಿ ಕೆ ಮಾಡಿ ಅಸಭ್ಯವಾಗಿ ಮಾತನಾಡಿದ್ದಾರೆ.

     ಈ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದಾಗ ಚಾನೆಲ್‌ನ ಸಿಇಒ ಹಾಗೆ ಮಾಡದಂತೆ ತಡೆದರು. ತಮ್ಮ ಚಾನೆಲ್ ಆಗಷ್ಟೇ ಆರಂಭವಾಗಿರುವ ಕಾರಣ ಹಾಗೆ ಮಾಡಿದರೆ ಸಮಸ್ಯೆಯಾಗುತ್ತದೆ.ವಿಷಯದ ಬಗ್ಗೆ ತಾನು ಸಚಿವರೊಂದಿಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು. ಬಳಿಕ ಸಚಿವರಿಗೆ ದೂರವಾಣಿ ಕರೆ ಮಾಡಿ- ಪೊಲೀಸ್ ದೂರು ನೀಡುವುದಾಗಿ ತಿಳಿಸಿದ್ದೆ. ಆಗ ಕ್ಷಮಾಪಣೆ ಕೇಳಿದ ಸಚಿವರು, ದೂರು ನೀಡದಂತೆ ಕೋರಿಕೊಂಡರು. ಆದರೆ ಕೆಲ ದಿನದ ಬಳಿಕ ಮತ್ತೆ ತಮ್ಮ ಚಾಳಿ ಮುಂದುವರಿಸಿ ದೂರವಾಣಿ ಕರೆ ಮಾಡಿ ಅಸಭ್ಯವಾಗಿ ಮಾತು ಮುಂದುವರಿಸಿದರು. ನಾನು ಈ ಮಾುಗಳನ್ನು ರೆಕಾರ್ಡ್ ಮಾಡಿಕೊಂಡೆ.

ಸಚಿವರ ಅಶ್ಲೀಲ ಸಂಭಾಷಣೆ ಬಗ್ಗೆ ಸಹೋದ್ಯೋಗಿಗಳಿಗೆ ತಿಳಿಸಿ, ರೆಕಾರ್ಡ್ ಮಾಡಿಕೊಂಡಿದ್ದ ಸಂಭಾಷಣೆ ನೀಡಿದೆ. ಈ ಸಂಭಾಷಣೆಯನ್ನು ಚಾನೆಲ್‌ನಲ್ಲಿ ಪ್ರಸಾರ ಮಾಡುವಾಗ ನನ್ನನ್ನು ನೇರಪ್ರಸಾರದಲ್ಲಿ ತೋರಿಸಬೇಕು ಎಂದು ಕೋರಿಕೊಂಡಿದ್ದೆ. ಆದರೆ ನನ್ನ ಅನುಮತಿ ಪಡೆಯದೆ ಸಂಭಾಷಣೆಯನ್ನು ಪ್ರಸಾರ ಮಾಡಲಾಗಿದೆ ಎಂದು ಪತ್ರಕರ್ತೆ ಆರೋಪಿಸಿದ್ದಾರೆ.

  ತನ್ನ ಜೀವ ಅಪಾಯದಲ್ಲಿದ್ದು ರಕ್ಷಣೆಯ ಅಗತ್ಯವಿದೆ. ಮನೆಯಿಂದ ಹೊರಗೆ ಬರಲೂ ಆಗುತ್ತಿಲ್ಲ. ಆದ್ದರಿಂದಲೇ ದೂರು ದಾಖಲಿಸಲು ತಡವಾಯಿತು. ಸಚಿವರು ಪ್ರಭಾವಿಗಳಾಗಿರುವ ಕಾರಣ ಪೊಲೀಸ್ ದೂರು ಸಲ್ಲಿಸಲು ತಾನು ಬಯಸುತ್ತಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X