ಸೀತಾರಾಮ ಅಡಿಗಳ್ ನಿಧನ
ಭಟ್ಕಳ, ಎ.6: ಮಹಾ ಮುರುಡೇಶ್ವರ ದೇವರ ಪ್ರಧಾನ ಅರ್ಚಕ ವೇ. ಮೂ. ಸೀತಾರಾಮ ಶಿವರಾಮ ಅಡಿಗಳ್ (83) ಅವರು ವಯೋಸಹಜ ಅನಾರೋಗ್ಯದಿಂದ ತಮ್ಮ ಸ್ವಗೃಹದಲ್ಲಿ ಎ.4ರಂದು ಸಂಜೆ ನಿಧನರಾಗಿದ್ದಾರೆ. ಹಲವಾರು ವರ್ಷಗಳಿಂದ ಮಹಾ ಮುರುಡೇಶ್ವರ ದೇವರ ಪ್ರಧಾನ ಅರ್ಚಕರಾಗಿ, ತಂತ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಆಗಮ ಶಾಸ್ತ್ರದಲ್ಲಿ ಪ್ರಾವೀಣ್ಯತೆಯನ್ನು ಹೊಂದಿದ್ದರು. ಮುರುಡೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಆರ್.ಎನ್. ಶೆಟ್ಟಿಯವರ ಆಪ್ತರಲ್ಲಿ ಒಬ್ಬರಾಗಿದ್ದರು. ಪುತ್ರ ಶಿವರಾಮ ಅಡಿಗಳ್ ಸಹಿತ ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
Next Story





